ಶೀಲ ಶಂಕಿಸಿ ಉಸಿರುಗಟ್ಟಿಸಿ ಪತ್ನಿ ಕೊಲೆಗೈದ ಪತಿ ಪರಾರಿ

ಬೆಂಗಳೂರು,ಜ.16- ತನ್ನ ಪತ್ನಿಯ ಶೀಲ ಶಂಕಿಸಿ, ಉಸಿರುಗಟ್ಟಿಸಿ ಕೊಲೆ ಮಾಡಿರುವ ಘಟನೆ ತಾವರೆಕೆರೆಯ ಸುಭಾಷ್ ನಗರದ ಅಪಾರ್ಟ್ ಮೆಂಟ್ ವೊಂದರಲ್ಲಿ ನಡೆದಿದೆ.
ಸುಭಾಷ್ ನಗರದ ನಾಜ್ಹ್ (22) ಕೊಲೆಯಾದವರು, ಆಕೆಯನ್ನು ಉಸಿರು ಗಟ್ಟಿಸಿಕೊಲೆ ಮಾಡಿದ ಪತಿರಾಯ ನಾಸಿರ್
ಬಾಮೈದನಿಗೆ ಮೆಸೇಜ್ ಕಳುಹಿಸಿ ಪರಾರಿಯಾಗಿದ್ದಾನೆ.
ದಂಪತಿಯು ಕಳೆದ 6 ತಿಂಗಳಿನಿಂದ ಫ್ಲ್ಯಾಟ್ ನಲ್ಲಿ ವಾಸವಿದ್ದು, ಸಂಸಾರ ಚೆನ್ನಾಗಿತ್ತು. ಆದರೆ ನಾಸಿರ್ ಹುಸೇನ್ ಇತ್ತೀಚೆಗೆ ಪತ್ನಿಯ ಶೀಲ ಶಂಕಿಸಿ ಗಲಾಟೆ ಮಾಡುವುದಕ್ಕೆ ಶುರು ಮಾಡಿಕೊಂಡಿದ್ದ.
ಗಲಾಟೆಯು ವಿಕೋಪಕ್ಕೆ ತಿರುಗಿ ಇಂದು ಮಧ್ಯಾಹ್ನ ಪತ್ನಿಯನ್ನು ಉಸಿರುಗಟ್ಟಿಸಿ ಕೊಲೆ ಮಾಡಿದ್ದಾನೆ.
ಆರೋಪಿ ಪತಿ ಖಾಸಗಿ ಕಂಪೆನಿಯಲ್ಲಿ ಕೆಲಸ ಕೆಲಸ ಮಾಡಿಕೊಂಡಿದ್ದ. ಈ ಸಂಬಂಧ ಸುದ್ದಗುಂಟೆಪಾಳ್ಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.