
ರಾಯಚೂರು, ಮಾ.೦೯- ಗ್ರಾಮೀಣ ಶಾಸಕರು ಮತ್ತು ನಗರ ಶಾಸಕರ ನೇತೃತ್ವದಲ್ಲಿ ಬುಧವಾರ ಜಿಲ್ಲಾಧಿಕಾರಿಗಳ ಕಛೇರಿಯಲ್ಲಿ ಜಿಲ್ಲಾಧಿಕಾರಿಗಳು ಚಂದ್ರಶೇಖರ ನಾಯಕ ಹಾಗೂ ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ಬಿ ನಿಖಿಲ್ ರವರು ಮತ್ತು ನೀರಾವರಿ ಇಲಾಖೆಯ ಅಧಿಕಾರಿಗಳೊಂದಿಗೆ ಸಭೆ ನಡೆಸಿದರು. ಇನ್ನೂ ಎರಡು ಮೂರು ದಿನಗಳಲ್ಲಿ ಕಾಲುವೆಗೆ ನೀರು ಹರಿಬಿಡಬೇಕು, ಇಲ್ಲದಿದ್ದರೆ ರೈತರ ಹೊಲದಲ್ಲಿ ಬೆಳೆದುನಿಂತಂಹ ಮೆಣಸಿನಕಾಯಿ ಮತ್ತು ಭತ್ತದ ಬೆಳಗಳು ಒಣಗಿ ಹೋಗುತ್ತದೆ, ಆದ್ದರಿಂದ ಇನ್ನೆರಡು ಮೂರು ದಿನಗಳ ನೀರು ಹರಿಸಬೇಕು, ಕೆಳಭಾಗದ ರೈತರಿಗೆ ನೀರು ತಲುಪುವ ವರೆಗೂ ನೀರು ನಿಲ್ಲಿಸಬಾರದು, ರೈತರ ಹೊಲಗಳಿಗೆ ಸಂಪೂರ್ಣವಾಗಿ ಪುರೈಕೆಯಾಗಬೇಕು ಜೊತೆಗೆ ನಗರಕ್ಕೆ ಕುಡಿಯುವ ನೀರಿನ ರಾಂಪುರ ಕರೆ ಬರ್ತಿಯಾಗುಬೇಕು ಇದರಿಂದ ಬೆಸಿಗೆಯಲ್ಲಿ ಜಿಲ್ಲೆಯಲ್ಲಿ ಕುಡಿಯುವ ನೀರಿನ ತೊಂದರೆಯಾಗದಂತೆ ನೋಡಿಕೊಳ್ಳಬೇಕು ಎಂದು ಸಭೆಯಲ್ಲಿ ಮನವಿ ಮಾಡಿದರು.
ಈ ಸಂದರ್ಭದಲ್ಲಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರು,ಮತ್ತು ನಗರಸಭೆ ಅಧ್ಯಕ್ಷರು ವಿವಿಧ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.