ಶಿಸ್ತು ಲೇಖಕರಲ್ಲಿನ ಮುಖ್ಯ ಲಕ್ಷಣ: ಎಸ್.ಟಿ.ರವಿಕುಮಾರ್

ಮೈಸೂರು:ಏ:10: ಶಿಸ್ತು ಲೇಖಕರÀಲ್ಲಿನ ಮುಖ್ಯ ಲಕ್ಷಣ ಎಂದು ಮೈಸೂರು ಜಿಲ್ಲಾ ಪತ್ರಕರ್ತರ ಸಂಘದ ಅಧ್ಯಕ್ಷರಾದ ಎಸ್.ಟಿ. ರವಿಕುಮಾರ್ ಅಭಿಪ್ರಾಯ ಪಟ್ಟರು.
ಅವರು ಇಂದು ಬೆಳಿಗ್ಗೆ ನಗರದ ಕೆ.ಎಂ.ಪುರಂನಲ್ಲಿರುವ ಶ್ರೀಶಾರದ ವಿಲಾಸ ವಿದ್ಯಾಸಂಸ್ಥೆಯ ಶತಮಾನೋತ್ಸವ ಭವನದಲ್ಲಿ ಸಂಸ್ಕøತಿ ಪ್ರಕಾಶನ ಮೈಸೂರು, ವಿಜಯ ಫೌಂಡೇಶನ್ ಮೈಸೂರು ಹಾಗೂ ಅಖಿಲ ಭಾರತೀಯ ಸಾಹಿತ್ಯ ಪರಿಷತ್ ಮೈಸೂರು ಇವುಗಳ ಸಂಯುಕ್ತಾಶ್ರಯದಲ್ಲಿ ಆಯೋಜಸಿದ್ದ ಡಾ|| ವಿ. ರಂಗನಾಥರವರು ರಚಿಸಿರುವ ಪುಸ್ತಕಗಳ ಬಿಡುಗಡೆ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಆಗಮಿಸಿ ಮಾತನಾಡುತ್ತಾ, ಲೇಖಕ ರಂಗನಾಥ್‍ರವರು ಎರಡನೇ ದರ್ಜೆ ಉನ್ನತ ಅಧಿಕಾರಿಯಾಗಿದ್ದ ಸಂದರ್ಭದಲ್ಲಿ ತೋರುತ್ತಿದ್ದ ಶಿಸ್ತನ್ನು ತಮ್ಮ ಕೃತಿ ರಚನೆ ವೃತ್ತಿಯಲ್ಲಿಯೂ ಮುಂದುವರೆಸಿಕೊಂಡು ಬರುತ್ತಿದ್ದಾರೆ. ಹಾಗಾಗಿ ಶಿಸ್ತು ಅವರ ಮುಖ್ಯಲಕ್ಷಣ ಎಂದರೆ ಅತಿಶಯೋಕ್ತಿಯೇನಲ್ಲ ಎಂದರು.
ಲೇಖಕ ರಂಗನಾಥ್‍ರವರೊಂದಿಗೆ ನಾನು ಸರಿಸುಮಾರು 15 ವರ್ಷಗಳ ಹಿಂದಿನಿಂದಲೂ ನಿಕಟ ಸಂಪರ್ಕ ಹೊಂದಿದ್ದೇನೆ. ಅವರು ಸರ್ಕಾರಿ ಸೇವೆಯಿಂದ ನಿವೃತ್ತಿಗೊಂಡರೂ ಕೃತಿರಚನೆಗಳಲ್ಲಿ ತೊಡಗಿಸಿಕೊಂಡಿರುವುದು ನನಗೆ ಬಹಳ ಸಂತಸ ತಂದಿದೆ. ನಿವೃತ್ತಿ ನಂತರ ಜೀವನದಲ್ಲಿ ಸುಖಮಯ ಜೀವನ ನಡೆಸುವ ಬದಲು ಪುಸ್ತಕಗಳನ್ನು ಬರೆಯುತ್ತಿರುವುದನ್ನೇ ನೋಡಿದರೆ ಅವರ ಸಾಹಿತ್ಯಾಸಕ್ತಿ ಎಷ್ಟರ ಮಟ್ಟಿದದ್ದಾಗಿದೆ ಎಂಬುದಕ್ಕೆ ಇಂದು ರಚಿಸಿರುವ 7 ಕಥೆಗಳೇ ಉತ್ತಮ ನಿದರ್ಶನ ಎಂದರು.
