ಶೀಕ್ಷಕರ ವರ್ಗಾವಣೆ ಕೌನ್ಸಿಲಿಂಗ್ ಸ್ಥಳದಲ್ಲೇ ಆದೇಶ ವಿತರಣೆ

ಕೋಲಾರ, ಡಿ.೮: ಸಾರ್ವಜನಿಕ ಶಿಕ್ಷಣ ಇಲಾಖೆಯಿಂದ ಸೋಮವಾರ ನಡೆದ ವರ್ಗಾವಣೆ ಕೌನ್ಸಿಲಿಂಗ್‌ನಲ್ಲಿ ಸಿಆರ್‍ಪಿ ಹಾಗೂ ಬಿಆರ್‍ಪಿಗಳಾಗಿದ್ದವರಿಗೆ ಶಾಲೆಗಳಲ್ಲಿ ಸ್ಥಳ ಆಯ್ಕೆಗೆ ಅವಕಾಶ ಕಲ್ಪಿಸಲಾಗಿದ್ದು, ಸ್ಥಳದಲ್ಲೇ ಆದೇಶಪತ್ರವನ್ನು ಶಿಕ್ಷಣಾಧಿಕಾರಿಗಳಾದ ಎ.ಎನ್.ನಾಗೇಂದ್ರಪ್ರಸಾದ್ ಹಾಗೂ ಸಿ.ಆರ್.ಅಶೋಕ್ ವಿತರಿಸಿದರು.
ಈಗಾಗಲೇ ಪ್ರಾಥಮಿಕ ಹಾಗೂ ಪ್ರೌಢಶಾಲೆಗಳ ಶಿಕ್ಷಕರ ಜಿಲ್ಲೆಯೊಳಗಿನ ವರ್ಗಾವಣೆ ಪ್ರಕ್ರಿಯೆಯನ್ನು ಸುಗಮವಾಗಿ ಮುಗಿಸಿದ್ದು, ಇಂದು ಕೌನ್ಸಿಲಿಂಗ್ ಗೊಂದಲಗಳಿಲ್ಲದೇ ಮುಗಿದಿದೆ ಎಂದು ನಾಗೇಂದ್ರಪ್ರಸಾದ್ ತಿಳಿಸಿದರು.
ಈವರೆಗೂ ಕ್ಲಸ್ಟರ್ ಸಂಪನ್ಮೂಲ ವ್ಯಕ್ತಿಗಳಾಗಿದ್ದವರಿಗೆ ಪ್ರಾಥಮಿಕ ಶಾಲಾ ಶಿಕ್ಷಕರಾಗಿ ಸ್ಥಳ ಆಯ್ಕೆಗೆ ಅವಕಾಶ ಕಲ್ಪಿಸಲಾಗಿದೆ ಹಾಗೆಯೇ ಕ್ಷೇತ್ರ ಸಂಪನ್ಮೂಲ ವ್ಯಕ್ತಿಗಳಾಗಿದ್ದವರಿಗೆ ಅವರ ಅವಧಿ ಮುಗಿದ ಕಾರಣ ಪ್ರೌಢಶಾಲಾ ಶಿಕ್ಷಕರಾಗಿ ಹೋಗಲು ವರ್ಗಾವಣೆ ಕೌನ್ಸಿಲಿಂಗ್‌ನಲ್ಲಿ ಅವಕಾಶ ಕಲ್ಪಿಸಲಾಗಿದೆ ಎಂದು ಅವರು ತಿಳಿಸಿದರು.
ಈ ಸಂದರ್ಭದಲ್ಲಿ ಡಿವೈಪಿಸಿ ಗಂಗರಾಮಯ್ಯ, ವಿಷಯ ಪರಿವೀಕ್ಷರಾದ ಗಾಯತ್ರಿ, ಶಶಿವಧನ, ಕೃಷ್ಣಪ್ಪ,ಬಿ.ವೆಂಕಟೇಶಪ್ಪ, ಎವೈಪಿಸಿ ಸಿದ್ದೇಶ್, ಅಧೀಕ್ಷಕರಾದ ಮಂಜುನಾಥರೆಡ್ಡಿ, ಗೋವಿಂದಗೌಡ, ಸಿಬ್ಬಂದಿ ಲಕ್ಷ್ಮಣ್,ಚಿರಂಜೀವಿ ಮತ್ತಿತರರಿದ್ದರು.