ಶೀಘ್ರವೇ ಹೊಸ ಸೈಬರ್ ಪಾಲಿಸಿ: ಸಿಎಂ ಬಸವರಾಜ ಬೊಮ್ಮಾಯಿ

ಮೈಸೂರು: ಸೆ.07:- ರಾಜ್ಯದಲ್ಲಿ ಶೀಘ್ರವೇ ಹೊಸದಾಗಿ ಸೈಬರ್ ಪಾಲಿಸಿಯೊಂದನ್ನು ಜಾರಿಗೆ ತರಲು ಸಿದ್ದತೆ ಮಾಡಿಕೊಳ್ಳಲಾಗುತ್ತಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.
ಜಾಗತಿಕ ಸ್ಪರ್ಧಾತ್ಮಕತೆ ಮತ್ತು ಜಾಗತಿಕ ಮಟ್ಟದಲ್ಲಿ ಹಾಗೂ ರಾಜ್ಯದಲ್ಲಿ ಸೈಬರ್ ಭದ್ರತಾ ಸಾಮಥ್ರ್ಯಗಳನ್ನು ಹೆಚ್ಚಿಸುವ ಉದ್ದೇಶದಿಂದ ಮಂಗಳವಾರ ಮೈಸೂರಿನ ಇಲವಾಲದ ಮೈರಾ ಸ್ಕೂಲ್ ಆಬಿಸಿನೆಸ್ ಸಂಸ್ಥೆಯಲ್ಲಿ ಆಯೋಜಿಸಿದ್ದ ಸೈಬರ್ ವರ್ಸ್ ಲ್ಯಾಬ್ ಉದ್ಘಾಟನೆ, ಕಾಪ್ ಕನೆಕ್ಟ್ ಅಪ್ಲಿಕೇಶನ್ ಮತ್ತು ಸೈಬರ್ ಸ್ವಾಸ್ಥ್ಯ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಸರಕಾರ ಸೈಬರ್ ಸೆಕ್ಯೂರಿಟಿಗೆ ಹೆಚ್ಚು ಒತ್ತು ನೀಡುತ್ತಿದೆ. ಬ್ಯಾಂಕಿಂಗ್ ಕ್ಷೇತ್ರದಲ್ಲಿ ನಿತ್ಯವೂ ಸಂಭವಿಸುತ್ತಿರುವ ಸೈಬರ್ ಅಪರಾಧವನ್ನು ಗಮನಿಸಿದರೆ ಇದರ ಅನಿವಾರ್ಯತೆ ತಿಳಿಯುತ್ತದೆ.ರಾಜ್ಯದ ಬ್ಯಾಂಕಿಂಗ್ ವ್ಯವಸ್ಥೆ, ಎಲ್ಲಾ ಇಲಾಖೆಗಳಲ್ಲಿ ಸೈಬರ್ ಸೆಕ್ಯೂರಿಟಿ ಹೊಂದುವುದು ಅತ್ಯಗತ್ಯವಾಗಿದೆ ಎಂದರು.
ಪ್ರತಿಯೊಂದು ಇಲಾಖೆಯೂ ಮಾಹಿತಿ ಗೌಪ್ಯತೆ, ಹಣದ ವ್ಯವಹಾರಕ್ಕೆ ಸಂಬಂಧಿಸಿದಂತೆ ಸೈಬರ್ ಸೆಕ್ಯೂರಿಟಿ ಹೊಂದಬೇಕಿದೆ. ಅದಕ್ಕಾಗಿ ಹೊಸದಾಗಿ ಸೈಬರ್ ಪಾಲಿಸಿಯೊಂದನ್ನು ಜಾರಿಗೆ ತರಲು ರಾಜ್ಯ ಸರಕಾರ ಸಿದ್ದತೆ ಮಾಡಿಕೊಳ್ಳಲಾಗುತ್ತಿದೆ. ಕರ್ನಾಟಕ ಸೆಮಿಕಂಡಕ್ಟರ್ ತಯಾರಿಕೆ, ಏರೋ ಸ್ಪೇಸ್, ಅಭಿವೃದ್ಧಿ ಹಾಗೂ ಉದ್ಯೋಗಕ್ಕೆ ಸಂಬಂಧಿಸಿದ ಕಾಯಿದೆಗಳನ್ನು ರೂಪಿಸುವಲ್ಲಿ ಮೊದಲ ಸ್ಥಾನದಲ್ಲಿದ್ದು ಅತ್ಯಂತ ತುರ್ತಾಗಿ ಉತ್ತಮವಾದ ಸೈಬರ್ ಪಾಲಿಸಿಯನ್ನು ಹೊರತರುತ್ತೇವೆ. ಇದಕ್ಕೆ ರಾಜವಂಶಸ್ಥ ಯಧುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಅವರು ಆರಂಭಿಸಿರುವ ಸೈಬರ್ ಸೆಕ್ಯೂರಿಟಿ ಸೊಸೈಟಿ ಸಹಕಾರವನ್ನೂ ಪಡೆಯಲಾಗುವುದು.
