ಜಗಳೂರು.ಜೂ.೧೩; ಪಟ್ಟಣದ ಕೆ.ಎಸ್.ಆರ್.ಟಿ. ಸಿ ಮಿನಿ ಬಸ್ ನಿಲ್ದಾಣದ ಬಳಿ ಶಕ್ತಿ ಯೋಜನೆಗೆ ಚಾಲನೆ ನೀಡಿ ನಂತರ ಅವರು ಮಾತನಾಡಿದರು.ತಾಲೂಕಿನಲ್ಲಿ ವಿದ್ಯಾರ್ಥಿಗಳಿಗೆ,ಸಾರ್ವಜನಿಕರಿಗೆ ಗ್ರಾಮೀಣ ಭಾಗದಿಂದ ಸಮರ್ಪಕವಾಗಿ ಸರ್ಕಾರಿ ಬಸ್ ಗಳಿಲ್ಲದೆ ತೀವ್ರ ಸಮಸ್ಯೆ ಎದುರಿಸುತ್ತಿದ್ದು.ಕೆಎಸ್ ಆರ್ ಟಿಸಿ ಡಿಪೋ ಅಗತ್ಯವಿದೆ.ಅಲ್ಲದೆ ತಾತ್ಕಾಲಿಕವಾಗಿ ಜಗಳೂರು ಬೆಂಗಳೂರು ಮಾರ್ಗವಾಗಿ ಶೀಘ್ರ ಪ್ರತ್ಯೇಕ ಕೆಎಸ್ ಆರ್ ಟಿಸಿ ಬಸ್ ವ್ಯವಸ್ಥೆ ಒದಗಿಸಲಾಗುವುದು ಎಂದು ಹೇಳಿದರು.ಕಾಂಗ್ರೆಸ್ ಪಕ್ಷದ ಗ್ಯಾರಂಟಿ ಯೋಜನೆಗಳಲ್ಲಿ ಒಂದಾಗಿರುವ ಶಕ್ತಿ ಯೋಜನೆಗೆ ಇಂದು ಚಾಲನೆ ನೀಡಿದ್ದು ಮುಖ್ಯಮಂತ್ರಿ ಸಿದ್ದ ರಾಮ ಯ್ಯ ಉಪಮುಖ್ಯಮಂತ್ರಿ ಡಿಕೆ ಶಿವಕುುಮಾರ್ ರವರು ನುಡಿದಂತೆ ನಡೆದಿದ್ದಾರೆ.ಇದರಿಂದ ಮಹಿಳೆಯರು ರಾಜ್ಯದಲ್ಲಿ ಉಚಿತ ಪ್ರಯಾ ಣಕ್ಕೆ ಅವಕಾಶವಿದ್ದು.ಸದುಪಯೋಗ ಪಡೆದುಕೊಳ್ಳಬೇಕು ಎಂದರು.ಶಾಸಕ ದೇವೇಂದ್ರಪ್ಪ ಪಟ್ಟಣದ ಪ್ರಮುಖ ರಸ್ತೆಯಲ್ಲಿ ಮಹಿಳೆಯರಿಗೆ ಟಿಕೇಟ್ ವಿತರಿಸಿ ಬಸ್ ನಲ್ಲಿ ಸಂಚರಿಸಿ ಶಾಸಕರು ತಾವೇ ಮಹಿಳೆಯರಿಗೆ ಉಚಿತ ಟಿಕೆಟ್ ಕೊಡುವ ಮೂಲಕ ಚಾಲನೆ ನೀಡಲಾಯಿತು.ಈ ಸಂದರ್ಭದಲ್ಲಿ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಅಸಗೋಡು ಜಯಸಿಂಹ, ಕೆಪಿಸಿಸಿ ಎಸ್ ಟಿ ಘಟಕದ ರಾಜ್ಯಾಧ್ಯಕ್ಷ ಕೆ.ಪಿ ಪಾಲಯ್ಯ,ಕೆಪಿಸಿಸಿ ತಾಲೂಕು ಉಸ್ತುವಾರಿ ಕಲ್ಲೇಶ್ ರಾಜ್ ಪಟೇಲ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಷಂಷೀರ್ ಅಹಮ್ಮದ್, ತಹಶೀಲ್ದಾರ್ ಸಂತೋಷ್ ಕುಮಾರ್,ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಲೋಕ್ಯಾನಾಯ್ಕ,ಸಮಾಜಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ಬಿ.ಮಹೇಶ್ವರಪ್ಪ,ಸಿಪಿಐ ಶ್ರೀನಿವಾಸ್, ಮುಖಂಡರಾದ ಪಲ್ಲಾಗಟ್ಟೆ ಶೇಖರಪ್ಪ,ಸಿ.ತಿಪ್ಪೇಸ್ವಾಮಿ,ವೀರಣ್ಣಗೌಡ,ಪ್ರಕಾಶ್,ವೆಂಕಟೇಶ್,ಪ.ಪಂ ಸದಸ್ಯರಾದ ರವಿಕುಮಾರ್,ರಮೇಶ್ ರೆಡ್ಡಿ,ಶಕೀಲ್ ಅಹಮ್ಮದ್,ಲುಕ್ಮಾನ್ ಖಾನ್,ದಾವಣಗೆರೆ ಕೆಎಸ್ಆರ್ ಟಿಸಿ ಘಟಕ 2 ವ್ಯವಸ್ಥಾಪಕ ಮರುಳಸಿದ್ದಪ್ಪ,ಸಹಾಯಕ ಸಂಚಾರ ನಿರೀಕ್ಷಕ ಅಬ್ದುಲ್ ರಜಾಕ್,ಸಿಬ್ಬಂದಿಗಳಾದ ರೇಖಾ ,ಉಮಾ,ವನಜಾಕ್ಷಿ, ಸಂತೊಷ್,ಪುಟ್ಟಪ್ಪ ಬಿ ವಿ. ಮಂಜುನಾಥ್,ಶಾಂತಕುಮಾರ್, ಅಬ್ದುಲ್ ಖಾದರ್,ಇದ್ದರು.