ಶೀಲ ಶಂಕಿಸಿ ಪತ್ನಿ ಕೊಲೆ

ವಿಜಯಪುರ,ಫೆ.19:ಶೀಲ ಶಂಕಿಸಿ ಗಂಡನೊಬ್ಬ ತನ್ನ ಹೆಂಡತಿಯನ್ನು ಬರ್ಬರವಾಗಿ ಹತ್ಯೆ ಮಾಡಿದ ದಾರುಣ ಘಟನೆ ತಿಕೋಟಾ ತಾಲೂಕಿನ ಹುಬನೂರ ತಾಂಡಾ-2ರÀಲ್ಲಿ ಭಾನುವಾರ ಸಂಭವಿಸಿದೆ.
ರೇಷ್ಮಾ ರಾಠೋಡ (25) ಕೊಲೆಗೀಡಾದ ಗೃಹಿಣಿ.
ರೇಷ್ಮಾಳ ಗಂಡ ಅಶೋಕ ರಾಠೋಡ ಎಂಬಾತ ದಿನಾಲೂ ಸಾರಾಯಿ ಕುಡಿದು ಬಂದು ಜಗಳ ಮಾಡುತ್ತಿದ್ದ. ಗಂಡನ ಕಿರುಕುಳ ತಾಳದೆ ಬೇಸತ್ತು ತನ್ನ ತವರುಮನೆ ಹುಬನೂರಿಗೆ ಹೋಗಿದ್ದಳು. ಗಂಡ ರೇಷ್ಮಾಳ ತವರುಮನೆಗೆ ತೆರಳಿ ಜಗಳ ತಗೆದು ಸಲಕೆಯಿಂದ ಹೊಡೆದು ಕೊಲೆ ಮಾಡಿದ್ದಾನೆ.
ಆರೋಪಿ ಅಶೋಕ ಈತನು ಕಳೆದ 11 ವರ್ಷಗಳ ಹಿಂದೆ ರೇಷ್ಮಾಳ ಮದುವೆಯಾಗಿದ್ದ. ಕುಡಿದು ಬಂದು ಆಗಾಗ ಹೆಂಡತಿ ಜೊತೆಗೆ ಅಶೋಕ ಜಗಳ ತಗೆಯುತ್ತಿದ್ದ. ಪತ್ನಿ ಅನೈತಿಕ ಸಂಬಂಧ ಹೊಂದಿರುವ ಬಗ್ಗೆಯೂ ಶಂಕೆ ವ್ಯಕ್ತಪಡಿಸಿದ್ದ ಎನ್ನಲಾಗಿದೆ.
ತಿಕೋಟಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.