ಶಿಷ್ಯನಾದವನು ಗುರುವಿನ ಸಮಾನ ನಿಲ್ಲಬೇಕು

ಕಲಬುರಗಿ:ಸೆ.6:ನಗರದ ರಮಾಬಾಯಿ ಜಹಾಗೀರದಾರ (ಆರ್.ಜೆ) ಸ್ವತಂತ್ರ ಪದವಿಪೂರ್ವ ಕಾಲೇಜಿನಲ್ಲಿ ಸರ್ವಪಲ್ಲಿ ರಾಧಾಕೃಷ್ಣನವರ 135ನೇ ಜಯಂತಿಯನ್ನು ಶಿಕ್ಷಕರ ದಿನಾಚರಣೆಯನ್ನಾಗಿ ವಿಜ್ರಂಭಣೆಯಿಂದ ಆಚರಿಸಲಾಯಿತು.

ಮುಖ್ಯಅಥಿತಿಗಳಾಗಿ ಶ್ರೀ ಶಿವಶರಣಪ್ಪ ಮುಳೆಗಾಂವ್ ಉಪನಿರ್ದೇಶಕರು ಪದವಿ ಪೂರ್ವ ಶಿಕ್ಷಣ ಇಲಾಖೆ ಕಲಬುರಗಿ ಅವರು ಜ್ಯೋತಿ ಬೆಳೆಗಿಸುವುದರ ಮುಖಾಂತರವಾಗಿ ವಿದ್ಯಾರ್ಥಿಗಳಿಗೆ ಉಪದೇಶ ನೀಡಿದರು. ಪ್ರಾಂಶುಪಾಲರಾದ ಡಾ|| ಭುರ್ಲಿ ಪ್ರಹ್ಲಾದ ಅವರು ಬಾವಚಿತ್ರಕ್ಕೆ ಪೂಜೆಯನ್ನು ಸಲ್ಲಿಸಿದರು. ಕುಮಾರಿ ನಾಗವೇಣಿ ಪ್ರಾರ್ಥನೆ ಗೀತೆ ಹಾಡಿದಳು. ಅತಿಥಿಗಳ ಪರಿಚಯವನ್ನು ಮಳೇಂದ್ರ ಹಿರೇಮಠ ನಡೆಸಿಕೊಟ್ಟರು.

ಉಪನಿರ್ದೇಶಕರು ಮಾತನಾಡುತ್ತಾ ಪಾಲಕರು ತಮ್ಮ ಇಚ್ಚೆಗಳನ್ನು ಕಡಿಮೆ ಮಾಡಿ ಮಕ್ಕಳಿಗೆ ಭವಿಷ್ಯ ರೂಪಿಸಿ ಕೊಡುತ್ತಿದ್ದಾರೆ. ಮಕ್ಕಳಿಗೆ ಅವರ ತಂದೆ ತಾಯಿಗಳೇ ಸ್ಪೂರ್ತಿಯಾಗಿದ್ದಾರೆ. ವಿದ್ಯೆಯು ಬದುಕಿಗೆ ಅವಶ್ಯವಾಗಿದ್ದು ಚೆನ್ನಾಗಿ ಅರ್ಥ ಮಾಡಿಕೊಳ್ಳಬೇಕು. ವೈಜ್ಞಾನಿಕ ಧೃಷ್ಟಿಕೋನ ಇಟ್ಟುಕೊಂಡು ಯಶಸ್ವಿಯಾಗಿ ಜ್ಞಾನ ಹೆಚ್ಚಿಸಿಕೊಳ್ಳಬೇಕು. ಸಾಮಾಜಿಕ ಪರಿಜ್ಞಾನ ಅವಶ್ಯಕ ಗುರುವಿನ ಗುಲಾಮನಾಗುವತನಕ ದೊರೆಯದಣ್ಣಮುಕುತಿ ಎಂದು ಹೇಳುತ್ತಾ ಶಿಷ್ಯನಾದವನು ಗುರುವಿನ ಸಮಾನ ನಿಲ್ಲಬೇಕು. ಶಿಕ್ಷಕರು ವಿದ್ಯಾರ್ಥಿಯ ಬದುಕಿಗೆ ಮಾದರಿಯಾಗಬೇಕು. ಗುರು ಮಾರ್ಗದರ್ಶಕನಾಗಿ ಹಲವಾರು ವಿಷÀಯಗಳು ತಿಳಿದುಕೊಂಡಿರಬೇಕು. ಕನಸು ನನಸಾಗಿಸಬೇಕು. ಹೃದಯದಿಂದ ನೋಡದೇ ಬುದ್ಧಿ ಶಕ್ತಿಯಿಂದ ಕೆಲಸಮಾಡಿ ವಿದ್ಯಾರ್ಥಿಗಳ ಗುರಿ ತಲುಪುವಂತಾಗಬೇಕು ಎಂದು ಕಿವಿಮಾತು ಹೇಳಿದರು. ಪ್ರಕಾಶ ಕಂಟೇಕರ್ ಹಾಗೂ ಚಂದ್ರಭಾನು ಮಾತನಾಡಿದರು.

