ಕಲಬುರಗಿ,ಜೂ.7: ರಾಜ್ಯ ಸರ್ಕಾರವು ಕಲಬುರ್ಗಿ, ಮೈಸೂರು, ಬೆಳಗಾವಿ ಸೇರಿದಂತೆ ವೀಭಾಗಿಯ ಕೇಂದ್ರಗಳಲ್ಲಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಶೀಘ್ರದಲ್ಲೇ ಪ್ರಾರಂಭ ಮಾಡಲು ಉದ್ದೇಶಿಸಿದೆ ಎಂದು ರಾಜ್ಯದ ವೈದ್ಯಕೀಯ ಶಿಕ್ಷಣ ಕೌಶಲ್ಯಾಭಿವೃದ್ಧಿ ಮತ್ತು ಜೀವನೋಪಾಯ ಖಾತೆ ಸಚಿವರಾದ ಡಾ. ಶರಣ್ ಪ್ರಕಾಶ್ ಪಾಟೀಲ್ ತಿಳಿಸಿದರು .
ಕಲ್ಬುರ್ಗಿ ಆಕಾಶವಾಣಿಯಲ್ಲಿ ಜೂನ್ 7ರಂದು ಜೊತೆ ಜೊತೆಯಲಿ ನೇರ ಫೋನ್ ಇನ್ ಸಂವಾದ ಕಾರ್ಯಕ್ರಮದಲ್ಲಿ ಕೇಳುಗರ ಪ್ರಶ್ನೆಗಳಿಗೆ ಉತ್ತರಿಸುತ್ತಾ ಬಡ ಮತ್ತು ಮಧ್ಯಮ ವರ್ಗದವರಿಗೆ ಚಿಕಿತ್ಸಾ ಸೌಲಭ್ಯ ದೊರೆಯಲು ತುರ್ತು ಅಪಘಾತ ಚಿಕಿತ್ಸಾ ಘಟಕಗಳು ಸೇರಿದಂತೆ ಎಲ್ಲಾ ವ್ಯವಸ್ಥೆಗಳನ್ನು ನೀಡಲು ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯ ಅಗತ್ಯವಿದ್ದು ಶೀಘ್ರದಲ್ಲೇ ಪ್ರಾರಂಭಿಸಲು ಉದ್ದೇಶಿಸಲಾಗಿದೆ. ಜಯದೇವ ಆಸ್ಪತ್ರೆಯನ್ನುಕಲಬುರ್ಗಿಯಲ್ಲಿ ಪ್ರಾರಂಭಿಸಲಾಗಿದೆ.ನೂತನ ಕಟ್ಟಡ.ನಿರ್ಮಾಣ ಕಾರ್ಯ ಪ್ರಗತಿಯಲ್ಲಿದೆ. ಹುಬ್ಬಳ್ಳಿಯಲ್ಲಿ ಕೂಡ ಪ್ರಾರಂಭಿಸಲು ಚಿಂತನೆ ನಡೆಸಲಾಗಿದೆ .ಕಲ್ಬುರ್ಗಿಯಲ್ಲಿ ಏಮ್ಸ್ ಮಾದರಿ ಆಸ್ಪತ್ರೆ ಮಾಡುವ ಪ್ರಯತ್ನ ಜಾರಿಯಲ್ಲಿದೆ. ಇಲ್ಲಿನ ಇಎಸ್ಐ ಆಸ್ಪತ್ರೆಯನ್ನು ಮೇಲ್ದರ್ಜೆಗೇರಿಸಿ ಏಮ್ಸ್ ಆಸ್ಪತ್ರೆಯನ್ನು ಪ್ರಾರಂಭಿಸಲು ಉದ್ದೇಶಿಸಲಾಗಿದೆ .
