ಶೀರ್ಷಿಕೆಯಂತೆ ಜನರಿಗೆ ಉತ್ತಮ ಸಂದೇಶ ನೀಡುವ ಚಿತ್ರವಾಗಲಿ- ಅಭಿನವ ಶ್ರೀಗಳು

ಸಿರವಾರ.ಆ.೦೩-ಇಂದಿನ ಪ್ರಸ್ತುತ ದಿನಗಳಲ್ಲಿ ಸಮಾಜದಲ್ಲಿ ಜರುಗುತ್ತಿರುವ ಕೋಮು ಗಲಭೆ, ಕಲಹ ಉಂಟಾಗುತ್ತಿರುವ ಇಂದಿನ ಜನರಿಗೆ ಉತ್ತಮ ಸಂದೇಶ ನೀಡುವ ಚಿತ್ರಗಳು ಮೂಡಿಬರಲಿ ಎಂದು ನವಲಕಲ್ ಬೃಹನ್ಮಠದ ಮಠಾಧ್ಯಕ್ಷರಾದ ಅಭಿನವಶ್ರೀ ಸೋಮನಾಥ ಶಿವಾಚಾರ್ಯ ಮಹಾಸ್ವಾಮಿಗಳು ನುಡಿದರು. ತಾಲೂಕಿನ ನಾರಬಂಡಾ ಗ್ರಾಮದಲ್ಲಿ ರಾಮ್ ರಹಿಮ್ ಚಲನಚಿತ್ರದ ಚಿತ್ರೀಕರಣಕ್ಕೆ ಚಾಲನೆ ನೀಡಿ ಮಾತನಾಡಿ “ಒಳಿತು ಮಾಡು ಮನುಷ್ಯ” ಹಾಡಿನ ರಚನೆಕಾರ ನಮ್ ಋಷಿ ಅವರು ಉತ್ತಮವಾದ ಗೀತೆಗಳನ್ನು ರಚನೆಮಾಡಿ, ಹಲವು ಸಿನಿಮಾಗಳು ಆಗಿವೆ.
ಅವರ ನಿರ್ದೇಶನದಲ್ಲಿ ನಿರ್ಮಾಣವಾಗುವ ಈ ಸಿನಿಮಾ ಈ ಭಾಗದ ಜನರ ಜೀವನ, ಸುಂದರವಾದ ತಾಣಗಳು ನಾಡಿನ ತುಂಬಾ ಹೆಸರು ಮಾಡುವಂತಾಗಲಿ ಈ ಚಿತ್ರ ತಂಡಕ್ಕೆ ಯಶಸ್ಸು ಸಿಗಲಿ ಎಂದರು. ಈ ಸಂದರ್ಭದಲ್ಲಿ ಶಿವಕುಮಾರ ಸ್ವಾಮಿ ಕೋಟ್ನಕಲ್, ನಿರ್ದೇಶಕರಾದ ನಮ್ ಋಷಿ, ಎಸ್.ಟಿ.ಸೋಮಶೇಖರ್, ಪ್ರಸನ್ನ ವತ್ತೂರು, ನಿರ್ಮಾಪಕ ಹನುಮಂತ ನಾಯಕ,ಜಿ.ಪಂ ಮಾಜಿ ಅಧ್ಯಕ್ಷ ಶಿವರಾಜ ಉಮಳಿಹೊಸೂರು ತಾ.ಪಂ. ಮಾಜಿ ಅಧ್ಯಕ್ಷ ದೇವರಾಜ ನಾಯಕ, ನಿವೃತ್ತ ಶಿಕ್ಷಕ ಜಂಬಲೇ ನಾಯ್ಕ ಅಮರೇಗೌಡ, ಯಲ್ಲಪ್ಪ, ರಂಗನಾಥ, ದೇವರಾಜ ಗಬ್ಬೂರು, ಕ್ಯಾಮರಾ ಮ್ಯಾನ್ ರಾಕೇಶ್ ಸಂಗೀತ ನಿರ್ದೇಶಕ ಶ್ರೀಗುರು, ನಟ ಅರುಣ್, ನಟಿ ರಾಜೇಶ್ವರಿ, ದೇವರಾಜ ಗಬ್ಬೂರು ಸೇರಿದಂತೆ ಚಿತ್ರತಂಡ ಸಿರವಾರ, ಬಾಗಲವಾಡ, ನಾರಬಂಡ ಸೇರಿದಂತೆ ವಿವಿಧ ಗ್ರಾಮದ ಮುಖಂಡರು ಸಿನಿಮಾ ಪ್ರಿಯರು ಭಾಗವಹಿಸಿದ್ದರು. ನಂತರ ಚಿತ್ರೀಕರಣ ಆರಂಭವಾಯಿತು.