ಪ್ರಾಂಶುಪಾಲರಾದ ಡಾ|| ಭುರ್ಲಿ ಪ್ರಹ್ಲಾದ ಅವರು ಮಾತಾಡುತ್ತಾ ಇಂದಿನ ಸಮಾಜದಲ್ಲಿ ಕೃಷಿಕ, ಸೈನಿಕ ಮತ್ತು ಶಿಕ್ಷಕನ ಸೇವೆ ಮಹತ್ವದಾಗಿದೆ. ಕೃಷಿಕನಿಲ್ಲದ ಬದುಕು, ಸೈನಿಕನಿಲ್ಲದ ರಕ್ಷಣೆ, ಗುರುವಿಲ್ಲದ ವಿದ್ಯೆ ಅಪೂರ್ಣವಾಗುವುದು. ಇವರ ಸೇವೆ ಅತ್ಯಂತ ಶ್ಲಾಘನಿಯವಾದುದು. ಶಿಕ್ಷಕರ ವೃತ್ತಿ ನಮಗೆ ಬಹಳ ಹೆಮ್ಮೆ ತರುತ್ತದೆ. ಶಿಕ್ಷಕನಿಗಿರುವ ಮಹತ್ವ ಗೌರವಗಳು ಒಬ್ಬ ಉನ್ನತ ಅಧಿಕಾರಿಗಳಿಗೂ ಇರುವುದಿಲ್ಲ. ಒಬ್ಬ ಶಿಕ್ಷಕನು ತನ್ನ ಜೀವನವನ್ನು ವಿದ್ಯಾರ್ಥಿಗಳಿಗಾಗಿ ಹಗಲಿರುಳು ದುಡಿದು ಸಾರ್ಥಕ ಜೀವನ ಮಾಡುವುದನ್ನು ವಿದ್ಯಾರ್ಥಿಗಳು ತಿಳಿದುಕೊಳ್ಳಬೇಕು. ಶಿಕ್ಷಕರಿಗೆ ಸಲ್ಲಿಸುವ ಕಾಣಿಕೆಯೆಂದರೆ ಪರೀಕ್ಷೆಯಲ್ಲಿ ಉತ್ತಮ ಫಲಿತಾಂಶ ತಂದರೆ ಶಿಕ್ಷಕರು ಮೊದಲು ಖುಷಿ ಪಡುತ್ತಾರೆ. ಅದುವೇ ಅವರಿಗೆ ಮಹತ್ವದ ಕೊಡುಗೆಯಾಗಿದೆ.

ಉತ್ತಮ ಶಿಕ್ಷಕನ ಗುಣಗಳೆಂದರೆ, ಆತ್ಮ ವಿಶ್ವಾಸ, ಉತ್ತೇಜನೆ ನೀಡುವುದು, ಪಾರದರ್ಶಕ ಬೋಧನೆ, ಜೀವನ ಮೌಲ್ಯ, ನೈತಿಕತೆ ಬಗ್ಗೆ ವಿದ್ಯಾರ್ಥಿಗಳಿಗೆ ತಿಳಿಸುವುದು. ವಿಷಯದ ಮೇಲೆ ಪ್ರಭುತ್ವ ಹೊಂದಿರಬೇಕು. ವಿದ್ಯಾರ್ಥಿ ಸ್ನೇಹಿಯಾಗಿರಬೇಕು. ಕ್ರಿಯಾಶೀಲತೆ, ಸೃಜನಶೀಲ ವ್ಯಕ್ತಿಯಾಗಿರಬೇಕು.
ಸರ್ವ ಉಪನ್ಯಾಸಕರಿಗೆ ಕಾಲೇಜಿನ ಪರವಾಗಿ ಸನ್ಮಾನಿಸಲಾಯಿತು. ಕಾರ್ಯಕ್ರಮ ನಿರೂಪಣೆ ಸೌಜನ್ಯ ಪಾಟೀಲ ಹಾಗೂ ಗೌರಿ ಕುಲಕರ್ಣಿ ನಡೆಸಿಕೊಟ್ಟರು. ವಂದನಾರ್ಪಣೆ ಕರ್ಣಂ ಆದಿತ್ಯ ಅವರು ನಿರ್ವಹಿಸಿದರು. ಕೇದಾರ ದೀಕ್ಷಿತ್, ಪ್ರಕಾಶ ಚವ್ಹಾಣ, ವೈಶಾಲಿ ದೇಶಪಾಂಡೆ, ಡಿ.ಕೊಂಡಲರಾವ್, ಶಾಂತೇಶ ಹುಂಡೇಕಾರ, ಟಿ.ನವೀನಕುಮಾರ್, ದಿವ್ಯಾ ಪಿ, ಮಂಜುಳಾ ಪಿ. ಹಾಗೂ ಸಿಬ್ಬಂಧಿ ಬಳಗ ಮುಂತಾದವರು ಉಪಸ್ಥಿತರಿದ್ದರು. ವಿದ್ಯಾರ್ಥಿ ಬಳಗದ ರಾಕೇಶ ಯಾದವ್ ಹಾಗೂ ತಂಡ ಕಾರ್ಯಕ್ರಮದ ಉಸ್ತುವಾರಿಯನ್ನು ಯಶಸ್ವಿಯಾಗಿ ನಡೆಸಿಕೊಟ್ಟರು.