ಶಿಶು ಬೆಳವಣಿಗೆಗೆ ಗರ್ಭಿಣಿಯರು ಪೌಷ್ಠಿಕ ಆಹಾರ ಸೇವಿಸುವುದು ಅತ್ಯಗತ್ಯ

ಸಂಜೆವಾಣಿ ವಾರ್ತೆ
ಚಿತ್ರದುರ್ಗ ಸೆ. ೫: ಗರ್ಭದಲ್ಲಿನ ಶಿಶುವಿನ ಬೆಳವಣಿಗೆ ಉತ್ತಮವಾಗಿರಲು ಗರ್ಭಿಣಿಯರು ಪೂರಕವಾಗಿ ಪೌಷ್ಠಿಕಾಂಶವುಳ್ಳ ಆಹಾರವನ್ನು ಸೇವಿಸುವುದು ಅತ್ಯಗತ್ಯವಾಗಿದೆ ಎಂದು ಜಿಲ್ಲಾ ಆರ್.ಸಿ.ಹೆಚ್. ಅಧಿಕಾರಿ ಡಾ. ಅಭಿನವ್ ಹೇಳಿದರು. ತಾಲ್ಲೂಕಿನ ಗುಡ್ಡದ ರಂಗವನಹಳ್ಳಿ ಪ್ರಾಥಮಿಕ ಆರೋಗ್ಯ  ವ್ಯಾಪ್ತಿಯ  ಪಿಳ್ಳೆಕೆರೆನಳ್ಳಿ  ಬಸವೇಶ್ವರ ನಗರದ ಅಂಗನವಾಡಿ ಕೇಂದ್ರದಲ್ಲಿ  ಪೌಷ್ಠಿಕ ಆಹಾರ ಸಪ್ತಾಹ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.ಪೌಷ್ಟಿಕ ಆಹಾರ ಎಲ್ಲರ ಅಗತ್ಯತೆಯಾಗಿದೆ. ಪ್ರತಿಯೊಬ್ಬರು ಆರೋಗ್ಯದಿಂದಿರಲು, ರೋಗಗಳನ್ನು ತಡೆಗಟ್ಟಲು ಜೀವನದಲ್ಲಿ ಪ್ರಗತಿ ಸಾಧಿಸಲು ಪೌಷ್ಠಿಕ ಆಹಾರದ ಅಗತ್ಯತೆ ಬಹಳವಾಗಿದೆ. ಗರ್ಭಿಣಿ ಮಹಿಳೆಯು ತನ್ನ ಆರೋಗ್ಯ ಕಾಪಾಡಿಕೊಳ್ಳುವುದಲ್ಲದೆ ಗರ್ಭದಲ್ಲಿನ ಶಿಶು ಬೆಳವಣಿಗೆಗೂ ಗಮನಕೊಡಬೇಕಾಗುತ್ತದೆ.  ಗರ್ಭಿಣಿಯರು ಕಾಲಕಾಲಕ್ಕೆ ತಕ್ಕಂತೆÀ ದಿನಗಳಲ್ಲಿ ಗುಣಮಟ್ಟದೊಂದಿಗೆ ಆಹಾರದ ಪ್ರಮಾಣವೂ ಹೆಚ್ಹಾಗಬೇಕಾಗುತ್ತದೆ. ಗರ್ಭಿಣಿ ದೇಹದಲ್ಲಿ ಗರ್ಭಕೋಶ, ಅಂಡಧಾರಕ ಗರ್ಭಶಿಶು ಹಾಗೂ ಗರ್ಭಜಲ ಉತ್ಪತ್ತಿಯಾಗುತ್ತದೆ.  ಇವುಗಳ ಬೆಳವಣಿಗೆಗೆ ಗುಣಮಟ್ಟದ, ಹೆಚ್ಚು ಪ್ರಮಾಣದ ಆಹಾರ ಸೇವನೆ ಅಗತ್ಯ. ಹೀಗಾಗಿ ಪ್ರಾರಂಭದಲ್ಲಿಯೇ ದಿನಕ್ಕೆ 150 ಕ್ಯಾಲರಿ ನೀಡುವ ಹೆಚ್ಚು ಆಹಾರವನ್ನು ಸೇವಿಸಬೇಕಾಗುತ್ತದೆ.  ನಂತರದ ದಿನಗಳಲ್ಲಿ ಸುಮಾರು 250 ಕ್ಯಾಲರಿಯಷ್ಟು ಆಹಾರದ ಅಗತ್ಯತೆ ಇರುತ್ತದೆ. ಇದನ್ನು ದೊರಕಿಸಿಕೊಳ್ಳಲು ದಿನನಿತ್ಯ ಒಂದು ಕಪ್ ಹಾಲು ಅಥವಾ ಇನ್ನಾವುದಾದರೂ 150 ಕ್ಯಾಲರಿ ನೀಡುವ ಆಹಾರ ಹಾಗೂ ನಂತರದ ದಿನಗಳಲ್ಲಿ (6 