ಶಿಷ್ಯನಯೋಗ್ಯತೆ ಅರಿತು ಗುರು ವಿದ್ಯೆ ಬಿತ್ತುತ್ತಾನೆ:ಮಸೂತಿಶ್ರೀ

ತಾಳಿಕೋಟೆ:ಮಾ.18: ಗುರು ಎಂದರೆ ಹೇಗಿರಬೇಕು ಗುರುವಿನ ಕೆಲಸವೇನು ಎಂಬುದರ ಬಗ್ಗೆ ತಿಳಿದುಕೊಳ್ಳಬೇಕಾದರೆ ಗುರು ಅನ್ನುವಂತಹ ಶಕ್ತಿಗೆ ಅರೀವಿನ, ಹಸಿವಿಗೆ ಹೊನ್ನು, ಹಣ್ಣು, ಬಟ್ಟೆ ಬರೆ, ಆಹಾರ ಅದಕ್ಕೆ ಬೇಕಾಗುವದಿಲ್ಲಾ ಅದಕ್ಕೆ ಅನುಭಾವವೇ ಆಶ್ರಯವಾಗಿದ್ದು ಶಿಷ್ಯನ ಯೋಗ್ಯತೆಯನ್ನು ನೋಡಿ ಗುರು ಎಂಬವ ವಿದ್ಯೆಯನ್ನು ಬಿತ್ತುತ್ತಾನೆಂದು ಖ್ಯಾತ ಪುರಾಣ ಪ್ರವಚನಕಾರರಾದ ಮಸೂತಿಯ ಪೂಜ್ಯ ಶ್ರೀ ಡಾ.ಶಿವಲಿಂಗಯ್ಯ ಶರಣರು ನುಡಿದರು.
ಸಾಂಭ ಪ್ರಭು ಶರಣ ಮುತ್ಯಾರವರ ಜರುಗಲಿರುವ ಜಾತ್ರೋತ್ಸವ ಕುರಿತು ರವಿವಾರರಂದು ಜರುಗಿದ 7ನೇ ದಿನದಂದು ಸುಕ್ಷೇತ್ರ ಅಂಕಲಿಯ ಶ್ರೀ ಗುರು ನಿರೂಪಾದೀಶ್ವರರ ಮಹಾ ಪುರಾಣ ಪ್ರವಚನದಲ್ಲಿ ಮಾತನಾಡುತ್ತಿದ್ದ ಅವರು ಗುರು ಆದ್ಯಾತ್ಮದ ಮೇಲೆ ಅಡಿಗಲ್ಲು ಇಟ್ಟು ಸುತ್ತಿಗೆಯಿಂದ ಹೊಡೆದು ಗುರು ಅನ್ನುವಂತಹ ಶಕ್ತಿ ತೋರಿಸುತ್ತಾನೆ ಯಾವ ರೀತಿ ಕಂಬಾರನು ಕಬ್ಬಿಣ ತುಂಡಿಗೆ ಸಂಸ್ಕಾರ ನೀಡಿ ಅದನ್ನು ಬುಟ್ಟಿಯಾಗಿ ನಿರ್ಮಿಸಿ ಸಂಸ್ಕಾರ ಕೊಟ್ಟಂತೆ ಗುರು ಸಹೇತ ಶಿಷ್ಯನಿಗೆ ವಿದ್ಯೆಯ ಸಂಸ್ಕಾರ ನೀಡುತ್ತಾನೆಂದರು. ಗುರು ಮನ ತೊಳೆದು ಮೋಕ್ಷ ತೋರಿಸುತ್ತಾನೆ ಹಿಂದಿನ ಕಾಲದಲ್ಲಿ ಗುರುಗಳಿಗೆ ಇರಲು ಮನೆ, ಮಠಗಳೂ ಸಹ ಇದಿದ್ದಿಲ್ಲಾ ಗುಡಿಸಲಿನಲ್ಲಿ ಗುರುಗಳು ಮಲಗಿರುವಂತಹ ಸ್ಥಿತಿ ಇತ್ತು ನಿರೂಪಾದೀಶ್ವರನು ಗುರುವಿನ ಹತ್ತಿರ ಬಂದು ಉಪದೇಶ ತಿಳಿಯಲು ಆಗಮಿಸುತ್ತಾನೆ ಆ ಸಮಯದಲ್ಲಿ ರಬಸದ ಮಳೆ ಬರುತ್ತದೆ ಮಳೆಯಲ್ಲಿ ತೊಯಿಸಿಕೊಂಡ ಇನ್ನಿಬ್ಬರು ಶಿಷ್ಯರು ಗುರುವಿನ ಹತ್ತಿರ ಬರಲು ಪ್ರಯತ್ನಿಸಿದಾಗ ಗುರುಗಳು ಅವರನ್ನು ಗುಡಿಸಿಲಿನ ಒಳಗೆ ಕರೆದುಕೊಳ್ಳುತ್ತಾರೆ ಮತ್ತೇ ಇನ್ನಿಬರು ಶಿಷ್ಯರು ಮಳೆಯಲ್ಲಿ ತೊಯಿಸಿಕೊಂಡು ಗುರುವಿನ ಗುಡಿಸಿಲಿನಲ್ಲಿ ಆಗಮಿಸಿದಾಗ ಚಿಕ್ಕ ಗುಡಿಸಲಿನಲ್ಲಿ ಮಲಗಲು ಬಾರದಂತಹ ಸ್ಥಿತಿ ನಿರ್ಮಾಣವಾಗುತ್ತದೆ ಮತ್ತೇ ಇನ್ನಿಬ್ಬರು ಶಿಷ್ಯರು ಮಳೆಯಿಂದ ತೊಯಿಸಿಕೊಂಡ ಶಿಷ್ಯರು ಗುಡಿಸಲಿನಲ್ಲಿ ಬರುತ್ತಾರೆ ಕೊನೆಗೆ ಗುಡಿಸಲಿನಲ್ಲಿ ಜಾಗ ಸಾಲಲಾರದಕ್ಕೆ ನಿರುಪಾದೀಶ್ವರರು ಮತ್ತು ಗುರುಗಳು ಹೊರಗೆ ಬಂದು ಮಳೆಯಿಂದ ತೊಯಿಸಿಕೊಂಡ ಇಬ್ಬರಿಗೂ ಗುಡಿಸಲಿನೊಳಗೆ ಕಳುಹಿಸುತ್ತಾರೆ ಇಂತಹ ಕಾರ್ಯ ಮಾಡುವವನೇ ಗುರುವೆಂದರು.
ಜಗತ್ತಿನಲ್ಲಿ ಇಡೀ ಭೂಮಿಯನ್ನೇ ಹಾಳಿಯನ್ನಾಗಿ ಮಾಡಿ ಗಿಡಗಳನ್ನು ಲೇಖನಿ ಮಾಡಿ ಚರಿತ್ರೆ ಬರೆಯಲು ಮುಂದಾದರೆ ಸಾಂಭಪ್ರಭು ಶರಣರಂತಹ ಗುರುಗಳ ಇತಿಹಾಸ ಪೂರ್ಣಗೊಳ್ಳಲಾರದೆಂದು ಹೇಳಿದರು.
ನಿರುಪಾದೀಶ್ವರರು ಜ್ಞಾನದ ಸಂಪತ್ತು ಗುರುಗಳಿಂದ ಪಡೆದುಕೊಂಡು ಮಠ ಅನ್ನುವದನ್ನು ದಾಸೋಹ ಮಠವಾಗಬೇಕೆಂಬುದನ್ನು ಅರೀತುಕೊಂಡು ಗುರುಗಳಲ್ಲಿದ್ದ ಶಿಷ್ಯರು ಏನು ಮಾಡಬೇಕೆಂಬುದನ್ನು ತಿಳಿ ಹೇಳಿ ನಿರುಪಾದೀಶ್ವರ ಹಾಗೂ ಗುರುಗಳು ಇಬ್ಬರು ಕೂಡಿ ಬಿಕ್ಷಾಟನೆಗೆ ಬರುತ್ತಾರೆ ಅಲ್ಲಿ ಓರ್ವ ಮಹಿಳೆ ಬಿಕ್ಷೆಗೆ ಅನ್ನ ಹಾಕುವ ಬದಲು ಜೋಳಿಗೆಯಲ್ಲಿ ಎರಡು ಹಿಡಿ ಮಣ್ಣು ಹಾಕುತ್ತಾಳೆ ಆ ಮಣ್ಣು ತಂದ ಶ್ರೀಗಳು ಯಾವುದೇ ತಿಳಿದುಕೊಳ್ಳದೇ ಪುನಃ ಮತ್ತೇ ಅದೇ ಮನೆಗೆ ಹೋಗುತ್ತಾರೆ ಆ ಮಹಿಳೆ ಬಿಕ್ಷೆ ನೀಡದೇ ವಿಷಪೂರಿತ ಹೋಳಿಗೆಯನ್ನು ಮಾಡಿ ಶ್ರೀಗಳಿಗೆ ಹಾಗೂ ಶಿಷ್ಯನಿಗೆ ನೀಡುತ್ತಾಳೆ ಇದನ್ನು ತೆಗೆದುಕೊಂಡ ಬಂದ ಗುರು ಶಿಷ್ಯರು ತಮ್ಮ ಮಠದಲ್ಲಿ ಇಡುತ್ತಾರೆ ಅಂದೇ ಆಕಸ್ಮೀಕವಾಗಿ ಯುವಕನೋರ್ವ ರಾತ್ರಿ ಶ್ರೀಮಠಕ್ಕೆ ಬಂದು ಹಸಿವು ಆಗಿದೆ ಎಂದು ಕೇಳಿದಾಗ ವಿಷಪೂರಿತ ಆಹಾರವನ್ನು ಅರಿಯದ ಶ್ರೀಗಳು ಆ ಬಂದ ಬಾಲಕನಿಗೆ ಆ ಮಹಿಳೆ ನೀಡಿದ ಹೋಳಿಗೆಯನ್ನು ಊಟಕ್ಕೆ ಉಣಬಡಿಸಿದ ನಂತರ ಆ ಬಾಲಕ ತಲೆ ತಿರುಗಿ ಅಲ್ಲಿಯೇ ಬಿದ್ದು ಮರಣ ಹೊಂದುತ್ತಾನೆ ಈ ಸುದ್ದಿ ವಿಷಪೂರಿತ ಹೋಳಿಗೆ ನೀಡಿದ ಮಹಿಳೆಗೆ ತಿಳಿದಾಗ ಆಕೆ ಓಡಿ ಬಂದು ನೋಡುವದರಲ್ಲಿ ಆಕೆಯ ಮಗನಾಗಿರುತ್ತಾನೆ ಇದನ್ನು ಅರೀತ ಮಹಿಳೆ ದುಃಖದಿಂದ ಅಳಲಾರಂಬಿಸುತ್ತಾಳೆ ಆದ ಘಟನೆಯ ಕುರಿತು ಶ್ರೀಗಳು ಏನು ಅರೀಯದೇ ಆ ಮಹಿಳೆಯ ಬಾಯಿಯಿಂದ ಬಂದಂತಹ ಸುದ್ದಿ ಅರೀತು ಪುನಃ ಆ ಸತ್ತ ಮಗನ ಮೇಲೆ ನೀರನ್ನು ಸಿಂಪಡಿಸಿ ವಿಭೂತಿಯನ್ನು ಹಚ್ಚಿದಾಗ ಮಹಿಳೆಯ ಸತ್ತ ಮಗ ಎದ್ದು ಕೂಡುತ್ತಾನೆ ಇಂತಹ ಜೀವ ಉಳಿಸುವ ಕಾರ್ಯ ಗುರುಗಳು ಮಾಡುತ್ತಾರೆಂದರು.
ಅಷ್ಟ ವರ್ಣ ದೃಷ್ಠಿಯೋಗ, ಅಷ್ಟ ಶುದ್ದಿ, ಇವುಗಳ ಕುರಿತು ವಿವರಣೆ ನೀಡಿದ ಶ್ರೀಗಳು ವೀರಶೈವ ಲಿಂಗಾಯತ ಧರ್ಮದ ಆದಾರ ಸ್ಥಂಬಗಳ ಕುರಿತು ಹೆಚ್ಚಿಗೆ ಯಾರಿಗೂ ಗುರುತಿಲ್ಲಾ ಇಸ್ಲಾಂ ಧರ್ಮದ ಕೋಡ್ ಗೊತ್ತಿದೆ ತೀರ್ಥಂಕರರ ಕೋಡ್ ಗೊತ್ತಿದೆ ಆದರೆ ವೀರಶೈವ ಲಿಂಗಾಯತರ ಕೋಡ್ ಗೊತ್ತಿಲ್ಲಾ ಲಿಂಗಾಯತರ ಕೋಡ್ 856 ಎಂಬುದರ ಕುರಿತು ವಿವರಿಸಿ ಶ್ರೀಗಳು ತಿಳಿ ಹೇಳಿದರು.
