ಶೀತಲೀಕೃತ ಶವಾಗಾರ ಹೊಂದಿಸಿಕೊಳ್ಳುವ ನಿಟ್ಟಿನಲ್ಲಿ ಸಕಾರಾತ್ಮವಾಗಿ ಪ್ರಯತ್ನ: ಲಾಲಾಜಿ

ಪಡುಬಿದ್ರಿ, ಮೇ ೨೯- ಶಾಸಕರ ಪ್ರದೇಶಾಭಿವೃದ್ಧಿ ನಿಧಿಯಿಂದ ದೊರೆತ ಸುಮಾರು ೧೦ ಲಕ್ಷ ರೂ. ವೆಚ್ಚದಲ್ಲಿ ಕೊರೋನಾ ವೈರಸ್ ಸೋಂಕಿತರಾಗಿ ಹೋಂ ಐಸೊಲೇಷನ್ನವಲ್ಲಿರುವವರಿಗೆ ಉಪಯೋಗವಾಗಲು ೬೫೦ ಪಲ್ಸ್ ಆಕ್ಸಿಮೀಟರನ್ನು ತಮ್ಮ ಕ್ಷೇತ್ರದೆಲ್ಲೆಡೆ ನೀಡಲಾಗುತ್ತಿದೆ ಎಂದು ಕಾಪು ಶಾಸಕ ಲಾಲಾಜಿ ಆರ್. ಮೆಂಡನ್ ಹೇಳಿದರು.
ಅವರು ಶುಕ್ರವಾರ ಪಡುಬಿದ್ರಿಯ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಪಲ್ಸ್ ಆಕ್ಸಿಮೀಟರ್ಗ ಳನ್ನು ವಿತರಿಸಿ ಮಾತನಾಡಿದರು. ಕ್ಷೇತ್ರದಲ್ಲಿನ ಜನತೆಗೆ ಉಪಯುಕ್ತವಾಗುವಂತೆ ೪ ಆ?ಯಂಬುಲೆನ್ಸ್‌ಗಳನ್ನು ಒದಗಿಸುವ ಯೋಜನೆಗಳಿವೆ. ಪಡುಬಿದ್ರಿಯ ಪ್ರಾಥಮಿಕ ಆರೋಗ್ಯ ಕೇಂದ್ರದ ಬಹುಕಾಲದ ಬೇಡಿಕೆಯಾಗಿರುವ ಶೀಥಲೀಕೃತ ಶವಾಗಾರವನ್ನು ಹೊಂದಿಸಿಕೊಳ್ಳುವ ನಿಟ್ಟಿನಲ್ಲಿ ಸಕಾರಾತ್ಮವಾಗಿ ಪ್ರಯತ್ನಗಳು ಮುಂದುವರಿದಿದೆ ಎಂದು ಲಾಲಾಜಿ ಮೆಂಡನ್ ತಿಳಿಸಿದರು. ತಾಲ್ಲೂಕು ಆರೋಗ್ಯಾಧಿಕಾರಿ ಡಾ. ವಾಸುದೇವ ಉಪಾಧ್ಯಾಯ ಮಾತನಾಡಿ, ಆರೋಗ್ಯ ಇಲಾಖೆಯು ಕೊರೋನಾ ನಿಗ್ರಹಕ್ಕೆ ಅನೇಕ ಕ್ರಮಗಳನ್ನು ಕೈಗೊಂಡಿದೆ. ಮನೆಯಲ್ಲೇ ಐಸೊಲೇಶನ್ ಆಗಿರುವವರ ದೇಹದಲ್ಲಿನ ಆಮ್ಲಜನಕದ ಪರಿಮಿತಿಯ ಕುರಿತಾಗಿ ನಿಗಾವಹಿಸಲು ಆಕ್ರಿಮೀಟರ್ಗೆಳ ಅವಶ್ಯಕತೆಯಿತ್ತು. ಅದನ್ನು ಶಾಸಕರು ತಮ್ಮ ನಿಧಿಯಿಂದ ಈಗ ಪೂರೈಸಿದ್ದಾರೆ ಎಂದರು. ವೇದಿಕೆಯಲ್ಲಿ ಜಿಲ್ಲಾ ಪಂಚಾಯಿತಿ ಸದಸ್ಯೆ ಶಿಲ್ಪಾ ಸುವರ್ಣ, ಪಡುಬಿದ್ರಿ ಗ್ರಾಮ ಪಂಚಾಯಿತಿ ಅಧ್ಯಕ್ಷ ರವಿ ಶೆಟ್ಟಿ ಪಾದೆಬೆಟ್ಟು, ಆಕ್ಸಿಮೀಟರ್ ವಿತರಕ ಅನಿಲ್ ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು. ಡಾ. ವಾಸುದೇವ ಉಪಾಧ್ಯಾಯ ಸ್ವಾಗತಿಸಿದರು. ಪಡುಬಿದ್ರಿ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ. ರಾಜಶ್ರೀ ಕಿಣಿ ವಂದಿಸಿದರು.