ಈ ಹಿಂದೆ ಪ್ರತಿ ಜಿಲ್ಲೆಗೊಂದು ವೈದ್ಯಕೀಯ ಕಾಲೇಜುಗಳನ್ನು ಪ್ರಾರಂಭಿಸಿ ಅತ್ಯಲ್ಪ ಶುಲ್ಕ ಹಾಗೂ ಉಚಿತ ವೈದ್ಯಕೀಯ ವ್ಯವಸ್ಥೆಯಡಿ ಚಿಕಿತ್ಸೆ ಹಾಗೂ ಶಿಕ್ಷಣ ಪಡೆಯುವ ಅವಕಾಶ ನೀಡಲಾಗಿದ್ದು ಇದರಿಂದ ಸಾಕಷ್ಟು ಪ್ರಯೋಜನವಾಗಿದೆ ಜಿಲ್ಲೆಗೊಂದು ವೈದ್ಯಕೀಯ ಶಿಕ್ಷಣ ಆಸ್ಪತ್ರೆ (ಟೀಚಿಂಗ್ ಹಾಸ್ಪಿಟಲ್) ಪ್ರಾರಂಭವಾಗುವುದರೊಂದಿಗೆ ಬಡಬಗ್ಗರಿಗೆ ಅನುಕೂಲವಾಗಿದೆ ಎಂದರು. ಕಲಬುರ್ಗಿಯಲ್ಲಿ ಕೌಶಲ್ಯ ವಿಶ್ವವಿದ್ಯಾಲಯ ಪ್ರಾರಂಭದ ಕುರಿತು ಕೂಡ ಚಿಂತನೆ ನಡೆದಿದ್ದು ಎಲ್ಲರ ಅಭಿಪ್ರಾಯದ ನಂತರ ನಿರ್ಧಾರ ಕೈಗೊಳ್ಳಲಾಗುವುದು. ಪ್ರಸ್ತುತ ನಾಲ್ಕು ಲಕ್ಷ 50ಸಾವಿರ ಪದವೀಧರರು ಮತ್ತು 50ಸಾವಿರ ಡಿಪ್ಲೋಮಾ ಪದವೀಧರರು ಪ್ರತೀ ವರ್ಷ ಹೊರ ಬರುತ್ತಿದ್ದು ಇವರಿಗೆ ಕೌಶಲ್ಯಾಧಾರಿತ ಶಿಕ್ಷಣಕ್ಕಾಗಿ ಐಟಿಐ, ಜಿಟಿಸಿ ಮತ್ತು ಕೆ ಜಿಟಿ ಟಿ ಐ ಗಳಲ್ಲಿ ಶಿಕ್ಷಣದ ವ್ಯವಸ್ಥೆ ಕಲ್ಪಿಸಲಾಗುವುದು. ಇದಕ್ಕಾಗಿ ಐಟಿಐಯಲ್ಲಿರುವ ಖಾಲಿ ಹುದ್ದೆಗಳನ್ನು ಮತ್ತು ಜೆ ಟಿ ಒ ಹುದ್ದೆಗಳನ್ನು ತುಂಬಲು ಸರ್ಕಾರ ಕ್ರಮ ಕೈಗೊಂಡಿದೆ ಎಂದು ಹೇಳಿದರು. ಕಲ್ಯಾಣ ಕರ್ನಾಟಕ ಭಾಗದ ಸಮಗ್ರ ಅಭಿವೃದ್ಧಿಗೆ 371 (ಜೆ )ಅಡಿಯಲ್ಲಿ ವಿಶೇಷ ಸೌಲಭ್ಯಗಳಿದ್ದು ಅನುದಾನಗಳನ್ನು ಪೂರ್ಣವಾಗಿ ಬಳಸಿ ಸಮಗ್ರ ಅಭಿವೃದ್ಧಿ ಕೈಗೊಳ್ಳಲಾಗುವುದು ಇದಕ್ಕಾಗಿ ಸಿದ್ದರಾಮಯ್ಯ ಸರ್ಕಾರ ದಲ್ಲಿ
ಎಂಟು ಮಂದಿ ಸಚಿವರು ಕಲ್ಯಾಣ ಕರ್ನಾಟಕ ಭಾಗದವರಾಗಿದ್ದು ಕಳೆದ ಬಾರಿ 30 ಸಾವಿರ ಉದ್ಯೋಗಗಳನ್ನು ಕಾಂಗ್ರೆಸ್ ಸರಕಾರ ಕೊಟ್ಟಿದ್ದು ಇನ್ನು ಇರುವ ಖಾಲಿ ಹುದ್ದೆಗಳನ್ನು ಶೀಘ್ರದಲ್ಲೇ ತುಂಬಲ ಕ್ರಮ ಕೈಗೊಳ್ಳಲಾಗುವುದು ಮತ್ತು ನೇಮಕಾತಿಯಲ್ಲಿ ಪಾರದರ್ಶಕತೆ ಕಾಯ್ದುಕೊಳ್ಳಲಾಗುವುದು. ಕಲ್ಯಾಣ ಕರ್ನಾಟಕದ 41 ಅಸೆಂಬ್ಲಿ ಕ್ಷೇತ್ರಗಳಲ್ಲಿ ಅಭಿವೃದ್ಧಿ ಕಾರ್ಯ ಕೈಗೊಳ್ಳಲು 5,000 ಕೋಟಿ ರೂಪಾಯಿಗಳನ್ನು ಪ್ರತಿ ವರ್ಷ ವಿನಿಯೋಗಿಸಲಾಗುವುದು ಎಂದು ಹೇಳಿದರು. ಕೆಪಿಎಸ್ಸಿ ನೇಮಕಾತಿಗೂ ಕೂಡ ಸರಕಾರ ಕ್ರಮ ಕೈಗೊಳ್ಳಲಿದ್ದು ನಿರುದ್ಯೋಗಿಗಳಿಗೆ ಉದ್ಯೋಗದ ಅವಕಾಶ ಕಲ್ಪಿಸಲಾಗುವುದು ಎಂದರು .