ಶುಂಠಿ ಬರ್ಫಿ

ಬೇಕಾಗುವ ಸಾಮಾಗ್ರಿ
ಅರ್ಧ ಕಪ್ ಮೈದಾ ಹಿಟ್ಟು
ಅರ್ಧ ಕಪ್ ತುಪ್ಪ
ಒಂದು ಕಪ್ ಸಕ್ಕರೆ
ಒಂದು ಕಪ್ ಶುಂಠಿ ರಸ
ಕಾಲು ಕಪ್ ಖೋವಾ
ತಯಾರಿಸುವ ವಿಧಾನ :
ಬಾಣಲೆಯನ್ನು ಒಲೆಯ ಮೇಲ್ಲಿಟ್ಟು ತುಪ್ಪ ಹಾಕಿ ಬಿಸಿಯಾದಾಗ ಮೈದಾ ಹಿಟ್ಟು ಹಾಕಿ ಪರಿಮಳ ಬರುವ ತನಕ ಕೆಂಪಗೆ ಹುರಿಯಿರಿ . ಶುಂಠಿ ಚೆನ್ನಾಗಿ ತೊಳೆದು ಸಿಪ್ಪೆ ತೆಗೆದು ತುರಿದು ರುಬ್ಬಿ . ಸಕ್ಕರೆಗೆ ಕೊಂಚ ನೀರು ಸೇರಿಸಿ ಒಲೆಯ ಮೇಲಿಟ್ಟು ಸಕ್ಕರೆ ಪಾಕ ಮಾಡಿ . ಸಕ್ಕರೆ ಪಾಕವಾದ ಮೇಲೆ ರುಬ್ಬಿದ ಶುಠಿ ರಸ ಹಾಕಿ ಸ್ವಲ್ಪ ತಿರುವಿ ಅದಕ್ಕೆ ಹುರಿದ ಮೈದಾ ಹಿಟ್ಟು ಮತ್ತು ಖೋವಾ ಹಾಕಿ ತಿರುವಿ . ಬಾಣಲೆಯಿಂದ ಬದಿ ಬಿಡುತ್ತಾ ಬಂದ ಮೇಲೆ ಒಲೆಯಿಂದ ಕೆಳಗಿಳಿಸಿ , ತುಪ್ಪ ಸವರಿದ ತಟ್ಟೆಯಲ್ಲಿ ಹರವಿ. ತಣಿದ ಮೇಲೆ ಬೇಕಾದ ಆಕಾರಕ್ಕೆ ಕತ್ತರಿಸಿ .