ತಿಂಗಳಿಂದ) ಒಂದು ಕಪ್ ಹಾಲಿನೊಂದಿಗೆ ಒಂದು ಹಣ್ಣು, ಕ್ಯಾಲರಿ ಹೆಚ್ಚಳವನ್ನು ಒದಗಿಸುತ್ತದೆ. ಭ್ರೂಣ ಶಿಶು ಬೆಳವಣಿಗೆ ಹಾಗೂ ಗರ್ಭಕೋಶದ ಬೆಳವಣಿಗೆಗೆ ಪೆÇ್ರೀಟಿನ್ ಅತ್ಯಗತ್ಯ. ದಿನನಿತ್ಯದ 70 ಗ್ರಾಂ ಪೆÇ್ರೀಟಿನ್ ಸೇವನೆಯೊಂದಿಗೆ 10 ಗ್ರಾಂ ಹೆಚ್ಚಳವನ್ನು ಮಾಡಿಕೊಂಡಲ್ಲಿ (80 ಗ್ರಾಂ) ದೇಹದಲ್ಲಿ ಪೆÇ್ರೀಟೀನ್ ಕೊರತೆಯನ್ನು ತಪ್ಪಿಸಬಹುದು ಎಂದು ಸಲಹೆ ನೀಡಿದರು.ತಾಲೂಕ್ ಆರೋಗ್ಯ ಶಿಕ್ಷಣಾಧಿಕಾರಿ ಎನ್.ಎಸ್. ಮಂಜುನಾಥ್ ಮಾತನಾಡಿ, ಬೀನ್ಸ್, ಕಾಳು, ಮಾಂಸ, ಮೊಟ್ಟೆಯಲ್ಲಿ ಪೆÇ್ರೀಟೀನ್ ಹೇರಳವಾಗಿದೆ. ಫೆÇೀಲಿಕ್ ಆಮ್ಲವು ಗರ್ಭ ಶಿಶುವಿನ ಮೆದುಳಿನ ಬೆಳವಣಿಗೆಗೆ ಅತ್ಯಗತ್ಯ.  ಅದು ಬೆಳವಣಿಗೆಗೆ ಸಹಾಯ ಮಾಡುವುದಲ್ಲದೆ, ಮೆದುಳು ಬಳ್ಳಿ (ಟಿeuಡಿಚಿಟ ಖಿube ಆeಜಿeಛಿಣs ) ರೋಗವನ್ನು ತಡೆಗಟ್ಟುತ್ತದೆ. ಫೆÇೀಲಿಕ್ ಆಮ್ಲ ದೊರಕುವ ಆಹಾರಗಳಾದ ತರಕಾರಿ, ಗೋಧಿ ಮುಂತಾದವುಗಳನ್ನು ಸೇವಿಸಬಹುದಾಗಿದೆ. ಫೆÇೀಲಿಕ್ ಆಮ್ಲದ ಅಗತ್ಯತೆ ಮೊದಲ ಮೂರು ತಿಂಗಳಿನಲ್ಲಿ ಹೆಚ್ಚಿರುತ್ತದೆ. ಗರ್ಭಿಣಿಗೆ ಹೆಚ್ಚಿನ ಪ್ರಮಾಣದಲ್ಲಿ ಅಗತ್ಯವಿರುವ ಪದಾರ್ಥಗಳೆಂದರೆ ಕ್ಯಾಲ್ಷಿಯಂ ಮತ್ತು ಕಬ್ಬಿಣ.  ಹೀಗಾಗಿ ಗರ್ಭಿಣಿಯರು ಸೊಪ್ಪು, ತರಕಾರಿ, ಮಾಂಸ, ಮೀನು ಹಾಗೂ ಮೊಟ್ಟೆ ಸೇವನೆ ಮಾಡಬೇಕು  ಎಂದರು. ಜಿಲ್ಲಾ ಕಾರ್ಯಕ್ರಮ ಸಂಯೋಜಕ ಕರಕಪ್ಪ ಮೇಟಿ, ಆರೋಗ್ಯ ಶಿಕ್ಷಣಾಧಿಕಾರಿ ಬಿ ಮೂಗಪ್ಪ ಮಾತನಾಡಿದರು.ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯತಿ ಸದಸ್ಯರಾದ ಜ್ಯೋತಿ, ಕುಸುಮ, ಚಂದ್ರಮ್ಮ, ಅಂಗನವಾಡಿ ಕಾರ್ಯಕರ್ತರಾದ ಶೈಲಶ್ರೀ, ಕಮಲಮ್ಮ ಬಿ, ಕಮಲಮ್ಮ, ಆಶಾ ಕಾರ್ಯಕರ್ತೆಯರಾದ ಕವಿತಾ, ಸರಸ್ವತಿ, ಸುಮಲತಾ, ಆರೋಗ್ಯ ನಿರೀಕ್ಷಣಾಧಿಕಾರಿಗಳಾದ ಶ್ರೀಧರ್, ಪ್ರಶಾಂತ್ ಉಪಸ್ಥಿತರಿದ್ದರು.