ಶೀಘ್ರದಲ್ಲಿಯೇ ದೇವಾಲಯ ಕಟ್ಟಡ ಪೂರ್ತಿ: ಸತೀಶ ಪಾಟೀಲ

ಭಾಲ್ಕಿ : ಜೂ.11:ಶೀಘ್ರದಲ್ಲಿಯೇ ಹನುಮಾನ ದೇವಾಲಯದ ಕಟ್ಟಡ ಪೂರ್ತಿಗೊಳಿಸುತ್ತೇವೆ ಎಂದು ಶ್ರೀ ಹನುಮಾನ ಮಂದಿರ ಚಾರಿಟೇಬಲ್ ಟ್ರಷ್ಟ್‍ನ ಅಧ್ಯಕ್ಷ ಸತೀಶ ಪಾಟೀಲ ಹೇಳಿದರು. ಪಟ್ಟಣದ ಸುಭಾಷ ಚೌಕನ ಬಾಲಾಜಿ ನಗರದಲ್ಲಿನ ಹನುಮಾನ ಮಂದಿರದ ಆವರಣದಲ್ಲಿ ಮಂಟಪದ ಕಾರ್ಯಾಗಾರದ ಗುದ್ದಲಿ ಪೂಜೆ ನೆರವೇರಿಸಿ ಅವರು ಮಾತನಾಡಿದರು.

ಇದೇ ಸಂದರ್ಭದಲ್ಲಿ ಈ ಭಾಗದ ಖ್ಯಾತ ಗುತ್ತಿಗೆದಾರರಾದ ಚನ್ನಬಸವಾ ಶುಭಾಂಗಿ ಬಳತೆ ದಂಪತಿಗಳಿಂದ ಗುದ್ದಲಿ ಪೂಜೆಯನ್ನು ಬಾಲಾಜಿ ಮಂದಿರದ ಮುಖ್ಯ ಪೂಜಾರಿ ವಾಸು ಮಹಾರಾಜ ಇವರ ನೇತೃತ್ವದಲ್ಲಿ ನೆರವೇರಿತು.

ಶ್ರೀ ಹನುಮಾನ ಮಂದಿರ ಚಾರಿಟೇಬಲ್ ಟ್ರಷ್ಟ್‍ನ ಪದಾಧಿಕಾರಿಗಳು ಹಾಗೂ ಬಾಲಾಜಿ ನಗರ ಬಡಾವಣೆಯ ಗಣ್ಯಮಾನ್ಯರುಗಳಾದ ಯಾದವರಾವ ಕನಸೆ, ವಿಥಲರಾವ ಸಾಳುಂಕೆ, ಪ್ರಭು ಡಿಗ್ಗೆ, ಸಂತೋಷ ಸ್ವಾಮಿ, ರಾಜಕುಮಾರ ಪಲ್ಲವಿ, ರಾಜಗೋಪಾಲ ಬಿಯಾಣಿ, ಪತ್ರಕರ್ತರಾದ ಗಣಪತಿ ಬೋಚರೆ, ಸೋಮನಾಥ ಮುದ್ದಾ, ರಮೇಶ ರಾಜೋಳೆ, ಪ್ರೊ.ಸಂತೋಷ ಮಾನಕಾರಿ, ವೈಜಿನಾಥ ಭುರೆ, ಬಸವರಾಜ ರಂಜೇರೆ, ಹಣಮಂತ ಕಾರಾಮುಂಗೆ, ಕುಪೇಂದ್ರ ಜಗಶೆಟ್ಟೆ, ಪ್ರದೀಪ ವಟಂಬೆ, ಸುರೇಶ ಬೀರಿ, ಶೋಭಾ ಟೀಚರ, ಪ್ರಭು ಪಟ್ನೆ ಸೇರಿದಂತೆ ಬಡಾವಣೆಯ ಭಕ್ತರು ಮಹಿಳೆಯರು ಉಪಸ್ಥಿತರಿದ್ದರು. ಉದಗೀರನ ಸುಪ್ರಸಿಧ್ಧ ವ್ಯಾಪಾರಿ ಬಾಲಾಜಿ ಮುಕ್ಕಾವಾರ ಸೇಠಜಿಯವರು ಹನುಮಾನ ದೇವಸ್ಥಾನಕ್ಕೆ ತಮ್ಮ ಸ್ತಂತ ವಿಶಾಲವಾದ ಅಂದಾಜು ಒಂದು ಕೋಟಿ ರೂ. ಬೆಲೆಬಾಳುವ ಪ್ಲಾಟ್ ಕೊಟ್ಟು ತಮ್ಮ ಔದಾರ್ಯತೆ ಮೆರೆದಿದ್ದಾರೆ. ಪ್ರಾರಭದಲ್ಲಿ ವಿಶ್ವಲಕ್ಷ್ಮಿ ಪ್ರಭುರಾವ ಡಿಗ್ಗೆ ವಚನ ಗಾಯನ ನಡೆಸಿಕೊಟ್ಟರು.