ದೃಷ್ಠಿಯೋಗ ಪಡೆದುಕೊಂಡ ಗುಡ್ಡಾಪೂರದ ದಾನಮ್ಮ ದುಷ್ಟರನ್ನೇ ಕಣ್ಣಿನಿಂದ ನೋಡುವದರೊಂದಿಗೆ ಸುಟ್ಟು ಹಾಕಿದ್ದರ ಕುರಿತು ಹಾಗೂ ದೇಹದಲ್ಲಿ ವಿವಿಧ ನಮೂನೆಯ ಇದ್ದ ಕಸವನ್ನು ಹೊರ ಹಾಕಲು ಆದ್ಯಾತ್ಮ ಎಂಬುದು ಅಗತ್ಯವಾಗಿದೆ ಎಂದು ಹೇಳಿದ ಶ್ರೀಗಳು ಗುರು, ಶ್ರೀಗುರು, ಸದ್ಗುರು, ಜಗದ್ಗುರು, ಇವು ಬೇರೆ ಬೇರೆಯಾಗಿದ್ದು ಅವುಗಳ ವಿವರಣೆಯನ್ನು ಭಹುಮಾರ್ಮಿಕವಾಗಿ ವಿವರಿಸಿದರು. ಗುರುವಿನ ಸೇವೆ ಮಾಡಬೇಕೆಂಬ ಆಸೆಯೇ ನಿರುಪಾದೀಶ್ವರರದ್ದಾಗಿತ್ತು ಗುರುವೇ ಜಗತ್ತಿನಲ್ಲಿ ಎಲ್ಲವನ್ನು ನಿಭಾಯಿಸುತ್ತಾನೆ ಗುರುಲಿಂಗ ಜಂಗಮ, ಗುರು ಬಡವನಾಗಬೇಕು, ಭಕ್ತ ಸಂಪತ್ ಬರೀತನಾಗಬೇಕು, ಭಕ್ತರಿಗೆ ಜ್ಞಾನದ ಅರೀವನ್ನು ಸದ್ಗುರು, ಜಗದ್ಗುರು, ಅಡಷಡ್ ವರ್ಗಗಳನ್ನು ತನ್ನಲ್ಲಿ ಇಟ್ಟುಕೊಂಡು ಒಳ್ಳೆಯ ಜ್ಞಾನ ಮೂಡಿಸುವಂತಹ ಗುರು ಯಾವುದೇ ಬೇದ ಭಾವ ಕಾಣದೇ ಭಕ್ತರಿಗೆ ಜ್ಞಾನದ ಶ್ರೀಮಂತಿಗೆ ಕೊಡುತ್ತಾನೆಂದರು.
ವೇದಿಕೆಯ ಮೇಲೆ ಬಸಣ್ಣಮುತ್ಯಾ ಶರಣರ, ಶರಣಪ್ಪಮುತ್ಯಾ ಶರಣರ, ಮೊದಲಾದವರು ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಸಿದ್ದಣ್ಣ ಶರಣರ, ಮಲ್ಲಣ್ಣ, ಲಿಂಗರಾಜ, ಸಂಗಮೇಶ, ಹಾಗೂ ಶರಣಗೌಡ ಪೊಲೀಸ್‍ಪಾಟೀಲ, ಕಾಶಿರಾಯ ದೇಸಾಯಿ(ಶಳ್ಳಗಿ), ಸಂಗಣ್ಣ ಹೂಗಾರ, ಶಾಂತಗೌಡ ಬಿರಾದಾರ, ಮಲ್ಲಣ್ಣ ಇಂಗಳಗಿ, ಶರಣಗೌಡ ಬಿರಾದಾರ, ತಿಪ್ಪಣ್ಣ ಸಜ್ಜನ, ಶ್ರೀಕಾಂತ ಕುಂಭಾರ, ಶ್ರೀಮತಿ ಕಾಶಿಬಾಯಿ ಶರಣರ, ಹಾಗೂ ಸಂಗೀತಗಾರರಾದ ಕುಮಾರ ಕುದರಗುಂಡ, ಬಸನಗೌಡ ಬಿರಾದಾರ, ವಾಯಿಲಿನ್ ವಾದಕ ಯಲ್ಲಪ್ಪ ಗುಂಡಳ್ಳಿ, ಮೊದಲಾದವರು ಉಪಸ್ಥಿತರಿದ್ದರು.