ಮೈಸೂರು ವಿವಿ ಪತ್ರಿಕೋದ್ಯಮ ವಿಭಾಗದ ಮುಖ್ಯಸ್ಥರು ಹಾಗೂ ಪ್ರಾಧ್ಯಾಪಕರಾದ ನಿರಂಜನವಾನಳ್ಳಿ ರಂಗನಾಥ್ ನೂತನವಾಗಿ ರಚಿಸಿರುವ ನಾಲ್ವಡಿ ಕೃಷ್ಣರಾಜ ಒಡೆಯರ್ ಕಾಲದ ಕಲಾವಿದರು, ಕೋಪವೇ ಸೋಲು-ಸಹನೆಯೇ ಗೆಲುವು, ನಂಬಿಕೆಗಳಿಸೋಣ-ನಂಬಿಕೆ ಉಳಿಸೋಣ, ಮನದೊಡ್ಡದಾಯಿತು-ಮನಚಿಕ್ಕದಾಯಿತು, ಇಲಿಗೆ ಅಂಜಿದ ಹುಲಿ ಸೇರಿದಂತೆ ಇನ್ನಿತರ ಕೃತಿಗಳು, ಶಿಶುಗೀತೆಗಳು ಮತ್ತು ಮಕ್ಕಳ ಮೂರು ಕಾದಂಬರಿಗಳು ಎಂಬ ಪುಸ್ತಕಗಳನ್ನು ಲೋಕಾರ್ಪಣೆಗೊಳಿಸಿದರು.
ಇದೇ ಸಂದರ್ಭದಲ್ಲಿ ರವಿಕುಮಾರ್‍ರವರು ತಾವು ಕರ್ತವ್ಯ ನಿರ್ವಹಿಸುತ್ತಿರುವ ಮೈಸೂರು ಮಿತ್ರ ಹಾಗೂ ಸ್ಟಾರ್ ಆಫ್ ಮೈಸೂರು ಪತ್ರಿಕೆಗಳಿಗೆ ಪ್ರತಿ ವಾರ ವಿವಿಧ ವಿಷಯಗಳ ಬಗ್ಗೆ ಅಂಕಣಗಳನ್ನು ಪ್ರಕಟಿಸಲು ರಂಗನಾಥ್‍ರವರು ಸಹಕರಿಸುವುದನ್ನು ನೆನಪು ಮಾಡಿಕೊಂಡರು. ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚಿನ ಪುಸ್ತಕಗಳನ್ನು ರಚಿಸುವ ಶಕ್ತಿಯನ್ನು ನೀಡಲೆಂದು ನಾಡ ದೇವತೆ ಶ್ರೀ ಚಾಮುಂಡೇಶ್ವರಿ ದೇವಿಯನ್ನು ಪ್ರಾರ್ಥಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮೈಸೂರಿನ ಹಿರಿಯ ವಿದ್ವಾಂದರಾದ ಡಾ|| ಎನ್.ಎಸ್. ತಾರಾನಾಥ್ ವಹಿಸಿದ್ದರು, ಲೇಖಕ ಹಾಗೂ ಪುಸ್ತಕ ಸಲಹೆಗಾರರಾದ ಸಂಸ್ಕøತಿ ಸುಬ್ರಹ್ಮಣ್ಯ ಹಾಗೂ ಅನೇಕ ಸಾಹಿತ್ಯಾಭಿಮಾನಿಗಳು ಉಪಸ್ಥಿತರಿದ್ದರು.