ಶೀಘ್ರ ಅಪರಾಧ ಪತ್ತೆಹಚ್ಚಲು ಸಿ ಸಿ ಕ್ಯಾಮೆರಾದಿಂದ ಸಹಾಯ:ಅನುಪಮ್ ಅಗ್ರವಾಲ

ಹುಮನಾಬಾದ್:ಎ.11: ಪಟ್ಟಣದ ಪೆÇಲೀಸ್ ಉಪಾಧೀಕ್ಷಕರ ಕಾರ್ಯಾಲಯ ಉಪವಿಭಾಗದ ಮುಂಭಾಗದಲ್ಲಿ ನೂತನ ಸಿಸಿ ಟಿವಿ ನಿಯಂತ್ರಣ ಕೊಠಡಿ ಉದ್ಘಾಟಿಸಿ ಈಶಾನ್ಯ ವಲಯದ ಪೆÇಲೀಸ್ ಉಪ ಮಹಾ ನಿರೀಕ್ಷಕರಾದ ಅನುಪಮ್ ಅಗ್ರವಾಲ ಮಾತನಾಡಿದ ಅವರು. ಪಟ್ಟಣಾಧ್ಯಂತ 31 ಸ್ಥಳದಲ್ಲಿ 51 ಕ್ಯಾಮೆರಾಗಳನ್ನ ಅಳವಡಿಸಲಾಗಿದ್ದು ಇನ್ನೂ ಕ್ಯಾಮೆರಾ ಅಳವಡಿಸುವುದು ಬಾಕಿಯಿದೆ. ಎಚ್.ಡಿ ಕ್ಯಾಮೆರಾ, 360 ಡಿಗ್ರಿ, ಡ್ರೋಣ್, ನಿಯಂತ್ರಣ ಕೊಠಡಿಯಲ್ಲಿ ಪ್ರತೀ ಕ್ಯಾಮೆರಾದ ಲೈವ್, ಹಾಗೂ ಹಿಂದಿನ ದೃಶ್ಯಗಳನ್ನ ವೀಕ್ಷಿಸಬಹುದಾಗಿದೆ. ಇದರಿಂದ ಪಟ್ಟಣದಲ್ಲಿ ನಡೆಯಲ್ಲಿರುವ ಪ್ರತಿಭಟನೆ, ಕಳವು, ದರೋಡೆ ಅಂತಹ ಅಪರಾಧ ತಡೆಯುವದರಲ್ಲಿ ಹಾಗೂ ಪತ್ತೆ ಹಚ್ಚುವದರಲ್ಲಿ ಸಹಕಾರಿಯಾಗಲಿದೆ ಎಂದು ಮಾಹಿತಿ ನೀಡಿದರು.

ಬೀದರ್ ಜಿಲ್ಲಾಧಿಕಾರಿ ಗೋವಿಂದ ರೆಡ್ಡಿ ಮಾತನಾಡಿ ಜಿಲ್ಲೆ ಎಲ್ಲಾ ತಾಲೂಕ ಕೇಂದ್ರಗಳಲ್ಲಿ ಸಿ ಸಿ ಕ್ಯಾಮೆರಾ ಕೊಠಡಿ ನಿರ್ಮಿಸಲಾಗಿದೆ ಹುಮನಾಬಾದ್ ಪಟ್ಟಣದಲ್ಲಿ ಸಾರ್ವಜನಿಕರು ಸಹಭಾಗಿತ್ವದಲ್ಲಿ ಸಿಸಿ ಕ್ಯಾಮೆರಾ ಕೊಠಡಿ ನಿರ್ಮಿಸಲಾಗಿದ್ದು ಸಂತೋಷ ಸಂಗತಿ ಎಂದರು

ಪೆÇಲೀಸ್ ಅಧಿಕ್ಷಕ ಚನ್ನಬಸವಣ್ಣ ಲಂಗೋಟಿ ಮಾತನಾಡಿ. ಸಮುದಾಯ ಬಿಟ್ಟು ಪೆÇಲೀಸರಿಲ್ಲ. ಪೆÇಲೀಸರಿಗೆ ಬಿಟ್ಟು ಸಮುದಾಯ ಇರಲು ಸಾಧ್ಯವಿಲ್ಲ. ಅದಕ್ಕೆ ಇಲ್ಲಿನ ವಿವಿಧ ವ್ಯಾಪಾರಸ್ಥರು, ಕೈಗಾರಿಕಾ ಕಂಪನಿಯ ಮಾಲಿಕರು ವಾಹನ, ದರೋಡೆ, ಮನೆ ಕಳವು ಸೇರಿದಂತೆ ಅಪಾರಧಗಳಿಗೆ ಕಡಿವಾಣ ಹಾಕಲು ಪತ್ತೆಹಚ್ಚಲು ಕಾನೂನು ಸುವ್ಯವಸ್ಥೆ ಕಾಪಾಡಲು ಸಹಕಾರಿಯಾಗುವ ಉದ್ದೇಶದಿಂದ ಪೆÇೀಲಿಸರ ಅವಿಭಾಜ್ಯ ಅಂಗವಾದ ಸಿಸಿ ಕ್ಯಾಮರಾಗಳು ದಾಸೋಹವಾಗಿ ತಾವು ನೀಡಿದಕ್ಕೆ ಅನಂತ ಕೃತಜ್ಞತೆಗಳು ಎಂದು ಹೇಳಿದರು.

ಸಾರ್ವಜನಿಕರು ಇಲಾಖೆಗೆ ಸಿಸಿ ಕ್ಯಾಮೆರಾಗಳ ದಾಸೋ ಮಾಡಿದರೆ ಪೆÇಲೀಸ್ ಇಲಾಖೆಗೆ ಸಂತೋಷ ತಂದಿದೆ ಸಾರ್ವಜನಿಕರು ದಾನ ಮಾಡಲು ಮುಂದೆ ಬರಬೇಕೆಂದು ತಿಳಿಸುವರು

ಹೆಚ್ಚುವರಿ ಪೆÇೀಲಿಸ್ ಅಧಿಕ್ಷಕ ಮಹೇಶ ಮೇಘಣ್ಣವರ್, ಎ.ಸಿ.ಪಿ ಶಿವಾಂಶು ರಜಪೂತ, ಸಿಪಿಐ ಶರಣಬಸಪ್ಪ ಕೋಡ್ಲಾ, ಬೀದರ ಗ್ರಾಮೀಣ ಸಿಪಿಐ ಶ್ರೀನಿವಾಸ ಅಲ್ಲಾಪೂರೆ, ಪಿಎಸ್‍ಐ ಮಂಜನಗೌಡ ಪಾಟೀಲ್, ಸಂಚಾರಿ ಪಿಎಸ್‍ಐ ಬಸವರಾಜ ಹೇರೂರ, ಎ.ಎಸ್.ಐಗಳಾದ ಸೋಮೇಶ್ವರ ಪಾಟೀಲ್, ದೇವಿಂದ್ರ ಆರ್ಯ, ಅಶೋಕ, ಶ್ರೀನಿವಾಸ ಇದ್ದರು. ಉಪಸ್ಥಿತರಿದ್ದರು ಇದೇ ಸಂದರ್ಭದಲ್ಲಿ ಸಿ ಸಿ ಕ್ಯಾಮೆರಾ ನೀಡಿದ ದಾನಿಗಳಿಗೆ ಸನ್ಮಾನಿಸಲಾಯಿತು ಐ. ಎಸ್. ಶಕೀಲಾ ಕಾರ್ಯಕ್ರಮ ನಿರೂಪಿಸಿ ವಂದಿಸಿದರು