ಶೀಘ್ರದಲ್ಲೇ ಸಿಟಿ ಸ್ಕ್ಯಾನ್ ಸೆಂಟರ್

ಹೊನ್ನಾಳಿ.ಜೂ.೯ : ತಾಲೂಕು ಆಸ್ಪತ್ರೆಯಲ್ಲಿ ಶೀಘ್ರದಲ್ಲೇ ಸಿಟಿ ಸ್ಕಾö್ಯನಿಂಗ್ ಸೆಂಟರ್ ಪ್ರಾರಂಭಿಸಲಾಗುವುದು ಎಂದು ಸಿಎಂ.ರಾಜಕೀಯ ಕಾರ್ಯದರ್ಶಿ ಎಂಪಿ.ರೇಣುಕಾಚಾರ್ಯ ಹೇಳಿದರು.ತಾಲೂಕಿನ ಅರಬಗಟ್ಟೆ ವಸತಿ ಕೇಂದ್ರದಲ್ಲಿರುವ ಕೊರೋನಾ ಆರೈಕೆ ಕೇಂದ್ರದಲ್ಲಿ ಸೋಂಕಿತರಿಗೆ ಯೋಗಾಬ್ಯಾಸ ಮಾಡಿಸಿ,ಬೆಳಗಿನ ಉಪಹಾರ ನೀಡಿ ಸುದ್ಧಿಗಾರರೊಂದಿಗೆ ಮಾತನಾಡಿದರು.ಜಿಲ್ಲಾಸ್ಪತ್ರೆಯನ್ನು ಬಿಟ್ಟರೇ ಹೊನ್ನಾಳಿ ತಾಲೂಕು ಆಸ್ಪತ್ರೆಯಲ್ಲಿ ಮಾತ್ರ ಸ್ಯಾ÷್ಕನಿಂಗ್ ಸೆಂಟರ್ ಆರಂಭವಾಗಲಿದ್ದು ಇದರಿಂದ ಅವಳಿ ತಾಲೂಕಿನ ಜನರಿಗೆ ಅನುಕೂಲವಾಗಲಿದೆ ಎಂದರು.ತಾಲೂಕು ಆಸ್ಪತ್ರೆಯಲ್ಲಿ ಸ್ಕಾö್ಯನಿಂಗ್ ಸೆಂಟರ್ ಪ್ರಾರಂಭಿಸುವ ಬಗ್ಗೆ ಆರೋಗ್ಯ ಸಚಿವ ಸುಧಾಕರ್ ಹಾಗೂ ಆರೋಗ್ಯ ಇಲಾಖೆಯ ಅಧಿಕಾರಿ ಲತಾಕುಮಾರಿ ಜೊತೆ ಚರ್ಚಿಸಿದ್ದು ಶೀಘ್ರವೇ ಸಿಟಿ ಸ್ಜಾö್ಯನ್ ಸೆಂಟರ್‌ಗೆ 1.50 ಕೋಟಿ ಹಣ ಬಿಡುಗಡೆ ಯಾಗಲಿದೆ ಎಂದರು.ಅವಳಿ ತಾಲೂಕಿನ ಬಡ ಜನರು ಸ್ಕಾö್ಯನಿಂಗ್‌ಗಾಗೀ ಶಿವಮೊಗ್ಗ ಖಾಸಗಿ ಆಸ್ಪತ್ರೆಗಳಲ್ಲಿ ದುಬಾರಿ ಹಣ ನೀಡಿ ಸಿಟಿ ಸ್ಜಾö್ಯನ್ ಮಾಡಿಸಿಕೊಂಡು ಬರುತ್ತಿದ್ದರು. ಇದನ್ನು ಮನಗಂಡು ಸಿಟಿ ಸ್ಕಾö್ಯನಿಂಗ್ ಸೆಂಟರ್‌ನ್ನು ಹೊನ್ನಾಳಿಯಲ್ಲೇ ಪ್ರಾರಂಭಿಸಿದರೆ ಬಡವರಿಗೆ ಅನು ಕೂಲವಾಗಲಿದೆ ಎಂಬ ಉದ್ದೇಶದಿಂದ ಹೊನ್ನಾಳಿ ತಾಲೂಕು ಆಸ್ಪತ್ರೆಯಲ್ಲಿ ಸದ್ಯದರಲ್ಲದೇ ಸ್ಕಾö್ಯನಿಂಗ್ ಸೆಂಟರ್ ಆರಂಭಿಸುವುದಾಗಿ ತಿಳಿಸಿದರು.