ರಾಜ್ಯ ಸರಕಾರ 2025ರ ವೇಳೆಗೆ ಕರ್ನಾಟಕದ ಸೂಪರ್-30 ಕಾರ್ಯಕ್ರಮದ ಭಾಗವಾಗಿ ಪ್ರಮುಖ ತಾಂತ್ರಿಕ ಸಂಸ್ಥೆಗಳಲ್ಲಿ ಸೈಬರ್ ಲ್ಯಾಬ್ ಸ್ಥಾಪಿಸುವ ಗುರಿ ಹೊಂದಲಾಗಿದೆ. ಈ ನಿಟ್ಟಿನಲ್ಲಿ 1 ಲಕ್ಷಕ್ಕೂ ಹೆಚ್ಚು ತರಬೇತಿ ಪಡೆದ ಉದ್ಯೋಗಿಗಳ ಸಂಪರ್ಕವನ್ನು ಒಳಗೊಂಡ ವೇದಿಕೆಯನ್ನು ಸೃಷ್ಟಿಸಲಾಗಿದೆ ಎಂದರು.
ಕರ್ನಾಟಕ ಪೆÇಲೀಸ್ ಸೈಬರ್ ಅಪರಾಧವನ್ನು ತಡೆಗಟ್ಟುವ ಅತ್ಯುತ್ತಮ ತಂತ್ರಜ್ಞಾನವನ್ನು ಅಳವಡಿಸಿಕೊಂಡಿದೆ. ಅಲ್ಲದೇ ನಮ್ಮ ಪೆÇಲೀಸ್ ವ್ಯವಸ್ಥೆ ಬ್ಯಾಂಕಿಂಗ್ ವ್ಯವಸ್ಥೆ ಹ್ಯಾಕಿಂಗ್‍ಗೆ ಒಳಗಾಗದಂತೆ ಎಚ್ಚರಿಕೆ ವಹಿಸುವ ಹಾಗೂ ಆ ರೀತಿಯ ಪ್ರಕರಣಗಳಾದಾಗ ಅದನ್ನು ಸಮರ್ಥವಾಗಿ ಎದುರಿಸುವ ಚಾಕಚಕತ್ಯತೆ ಹೊಂದಿದೆ. ಸೆಕ್ಯೂರಿಟಿ ನೀಡುವುದು ಉತ್ತಮ ಕಾರ್ಯವಾಗಿದೆ ಎಂದು ಶ್ಲಾಘಿಸಿದರು.
ಮೈಸೂರಿಗರು ಅಭಿವೃದ್ಧಿಪರ ಚಿಂತನೆ ಉಳ್ಳವರಾಗಿದ್ದಾರೆ. ಅಂತೆಯೆ ಸ್ವತಂತ್ರಪೂರ್ವದಲ್ಲಿಯೂ ರಾಜವಂಶಸ್ಥರು ಉದ್ಯಮಗಳನ್ನು ಆರಂಭಿಸಿದ್ದಾರೆ. ಕಬ್ಬಿಣ, ಇಂಕ್, ಸಿಮೆಂಟ್, ಸಕ್ಕರೆ, ಸೋಪ್ ಅಂಡ್ ಡಿಟರ್ಜೆಂಟ್, ಬ್ಯಾಂಕಿಂಗ್ ವ್ಯವಸ್ಥೆಘಿ, ಶಿಕ್ಷಣ ಸಂಸ್ಥೆಗಳು ಸೇರಿದಂತೆ ಕಲ್ಯಾಣ ರಾಜ್ಯಕ್ಕೆ ಬೇಕಾದ ಎಲ್ಲವನ್ನೂ ರಾಜರು ಮಾಡಿಕೊಟ್ಟಿದ್ದಾರೆ. ಅವುಗಳನ್ನು ಮುಂದುವರಿಸಿಕೊಂಡು ಹೋಗುವುದು ನಮ್ಮ ಕರ್ತವ್ಯ ಎಂದರು.
ಕೆಆರ್‍ಎಸ್ ಅಣೆಕಟ್ಟೆಯಲ್ಲಿ 72 ವರ್ಷ ಹಳೆಯದಾದ ಗೇಟ್‍ಗಳು ಸೋರುವುದನ್ನು ನಾನು ಗಮನಿಸಿ ಕೂಡಲೇ ಜಲಾಶಯದ 16 ಗೇಟ್‍ಗಳ ಸುರಸ್ತಿಗೆ ಸೂಚನೆ ನೀಡಲಾಯಿತು. ರಾಜರು ನೀಡಿದ ಕೊಡುಗೆಗಳನ್ನು ಉಳಿಸಿಕೊಳ್ಳಬೇಕೆಂಬ ಉದ್ದೇಶದಿಂದ ಅವರು ನಿರ್ಮಿಸಿದ 94,000 ಎಕರೆ ಕೃಷಿ ಭೂಮಿಗೆ ನೀರು ಒದಗಿಸುತ್ತಿದ್ದ 14 ಸಣ್ಣ ಅಣೆಕಟ್ಟುಗಳು ದುರಸ್ತಿಯಲ್ಲಿದ್ದವು. ಕೆಲವು ನೆಲಸಮವಾಗಿದ್ದವು. ಅವುಗಳಲ್ಲಿ 11 ನ್ನು ದುರಸ್ತಿಗೊಳಿಸಲಾಗಿದೆ ಎಂದರು.
ಯುವರಾಜರು ಸೈಬರ್ ಸೆಕ್ಯೂರಿಟಿ ಸೊಸೈಟಿಯನ್ನು ಸ್ಥಾಪಿಸಿರುವುದು ಸೈಬರ್ ಅಪರಾಧ ತಡೆಯುವಲ್ಲಿ ಉತ್ತಮ ಕೊಡುಗಡೆಯಾಗಿದೆ. ಇದು ಅತ್ಯಂತ ಮುಖ್ಯವಾದ ಕೆಲಸವಾಗಿದೆ ಎಂದರು.