
ಶುಂಠಿಯಲ್ಲಿ ಧಾರಾಳ ರೋಗ ನಿರೋಧಕ ಶಕ್ತಿಇದೆ. ಇದು ದೇಹದ ರೋಗವನ್ನು ತಡೆಗಟ್ಟುವ ಸಾಮರ್ಥ್ಯವನ್ನು ಹೆಚ್ಚಿಸುತ್ತದೆ. ಜೀರ್ಣ ಶಕ್ತಿಯನ್ನು ಹೆಚ್ಚಿಸಲು ಶುಂಠಿ ರಸ ಬೆರೆಸಿದ ನೀರನ್ನು ಉಪಯೋಗಿಸುವುದು ಒಳ್ಳೆಯದು. ಮಲಬದ್ಧತೆಯಿಂದ ಆರಂಭಿಸಿ ಹೊಟ್ಟೆ ತೊಳೆಸುವುದರ ತನಕ ಎಲ್ಲ ವಿಧದ ಹೊಟ್ಟೆಯ ಅನಾರೋಗ್ಯಕ್ಕೆ ಶುಂಠಿ ಒಳ್ಳೆಯ ಔಷಧ.
ಗಂಟುಗಳಲ್ಲಿ ನೋವು ಅನುಭವಿಸುವವರಿಗೆ ವಿಶೇಷವಾಗಿ ಆರ್ಥೈಟಿಸ್‌ನಂತಹ ವಾತ ರೋಗಗಳಿಗೆ ನೋವು ನಿವಾರಕದಂತೆ ಶುಂಠಿ ಕೆಲಸ ಮಾಡುತ್ತದೆ. ಮಾಂಸ ಖಂಡಗಳ ಚಲನೆಗೂ ಸಹಾಯಕವಾಗುತ್ತದೆ.
ಋತುಸ್ರಾವದ ಸಂದರ್ಭದಲ್ಲಿ ಹೆಣ್ಣು ಮಕ್ಕಳು ಅನುಭವಿಸುವ ಹೊಟ್ಟೆ ನೋವಿಗೆ ಶುಂಠಿಯ ರಸ ಕುಡಿಯುವುದು ಒಳ್ಳೆಯದು. ಮುಟ್ಟಿನ ದಿನಗಳ ಮೊದಲೇ ಸಣ್ಣಪ್ರಮಾಣದಲ್ಲಿ ಶುಂಠಿಯ ಸೇವನೆ ಆರಂಭಿಸಿದರೆ ಮುಟ್ಟಿನ ದಿನಗಳು ವೇದನೆ ಇಲ್ಲದೆ ಮುಗಿದು ಬಿಡುತ್ತದೆ.
ಗ್ಯಾಸ್‌ನ ತೊಂದರೆಯಿಂದ ಹೊಟ್ಟೆಯುಬ್ಬರಿಸುವುದು ಹಲವು ರೀತಿಯ ತೊಂದರೆಗಳಿಗೆ ಕಾರಣವಾಗುತ್ತದೆ. ಇಂತಹ ಸಂದರ್ಭಗಳಲ್ಲಿ ಒಂದು ತುಂಡು ಹಸಿಶುಂಠಿಯನ್ನು ಬಾಯಿಯಲ್ಲಿ ಹಾಕಿ ಜಗಿಯುವುದರಿಂದ ಗ್ಯಾಸ್ ತೊಂದರೆ ಶಮನವಾಗುತ್ತದೆ.
ಗರ್ಭಧಾರಣೆಯ ಸಂದರ್ಭದಲ್ಲಿ ವಾಕರಿಗೆ ಮತ್ತು ವಾಂತಿ ತುಂಬಾ ತೊಂದರೆ ನೀಡುತ್ತದೆ. ಇಂತಹ ಸಂದರ್ಭಗಳಲ್ಲಿ ಹಸಿ ಶುಂಠಿಯ ಸಣ್ಣ ತುಂಡು ಜಗಿದು ನುಂಗುವುದು ಅಥವಾ ಶುಂಠಿ ಚಹಾ ತಯಾರಿಸಿ ಕುಡಿಯುವುದು ಒಳ್ಳೆಯದು.
ಹಸಿವಿಲ್ಲದಿರುವವರಿಗೆ ಹಸಿ ಶುಂಠಿಯನ್ನು ಜಜಗಿದು ನುಂಗುವ ಮೂಲಕ ರುಚಿಯ ಗ್ರಂಥಿಗಳನ್ನು ಪುನಶ್ವೇತನಗೊಳಿಸಬಹುದು. ಈ ಮೂಲಕ ಆಹಾರದೊಂದಿಗಿನ ಅನಾಸಕ್ತಿಯನ್ನು ದೂರೀಕರಿಸಬಹುದು.