ನಿನ್ನೆ ಬೆಂಗಳೂರಿನಲ್ಲಿ ಮುಖ್ಯಮಂತ್ರಿಗಳನ್ನು ಭೇಟಿ ಮಾಡಿ ಅವಳಿ ತಾಲೂಕಿನ ಕೆರೆಗಳಿಗೆ ನೀರು ತುಂಬಿಸುವುದಕ್ಕೆ 495 ಕೋಟಿ ಅನುದಾನದ ಬಗ್ಗೆ ಚರ್ಚೆ ಮಾಡಿದ್ದು ಈಗಾಗಲೇ ಡಿಪಿಆರ್ ಆಗಿದ್ದು ಸದ್ಯದರಲ್ಲೇ ಟೆಂಡರ್ ಪ್ರಕ್ರಿಯೇ ಆರಂಭವಾಗಲಿದೆ ಎಂದರು. ಇನ್ನು ಹೊನ್ನಾಳಿ ನಗರಕ್ಕೆ ಶುದ್ಧ ಕುಡಿಯುವ ನೀರಿನ ಘಟಕಕ್ಕೆ 20 ಕೋಟಿ ಹಾಗೂ ಯುಜಿಡಿ ಕಾಮಗಾರಿಗೆ 60 ಕೋಟಿ ಮಂಜೂರಾಗಿದ್ದು, ಶೀಘ್ರ ಕಾಮಗಾರಿ ಪ್ರಾರಂಭಿಸಲಾಗುವುದು ಎಂದರು.ಅವಳಿ ತಾಲೂಕಿನ ಜನರ ಸೇವೆ ಮಾಡುತ್ತಿರುವುದು ನನ್ನ ಪುಣ್ಯದ ಕೆಲಸ ; ಶಾಸಕನಾಗಿ ಅವಳಿ ತಾಲೂಕಿನ ಜನತೆಯ ಸೇವೆ ಮಾಡುವುದು ನನ್ನ ಕರ್ತವ್ಯ ಹಾಗೂ ಪುಣ್ಯದ ಕೆಲಸ ಎಂದ ಶಾಸಕರು ಕೊರೋನಾ ಸೋಂಕಿನಿAದ ನಮ್ಮ ಕ್ಷೇತ್ರದ ಜನತೆ ತತ್ತರಿಸಿದ್ದು, ಇಂತಹ ಸಮಯದಲ್ಲಿ ನಾನು ಕ್ಷೇತ್ರದ ಸೇವಕನಾಗಿ ಜನತೆಯ ರಕ್ಷಣೆ ಮಾಡುತ್ತಿದ್ದೇನೆ ಎಂದ ಅವರು, ನಾನು ಶಾಸಕನಾಗೀ ಈ ಕೆಲಸ ಮಾಡುತ್ತಿಲ್ಲಾ ಸೇವಕನಾಗಿ ಕೆಲಸ ಮಾಡುತ್ತಿದ್ದೇನೆ ಎಂದರು.ಸೋಂಕಿತರಿಗೆ ಉಪಹಾರ ಬಡಿಸಿ,ಅವರೊಂದಿಗೆ ಉಪಹಾರ ಸೇವಿಸಿದರು.ಈ ಸಂದರ್ಭದಲ್ಲಿ ಸುಮಾ ರೇಣುಕಾಚಾರ್ಯ, ತಾಲೂಕು ಬಿಜೆಪಿ ಅಧ್ಯಕ್ಷ ಜೆ.ಕೆ.ಸುರೇಶ್ ಸೇರಿದಂತೆ ಮತ್ತಿತರರಿದ್ದರು.