ಶೀಘ್ರ ಚಿತ್ರನಗರಿ, ಅಂತರಾಷ್ಟ್ರೀಯ ಮಟ್ಟದ ಸೌಲಭ್ಯ: ಸಿಎಂ

ಬೆಂಗಳೂರು,ಮಾ.23- ಚಿತ್ರರಂಗದ ಬಹುದಿನಗಳ ಕನಸಾದ ಚಿತ್ರ ನಗರಿ ಶೀಘ್ರದಲ್ಲಿಯೇ ಆಗಲಿದೆ. ಅಂತರಾಷ್ಟ್ರೀಯ ಮಟ್ಟದಲ್ಲಿ ಮಟ್ಟದಲ್ಲಿ ಮಾಡಲು ನಿರ್ದರಿಸಲಾಗಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಇಂದಿಲ್ಲಿ ಹೇಳಿದ್ದಾರೆ.
ಚಿತ್ರನಗರದಲ್ಲಿಯಲ್ಲಿ ಹೊಸ ಸ್ಟುಡಿಯೋ ಮಾಡಲಾಗುವುದು, ಚಿತ್ರರಂಗ ನಗರ ಶೀಘ್ರದಲ್ಲಿ ಆಗಲಿದೆ. ಚಿತ್ರನಗರಕ್ಕೆ ಬೇಕಾದ ಎಲ್ಲಾ ರೀತಿಯ ಸಹಕಾರ ನೆರವು ನೀಡಲಾಗಿದೆ ಎಂದು ಭರವಸೆ ನೀಡಿದ್ಧಾರೆ
14ನೇ ಬೆಂಗಳೂರು ಅಂತರಾಷ್ಟ್ರೀಯ ಚಿತ್ರೋತ್ಸವಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ರಾಜ್ಯಾದ್ಯಂತ ಮಿನಿ ಚಿತ್ರ ಮಂದಿರ ಮಾಡಲು ಒಪ್ಪಿಗೆ ನೀಡಿದ್ದೇನೆ. ಸಹಾಯಧ ಧನ ಚಿತ್ರಗಳ ಸಂಖ್ಯೆ 200ಕ್ಕೆ ಹೆಚ್ಚಿಸಲಾಗಿದೆ. ಪ್ರಶಸ್ತಿ ಮೊತ್ತ ಹೆಚ್ಚಿಸಲಾಗಿದೆ ಎಂದರು.


ಕನ್ನಡ ಸಿನಿಮಾಗಳು ಜಾಗತಿಕ ಮಟ್ಟದಲ್ಲಿ ಗಮನ ಸೆಳೆದಿರುವುದು ಖುಷಿಯ ಕ್ಷಣ. ವಸ್ತು ವಿಷಯ ಆಧರಿಸಿ ಚಿತ್ರ ಮಾಡಲಾಗುತ್ತಿದೆ. ಇದು ಬಹಳ ಬದಲಾವಣೆ ಆಗಿದೆ ಇದು ಒಳ್ಳೆಯ ಸಂಗತಿ ಎಂದಿದ್ದಾರೆ
ಕಾಂತಾರ ಯಾರೂ ಕೂಡ ನಿರೀಕ್ಷೆ ಮಾಡದ ಚಿತ್ರ. ಸ್ಥಳೀಯ ಕಥೆ, ಆಚರಣೆಯ ಮೂಲಕ ಅಂತರಾಷ್ಟ್ರೀಯ ಮಟ್ಟಕ್ಕೆ ಕೊಂಡೊಯ್ಯಯ್ದಿದೆ. ಇಡೀ ತಂಡಕ್ಕೆ ಅಭಿನಂಧನೆಗಳು. ಚಿತ್ರೋತ್ಸವದಲ್ಲಿ ಆಯ್ಕೆ ಮಾಡಿದ ಚಿತ್ರಗಳು ಒಂದಕ್ಕಿಂತ ಒಂದು ಉತ್ತಮವಾಗಿವೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಜಗತ್ತಿನ ಪ್ರತಿಷ್ಠಿತ ಚಿತ್ರೋತ್ಸವಗಳಲ್ಲಿ ಬೆಂಗಳೂರು ಅಂತರಾಷ್ಟ್ರೀಯ ಚಿತ್ರೋತ್ಸವವೂ ಕೂಡ ಒಂದು.ಸಿನಿಮಾ ದೊಡ್ಡ ಇತಿಹಾಸ ಹೊಂದಿದೆ, ಅತ್ಯಂತ ಅದ್ಬುತ ಸಿನಿಮಾ ಬದಲಾವಣೆ ಆಗುತ್ತಿವೆ. ಬದುಕಿನಲ್ಲಿ ವೇಗವಾಗಿರುವುದರಿಂದ ಸಿನಿಮಾದಲ್ಲಿ ವೇಗವಾಗಿ ನಡೆಯುತ್ತಿದೆ ಎಂದರು.


ದೇಶದ ರಕ್ಷಣಾ ಕ್ಷೇತ್ರದ ಉತ್ಪಾದನೆಯಲ್ಲಿ ಬೆಂಗಳೂರು ಶೇ.60 ರಷ್ಟು ಹೊಂದಿದೆ. ಅದೇ ರೀತಿ ವಿಮಾನಯಾನ ಕ್ಷೇತ್ರದಲ್ಲಿ ಬೆಂಗಳೂರು ಮುಂಚೂಣಿಯಲ್ಲಿದೆ. ಮುಂಬರುವ ದಿನಗಳಲ್ಲಿ ನಿಜಕ್ಕೂ ಅಂತರಾಷ್ಟ್ರೀಯ ಚಿತ್ರೋತ್ಸವ ಆಗಲಿದೆ ಎಂದರು.
ಮುಂದಿನ 8 ದಿನಗಳಲ್ಲಿ ಬೆಂಗಳೂರು ಅಂತರಾಷ್ಟ್ರೀಯ ಚಿತ್ರೋತ್ಸವ ಯಶಸ್ಸಿಯಾಗಲಿ, ಸಿನಿಮಾ ಹಬ್ಬವನ್ನು ಆಸ್ವಾಧಿಸಿ ಎಂದು ಮನವಿ ಮಾಡಿದರು.
ಕಾರ್ಯಕ್ರಮದಲ್ಲಿ ಬಾಲಿವುಡ್ ನಿರ್ದೇಶಕ ಗೋವಿಂದ ನಿಹಲಾನಿ, ರಾಜ್ಯಸಭಾ ಸದಸ್ಯ ವಿಜೇಂದ್ರ ಪ್ರಸಾದ್, ಸಚಿವ ಆರ್. ಅಶೋಕ್, ನಟ ಅಭೀಷೇಕ್ ಅಂಬರೀಷ್. ನಟಿಯರಾದ ಸಪ್ತಮಿಗೌಡ, ಹರ್ಷಿಕಾ ಪೂಣಚ್ಚ, ವಾಣಿಜ್ಯ ಮಂಡಳಿ ಅಧ್ಯಕ್ಷ ಭಾ ಮ ಹರೀಶ್, ಚಲನಚಿತ್ರ ಅಕಾಡಮಿ ಅಧ್ಯಕ್ಷ ಅಶೋಕ್ ಕಶ್ಯಪ್, ಸೇರಿದಂತೆ ಅನೇಕರು ಪಾಲ್ಗೊಂಡಿದ್ದರು.