ಶಿಶು ಪಾಲನಾ ಕೇಂದ್ರದಲ್ಲಿ ಒಳ್ಳೆಯ ವಾತಾವರಣ ನಿರ್ಮಿಸಿ: ತಾಪಂ ಇಓ


ಸಂಜೆವಾಣಿ ವಾರ್ತೆ
ಗಂಗಾವತಿ, ಜು.3: : ತಾಲೂಕು ಪಂಚಾಯತ್ ಮಂಥನ ಸಭಾಂಗಣದಲ್ಲಿ ನರೇಗಾ ಯೋಜನೆಯಡಿ ಆರಂಭವಾಗುತ್ತಿರುವ ಶಿಶು ಪಾಲನಾ ಕೇಂದ್ರದ ಗಂಗಾವತಿ, ಕನಕಗಿರಿ ಹಾಗೂ ಕಾರಟಗಿ ಮಹಿಳಾ ಕೇರ್ ಟೇಕರ್ಸ್ ಅವರಿಗೆ ಆಯೋಜಿಸಿದ್ದ ನಾಲ್ಕು ದಿನಗಳ ತರಬೇತಿ ಕಾರ್ಯಾಗಾರವನ್ನು ತಾಪಂ ಕಾರ್ಯನಿರ್ವಾಹಕ ಅಧಿಕಾರಿಗಳಾದ ಲಕ್ಷ್ಮೀದೇವಿ ಅವರು ಸಸಿಗೆ ನೀರೆರೆದು ಉದ್ಘಾಟಿಸಿದರು.
ನಂತರ ತಾಪಂ ಇಓ ಲಕ್ಷ್ಮೀದೇವಿ ಅವರು ಮಾತನಾಡಿ, ಆ.15 ರಿಂದ ಗ್ರಾಪಂ ವ್ಯಾಪ್ತಿಯಲ್ಲಿ ಶಿಶು ಪಾಲನಾ ಕೇಂದ್ರಗಳನ್ನು ತೆರೆಯಲಾಗುತ್ತಿದೆ. ಈ ಕೇಂದ್ರಗಳಿಗೆ 3 ತಿಂಗಳಿಗೆ ಇಬ್ಬರಂತೆ ವರ್ಷಕ್ಕೆ 8 ಜನ ಕೇರ್ ಟೇಕರ್ಸ್ ಇರುತ್ತಾರೆ. ಕೇಂದ್ರಕ್ಕೆ ಬರುವ ಮಕ್ಕಳನ್ನು ಚೆನ್ನಾಗಿ ಆರೈಕೆ ಮಾಡಬೇಕು. ಕೇಂದ್ರದಲ್ಲಿ ಮಗುವಿಗೆ ಒಳ್ಳೆಯ ವಾತಾವರಣ ನಿರ್ಮಾಣ ಮಾಡಬೇಕು. ಕಾರ್ಯಾಗಾರದ ಸದುಪಯೋಗ ಪಡೆಯುವಂತೆ ಸಲಹೆ ನೀಡಿದರು.
ನರೇಗಾ ವಿಷಯ ನಿರ್ವಾಹಕರಾದ ಶಿವಮೂರ್ತಯ್ಯ ಕಂಪಾಪೂರ ಮಠ್, ಮಹಿಳಾ ಮತ್ತು ಕಲ್ಯಾಣ ಇಲಾಖೆಯ ಮೇಲ್ವಿಚಾರಕರು ಹಾಗೂ ಸಂಪನ್ಮೂಲ ವ್ಯಕ್ತಿಗಳಾದ ಸುಕನ್ಯಾ, ವಿದ್ಯಾವತಿ ಹಾಗೂ ತಾಂತ್ರಿಕ ಸಂಯೋಜಕರಾದ ಬಸವರಾಜ ಜಟಗಿ, ಎಂಐಎಸ್ ಸಂಯೋಕರಾದ ನಾಗರಾಜ ಗಂಗನಾಳ, ಗಂಗಾವತಿ ಐಇಸಿ ಸಂಯೋಜಕರಾದ ಬಾಳಪ್ಪ ತಾಳಕೇರಿ, ಕನಕಗಿರಿ ಐಇಸಿ ಸಂಯೋಜಕರಾದ ಶಿವಕುಮಾರ್ ಕೆ, ಕಾರಟಗಿ ತಾಲೂಕು ಐಇಸಿ ಸಂಯೋಜಕರಾದ ಸೋಮನಾಥ ನಾಯಕ ಸೇರಿ ಇತರೆ ಸಿಬ್ಬಂದಿಗಳು ಇದ್ದರು.