ಶಿಶುವಾಗಿ ಸಾಹಿತಿಯಾದವರು ದಾನಪ್ಪ ಬಗಲಿ: ರಾಘವೇಂದ್ರ ಕುಲಕರ್ಣಿ

ಇಂಡಿ: ನ.28:ಶಿಶು ವಚನವನ್ನು ನಾಡಿಗೆ ಪರಿಚಯಿಸಿ, ಸಾಹಿತ್ಯಿಕ, ಸಾಂಸ್ಕøತಿಕ, ಸಾಮಾಜಿಕ ರಂಗಗಳಲ್ಲಿ ತಮ್ಮದೇ ಛಾಪು ಮೂಡಿಸಿ ಶಿಶುವಾಗಿದ್ದೇ ಸಾಹಿತಿಯಾಗಿ ಬೆಳೆದವರು ದಿವಂಗತ ದಾನಪ್ಪ ಬಗಲಿ ಅವರು ಈ ನಾಡಿನ ಸಾಹಿತ್ಯದ ಬೇರುಗಳನ್ನು ಗಟ್ಟಿಗೊಳಿಸಿದ್ದಾರೆ.ಅವರ ಜೀವನ ಇಂದಿನ ಯುವಪೀಳಿಗೆಗೆ ಆದರ್ಶಪ್ರಾಯವಾದುದು ಎಂದು ಇಂಡಿ ಪಟ್ಟಣದ
ಸಾಹಿತಿಗಳಾದ ರಾಘವೇಂದ್ರ ಕುಲಕರ್ಣಿ ಹೇಳಿದರು.
ಅವರು ಇಂದು ಇಂಡಿ ಪಟ್ಟಣದ ಭೀಮಾಂತರಂಗ ಆನ್ ಲೈನ್ ಸಾಹಿತ್ಯಿಕ-ಸಾಂಸ್ಕೃತಿಕ ಜಗಲಿ ವತಿಯಿಂದ ಜರುಗಿದ “ದಾನಪ್ಪ ಬಗಲಿ ಅವರ ಸಾಹಿತ್ಯವಲೋಕನ”
ಕುರಿತು ಆನ್ ಲೈನ್ ಉಪನ್ಯಾಸ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.
ಕುವೆಂಪು ಅವರ ಚಿತಾಭಸ್ಮವನ್ನು ಅವರ ಪುತ್ರ ಕೆ. ಪಿ. ಪೂರ್ಣಚಂದ್ರ ತೇಜಶ್ವಿ ಅವರಿಂದ ಪಡೆದು ತಂದು ಪೂಜ್ಯ ಭಾವನೆಯಿಂದ ಮನೆಯ ಜಗಲಿಯ ಮೇಲಿಟ್ಟು ಗೌರವ ಸಲ್ಲಿಸುವದರೊಂದಿಗೆ ಅವರ ಸಾಹಿತ್ಯ ಪರಂಪರೆಯನ್ನು ಬೆಳೆಸಿ,ನಾಟಕ,ಆಧುನಿಕ ವಚನವನ್ನು ಶ್ರೀಮಂತಗೊಳಿಸಿ,ಭಾವನಾತ್ಮಕ ವಿಚಾರಗಳಿಗೆ ಪ್ರಾಧಾನ್ಯತೆ ನೀಡಿದ ಅಪರೂಪದ ಹಿರಿಯ ಸಾಹಿತಿಗಳಾಗಿದ್ದಾರೆ ಎಂದು ಹೇಳಿದರು.
ಅಧ್ಯಕ್ಷತೆ ವಹಿಸಿದ ಮಿರಗಿ ಶಿಕ್ಷಕರಾದ ಯಶವಂತರಾಯ ಬಿರಾದಾರ ಮಾತನಾಡಿ,ಆರೋಗ್ಯ ಇಲಾಖೆಯಲ್ಲಿದ್ದುಕೊಂಡು ಸೌಮ್ಯ ಹೃದಯಿ ಬಗಲಿ ಅವರು ಆಧ್ಯಾತ್ಮಿಕ ದಾರಿಯ ಮೂಲಕ ಸಾಹಿತ್ಯಿಕ ಸೇವೆಗೈದವರು ಆದರೆ ಕೊರೋನಾ ಸಂದರ್ಭದಲ್ಲಿ ನಮ್ಮನ್ನೆಲ್ಲ ಅಗಲಿದ್ದು ಸಾಹಿತ್ಯ ಲೋಕ ಬಡವಾಗಿದೆ
ಎಂದು ಹೇಳಿದರು. ಸೂಗೂರು ಅವರು, ಸಿ. ಎಂ. ಬಂಡಗರ ಅವರು ಕಾರ್ಯಕ್ರಮದಲ್ಲಿ ಮಾತನಾಡಿದರು.
ಸಂಶೋಧಕರಾದ ಡಿ ಎನ್ ಅಕ್ಕಿ,ಸಾಹಿತಿಗಳಾದ ಡಾ. ಚೆನ್ನಪ್ಪ ಕಟ್ಟಿ, ಡಾ. S.ಞ.ಕೊಪ್ಪ, ಡಾ. ರಮೇಶ ಕತ್ತಿ,ಶಿವಾನಂದ ಅವಟಿ, ಸಂಗಮೇಶ ಸಣ್ಣತಂಗಿ, ಬಸವರಾಜ ಕಿರಣಗಿ, ಬಸವರಾಜ ಗೋರನಾಳ,
ಎ ಜಿ ಚೌಧರಿ, ಶ್ರೀಧರ ಹಿಪ್ಪರಗಿ,ಈರಣ್ಣ ಕಂಬಾರ,ಡಾ.ರಾಜಶ್ರೀ ಮಾರನೂರ,ರಾಜೇಶ್ವರಿ ಕೋಳೆಕರ,ಸುಜಾತಾ ಬೀಳಗಿ, ಸರೋಜಿನಿ ಮಾವಿನಮರ, ಮಾಧವ ಗುಡಿ,ಆರ್ ವಿ ಪಾಟೀಲ,ಛಾಯಾ ದೇಶಪಾಂಡೆ ಸೇರಿದಂತೆ ಸಾಹಿತಿಗಳು,ಸಾಹಿತ್ಯಾಸಕ್ತರು ಭಾಗವಹಿಸಿದ್ದರು.
ಸಾಹಿತಿ ಸಂತೋಷ ಬಂಡೆ ಸ್ವಾಗತಿಸಿದರು,ಸಾಹಿತಿ ಗೀತಯೋಗಿ ಅವರು ಕಾರ್ಯಕ್ರಮವನ್ನು ನಿರ್ವಹಿಸಿದರು.