
ಸಂಜೆವಾಣಿ ವಾರ್ತೆ
ಹಗರಿಬೊಮ್ಮನಹಳ್ಳಿ. ಜು.17 ತಾಲೂಕಿನ ಸೀಗನಹಳ್ಳಿ ಎರಡು ಗ್ರಾಮದ ರೈತ ಮಹಿಳೆ ಕೊಳ್ಳಿ ಅನ್ನಕ್ಕ (60) ಇವರು ಸಾಲದ ಹೊರೆಯಿಂದ ಬೇಸತ್ತು ಶನಿವಾರ ವಿಷ ಕುಡಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ವ್ಯವಸಾಯಕ್ಕಾಗಿ ತಂಬ್ರಹಳ್ಳಿಯ ಎಸ್ ಬಿ ಐ ನಲ್ಲಿ 3.5 ಲಕ್ಷ ಸಾಲ ಮಾಡಿದ್ದರೆಂದು ಸಾಲ ಮರುಪಾವತಿ ಮಾಡದೇ ಇರುವಾಗ ಬ್ಯಾಂಕಿನವರು ವಸೂಲಾತಿಯ ನೋಟೀಸ್ ನೀಡಿದ್ದಕ್ಕಾಗಿ ಮನನೊಂದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಅವರ ಪುತ್ರ ಕೊಳ್ಳಿ ಮರಡ್ಡಿ ತಂಬ್ರಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.