ಶೀಘ್ರದಲ್ಲಿ ಗುರುಭವನ ನಿರ್ಮಾಣ ಸಿದ್ದಲಿಂಗಪ್ಪ

ಕೊಟ್ಟೂರು, ಜ02: ಶೀಘ್ರದಲ್ಲಿ ಕೊಟ್ಟೂರು ಪಟ್ಟಣದಲ್ಲಿ ಬಿಇಒ ಕಚೇರಿ ಆರಂಭಿಸುವದರ ಜೋತೆಗೆ ಗುರುಭವನ ನಿರ್ಮಾಣಮಾಡುವ ಪ್ರಮಾಣಿಕ ಪ್ರಯತ್ನ ಮಾಡುವೆ ಎಂದು ಶಿಕ್ಷಕರ ಸಂಘದ ಅಧ್ಯಕ್ಷ ಅಣಜಿಸಿದ್ದಲಿಂಗಪ್ಪ ಹೇಳಿದರು.
ತಾಲೂಕಿನ ಜಾಗಟಗೇರಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದರು.
ಶಿಕ್ಷಕರು ನಮ್ಮ ತಂಡದ ಮೇಲೆ ಭರವಸೆಯನ್ನು ಇಟ್ಟು ಜಯಶಾಲಿಗಳನ್ನಾಗಿ ಮಾಡಿದ್ದಾರೆ. ಶಿಕ್ಷಕರ ಭರವಸೆಯನ್ನು ಪ್ರಮಾಣಿಕವಾಗಿ ಮಾಡಲಾಗುವುದು ಎಂದರು.