ಕಲಬುರ್ಗಿ ವಿಮಾನ ನಿಲ್ದಾಣದಲ್ಲಿ ಹೆಚ್ಚುವರಿ ವಿಮಾನಗಳ ಹಾರಾಟಕ್ಕೆ ಕೇಂದ್ರ ನಾಗರಿಕ ವಿಮಾನಯಾನ ಖಾತೆಗೆ ಮನವಿ ಮಾಡಲಾಗುವುದು. ಕೇಂದ್ರ ಸರ್ಕಾರವು ಕಲ್ಯಾಣ ಕರ್ನಾಟಕ ಭಾಗದ ಅಭಿವೃದ್ಧಿಗೆ ಹೆಚ್ಚಿನ ಬೆಂಬಲ ನೀಡಬೇಕು ಎಂದು ಅವರು ಹೇಳಿದರು. ನಟೆ ರೋಗದಿಂದ ಹಾನಿಗೊಂಡ ರೈತರಿಗೆ ಪರಿಹಾರದ ಹಣವನ್ನು ಬಿಡುಗಡೆ ಮಾಡಲು ಮುಖ್ಯಮಂತ್ರಿಗಳು ಕ್ರಮ ಕೈಗೊಂಡಿರುವಾಗಿ ಸಚಿವ ಶರಣ್ ಪ್ರಕಾಶ್ ಪಾಟೀಲ್ ತಿಳಿಸಿದರು
ಈ ಕಾರ್ಯಕ್ರಮವನ್ನು ಸೋಮಶೇಖರ್ ಎಸ್ ರುಳಿ ನಡೆಸಿಕೊಟ್ಟರು. ಸಂಗಮೇಶ, ಮತ್ತು ಲಕ್ಷ್ಮಿಕಾಂತ್ ಪಾಟೀಲ್ ನೆರವಾದರು.
ಸನ್ಮಾನ : –
ಸಚಿವರಾಗಿ ಅಧಿಕಾರ ಸ್ಡೀಕರಿಸಿದ ನಂತರ ಮೊದಲ ಬಾರಿಗೆ ಆಕಾಶವಾಣಿಗೆ ಭೇಟಿ ಕೊಟ್ಟ ಡಾ. ಶರಣ ಪ್ರಕಾಶ ಪಾಟೀಲ್ ಅವರಿಗೆ ಶಾಲು ಹಾಗೂ ಕೃತಿ ನೀಡಿ ಗೌರವಿಸಲಾಯಿತು. ಈ ಸಂದರ್ಭದಲ್ಲಿ ಕಾಂಗ್ರೆಸ್ ನ ಜಿಲ್ಲಾಧ್ಯಕ್ಷರಾದ ಜಗದೇವ ಗುತ್ತೇದಾರ, ಚೇತನ್ ಪಾಟೀಲ್ ಓಕುಳಿ, ಡಾ. ಸದಾನಂದ ಪೆರ್ಲ, ಅನಿಲ್ ಕುಮಾರ್ ಎಚ್ ಎನ್, ಶಾರದಾ ಜಂಬಲದಿನ್ನಿ, ಅನುಷಾ ಡಿಕೆ, ರಾಘವೇಂದ್ರ ಭೋಗಲೆ, ಮಾಧುರಿ ಕುಲಕರ್ಣಿ, ದತ್ತಾತ್ರೇಯ ಪಾಟೀಲ್, ಪಲ್ಲವಿ ಜಹಾಗೀರದಾರ ಮತಿತರ ಅನೇಕರು ಉಪಸ್ಥಿತರಿದ್ದರು.ನೇರ ಫೋನ್ ಇನ್ ಸಂವಾದದಲ್ಲಿ ಸೇಡಂ ಮಾತು ವಾರದ ಬಸವರಾಜ್ ಲಿಂಗಾರೆಡ್ಡಿ ಪಾಟೀಲ್ ಮಂಡ್ಯ ಕೆ ಆರ್ ಪೇಟೆಯ ಪ್ರವೀಣ್ ಹುಮ್ನಾಬಾದ್ ನ ಸಿದ್ದಾರೆಡ್ಡಿ, ಬಳ್ಳಾರಿಯ ಯೋಗಾನಂದ ರೆಡ್ಡಿ, ಅಳಂದ ರಾಮಚಂದ್ರ, ಕರ್ನಾಟಕ ಜಾನಪದ ಪರಿಷತ್ತಿನ ಕಲಬುರ್ಗಿ ಜಿಲ್ಲಾ ಅಧ್ಯಕ್ಷರಾದ ಸಿ ಎಸ್ ಮಾಲಿ ಪಾಟೀಲ್, ಸಿದ್ರಾಮ ಕುಂಬಾರ್, ನರೇಶ್ ರೆಡ್ಡಿ ಗೌಡನಹಳ್ಳಿ, ಯೋಗೇಶ್ ಭಾಲ್ಕಿ ಸಾಗರ್ ಮುಧೋಳ್ ಗಿರೀಶ್ ಬೀದರ್, ಪ್ರವೀಣ್ ಕುಲಕರ್ಣಿ ಕಲಬುರ್ಗಿ, ಶೈಲೇಂದ್ರ ಬಳ್ಳಾರಿ ಪಾಲ್ಗೊಂಡರು