ಶಿಸ್ತು ಕ್ರಮಕ್ಕೆ ದದ್ದಾಪುರಿ ಆಗ್ರಹ

ಧಾರವಾಡ ಮಾ.24: ನಗರದ ಕೃಷಿ ವಿಶ್ವವಿದ್ಯಾಲಯ ಕೋಟಿ ವಿದ್ಯೆಗಳಲ್ಲಿ ಮೇಟಿ ವಿದ್ಯೆಯೇ ಮೇಲು' ಎಂದು ಧ್ಯೇಯವಾಕ್ಯವನ್ನು ಅಳವಡಿಸಿದೆ. ಆದರೆ ಇಷ್ಟು ವರ್ಷಗಳವರೆಗೂ ಸಾರ್ವಜನಿಕ ಮಾಹಿತಿ ಅಧಿಕಾರಿಯ ಕುರಿತು ಸಾರ್ವಜನಿಕರಿಗೆ ಪ್ರದರ್ಶಿತವಾಗುವಂತೆ ಫಲಕವನ್ನು ಹಾಕದೆ ಅP್ಷÀರಶಃ ಸಾರ್ವಜನಿಕರನ್ನು ಕತ್ತಲಲ್ಲಿಟ್ಟು ಕೃಷಿ ವಿ.ವಿ. ಲೂಟಿ ಮಾಡುತ್ತಿದೆ. ಅದಕ್ಕಾಗಿ ಕೃಷಿ ವಿವಿಯ ಧ್ಯೇಯವಾಕ್ಯವುಕೋಟಿ ವಿದ್ಯೆಗಳಲ್ಲಿ ಲೂಟಿ ವಿದ್ಯೇ ಮೇಲು` ಎಂಬಂತಾಗಿದೆ. ಈ ಕೂಡಲೇ ಜಿಲ್ಲಾಧಿಕಾರಿಗಳು ಈ ಬಗ್ಗೆ ಕ್ರಮ ಜರುಗಿಸಬೇಕು. ಇಲ್ಲವಾದರೆ ನಮ್ಮ ಹೋರಾಟ ಈ ನೆಲದ ನ್ಯಾಯಕ್ಕಾಗಿ ಅನಿವಾರ್ಯವಾಗುತ್ತದೆ ಎಂದು ಆಗ್ರಹಿಸಿ ರಾಬರ್ಟ ದದ್ದಾಪುರಿ ಹಾಗೂ ಆನಂದ ಜಾಧವ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರು.
ಅವರು ಆಯುಕ್ತರು, ಸಾರ್ವಜನಿಕ ಮಾಹಿತಿ ಆಯೋಗ, ಕರ್ನಾಟಕ ರಾಜ್ಯ, ಬೆಂಗಳೂರು ಈ ಕುರಿತು ಕ್ರಮವನ್ನು ತೆಗೆದುಕೊಂಡು ಕೃಷಿ ವಿಶ್ವವಿದ್ಯಾಲಯ, ಕೃಷಿನಗರ, ಧಾರವಾಡ ಇಲ್ಲಿ ಸಾರ್ವಜನಿಕರಿಗೆ ಪ್ರದರ್ಶಿತವಾಗುವಂತೆ, ಸಂಬಂಧಿತ ಸಾರ್ವಜನಿಕ ಮಾಹಿತಿ ಅಧಿಕಾರಿಗಳ ಫಲಕವನ್ನು ಅಳವಡಿಸಲು ಶೀಘ್ರವಾಗಿ ಸೂಚಿಸಬೇಕು. ಈವರೆಗೆ ಫಲಕವನ್ನು ಹಾಕದೇ ಕೇಂದ್ರ ಸರ್ಕಾರದ ಕಾನೂನನ್ನು ತಿರಸ್ಕರಿಸಿರುವ ಮತ್ತು ಸಾರ್ವಜನಿಕರಿಗೆ ಈ ಕುರಿತು ಕತ್ತಲೆಯಲ್ಲಿಟ್ಟಿರುವ ಕೃಷಿ ವಿಶ್ವವಿದ್ಯಾಲಯದ ಅಧಿಕಾರಿಗಳ ಮೇಲೆ ಶಿಸ್ತುಕ್ರಮವನ್ನು ತೆಗೆದುಕೊಳ್ಳಬೇಕು ಎಂದು ಕಳಕಳಿಯಿಂದ ದೂರನ್ನು ನೀಡುತ್ತಿರುವುದಾಗಿ ರಾಬರ್ಟ್ ದದ್ದಾಪುರಿ ವಿವರಿಸಿದರು.