ಶೀಲ ಹಳ್ಳಿ ಸೇತುವೆ ಮುಳುಗಡೆ : ೫ ಗ್ರಾಮಗಳಿಗೆ ಜನ ಸಂಪರ್ಕ ಕಡಿತ

ಲಿಂಗಸುಗೂರು.ಜು.೧೭- ಮಹಾರಾಷ್ಟ್ರದಲ್ಲಿ ಭಾರಿ ಮಳೆಯ ಕಾರಣ ನಾರಾಯಣಪೂರ ಜಲಾಶಯಕ್ಕೆ ನೀರಿನ ಒಳಹರಿವಿನ ಪ್ರಮಾಣ ಹೆಚ್ಚಾಗುತ್ತಿದ್ದು ಜಲಾಶಯದಿಂದ ಕೃಷ್ಣಾ ನದಿಗೆ ೧.೬೮ ಲಕ್ಷ ಕ್ಯೂಸೆಕ್ ನೀರು ನದಿಗೆ ಹರಿಸಲಾಗುತ್ತಿದ್ದು ನದಿ ಪ್ರವಾಹದಿಂದ ಶೀಲಹಳ್ಳಿ ಸೇತುವೆ ಸಂಪೂರ್ಣ ಮುಳಗಡೆಯಾಗಿದ್ದು ನಡುಗಡೆ ಗ್ರಾಮಗಳಾದ ಯರಗೋಡಿ, ಹಂಚನಾಳ, ಮ್ಯಾದರಗಡ್ಡಿ ,ವಂಕಮ್ಮನ ಗಡ್ಡಿ ಕರಕಲಗಡ್ಡಿ ಗ್ರಾಮಗಳ ರಸ್ತೆ ಸಂಪರ್ಕ ಕಡಿತಗೊಂಡಿದ್ದು ಸಂಚಾರಕ್ಕೆ ತೊಂದರೆಯಾಗಿದೆ.
ನಾರಾಯಣಪೂರ ಆಣೆಕಟ್ಟ ಜಲಾಶಯದ ನೀರಿನ ಸಂಗ್ರಹ ಗರಿಷ್ಠ ಮಟ್ಟ ೪೯೨.೨೫ ಮೀಟರ ಇದ್ದು ಪ್ರಸ್ತುತ ಜಲಾಶಯಕ್ಕೆ ಆಲಮಟ್ಟಿಯಿಂದ ನೀರಿನೊಳ ಹರಿವು ೧.೫೦ ಲಕ್ಷ ಕ್ಯೂಸೆಕ ಮಾಧ್ಯಾಹ್ನ ೨ ಗಂಟೆಯವರೆಗೆ ಹೊರ ಹರಿವು ನದಿಗೆ ೧.೬೮ ಲಕ್ಷ ಕ್ಯೂಸೆಕ ಇದ್ದು ಇನ್ನು ನೀರಿನ ಒಳಹರಿವು ಹೆಚ್ಚಾಗಲಿದ್ದು ಪ್ರಸ್ತುತ ೨೩ಗೇಟಗಳ ಮುಖಾಂತರ ನೀರು ನದಿಗೆ ಹರಿಸಲಾಗುತ್ತಿದೆ.
ಶೀಲಹಳ್ಳಿಯ ಸೇತುವೆಯಿಂದಲಿಂಗಸಗೂರು ಪಟ್ಟಣಕ್ಕೆ ಬರಲು ಹತ್ತಿರವಾಗುತ್ತದೆ ಆದರೆ ಸದ್ಯ ನೀರು ಸೇತುವೆ ಮೇಲೆ ಹರಿಯುತ್ತಿರುವುದರಿಂದ ಮುಳುಗಡೆಯಾಗಿದ್ದು ಹಂಚಿನಾಳ, ಯರಗೋಡಿ ಯಳಗುಂದಿ, ಕಡದರಗಡ್ಡಿ ಜನರು ಜಲದುರ್ಗಮಾರ್ಗವಾಗಿ ಬರಬೇಕಾಗುತ್ತದೆ ಈಗಾಗಲೆ ಕರಕಲಗಡ್ಡಿ,ಮ್ಯಾದರಗಡ್ಡಿ ವೆಂಕಮ್ಮನಗಡ್ಡಿಗಳು ಸಂಪರ್ಕವನ್ನು ಕಳೆದುಕೊಂಡಿವೆ
ಸದರಿ ಗ್ರಾಮಗಳಿಗೆ ಈಗಾಗಲೇ ತಾಲೂಕಾಡಳಿತವು ಮುನ್ನೆಚ್ಚರಿಕೆಯ ಮಾಹಿತಿಗಳನ್ನು ನೀಡಲಾಗಿದ್ದು ಜನತೆ ಸುರಕ್ಷಿತ ಸ್ಥಳಕ್ಕೆ ಬರಲು ಸುಚನೆಗಳನ್ನು ನೀಡಲಾಗಿದೆ
ಬಸವಸಾಗರ ಜಲಾಶಯ ನೋಡಲು ಪ್ರವಾಸಿಗರು: ಬಸವದಾಗರದ ೨೩ ಗೇಟುಗಳನ್ನು ತೆಗೆದು ನದಿಗೆ ೧ ಲಕ್ಷದ ೬೮ ಸಾವಿರ ಕ್ಯೂಸೆಕ್ ನೀರನ್ನು ಹರಿಸಲಾಗುತ್ತಿದ್ದು, ಆಣೆಕಟ್ಟೆಯಿಂದ ದುಮ್ಮಿಕ್ಕುವ ನೀರಿನ ರುದ್ರನರ್ತನವನ್ನು ನೋಡಲು ಬಸವಸಾಗರಕ್ಕೆ ಪ್ರವಾಸಿಗರು ಬಂದು ಧುಮ್ಮಿಕ್ಕುವ ನೀರನ ರುದ್ರನರ್ತನವನ್ನು ಕಣ್ಣುತುಂಬಿಕೊಳ್ಳುತ್ತಿದ್ದಾರೆ.