ಶಿಶುಪಾಲನ ಮಕ್ಕಳಿಗೆ ಶೂ, ಸಮವಸ್ತ್ರ ವಿತರಣೆ

ಚಾಮರಾಜನಗರ. ಜು.31:- ನಗರದ ಉಪ್ಪಾರ ಬೀದಿಯ ಸಮುಧಾಯ ಭವನದಲ್ಲಿ ಕರ್ನಾಟಕ ರಾಜ್ಯ ಕಟ್ಟಡ ನಿರ್ಮಾಣ ಮತ್ತು ಕಾರ್ಮಿಕರ ಒಕ್ಕೂಟದ ಚಾಮರಾಜನಗರ ಜಿಲ್ಲಾ ಶಾಖೆ ವತಿಯಿಂದ ಎಜುಸ್ಫಾರ್ಕ್ ಇಂಟರ್ ನ್ಯಾಷನಲ್ ಅವರ ಸಹಯೋಗದಲ್ಲಿ ಶಿಶುಪಾಲನ ಮಕ್ಕಳಿಗೆ ಶೂ ಮತ್ತು ಶಾಲಾ ಸಮವಸ್ತಗಳನ್ನು ಶಾಸಕರಾದ ಸಿ.ಪುಟ್ಟರಂಗಶೆಟ್ಟಿ ಅವರು ವಿತರಣೆ ಮಾಡಿದರು.
ನಂತರ ಮಾತನಾಡಿದ ಶಾಸಕ ಸಿ. ಪುಟ್ಟರಂಗಶೆಟ್ಟಿ ಮಕ್ಕಳ ವಿದ್ಯಾಭ್ಯಾಸಕ್ಕೆ ಹಲವಾರು ಸಂಘ ಸಂಸ್ಥೆಗಳು ದಾನಿಗಳಾಗಿ ಸೇವೆ ಸಲ್ಲಿಸುತ್ತಿದೆ. ಎಜುಸ್ಫಾರ್ಕ್ ಇಂಟರ್ ನ್ಯಾಷನಲ್ ಅವರು ಕಟ್ಟಡ ಕಾರ್ಮಿಕ ಮಕ್ಕಳಿಗೆ ಶಿಕ್ಷಣದಲ್ಲಿ ಆಸಕ್ತಿ ಬರುವ ಉದ್ದೇಶದಿಂದ ಸೇವೆಗಳ ರೂಪದಲ್ಲಿ ಗುರುತ್ತಿಸಿಕೊಂಡಿದೆ. ಕಾರ್ಮಿಕರ ಮಕ್ಕಳು ಮಕ್ಕಳಿಗೆ ಪೋಷಕರು ಶಿಕ್ಷಣ ಕೊಡಿಸುವ ಕೆಲಸವನ್ನು ಮಾಡಬೇಕು ಎಂದು ಹೇಳಿದರು.
ಮಕ್ಕಳನ್ನು ಶಿಶುಪಾಲನ ಕೇಂದ್ರಕ್ಕೆ ಕರೆತಂದು ಅಲ್ಲಿ ನೀಡುವ ಶಿಕ್ಷಣವನ್ನು ಪಡೆಯಬಹುದು ಚಾಮರಾಜನಗರದಲ್ಲಿ ಎರಡು ಕೇಂದ್ರಗಳಿದ್ದು ಒಂದು ಕೇಂದ್ರದಲ್ಲಿ 30 ಮಕ್ಕಳಿಗೆ ಅವಕಾಶವಿದೆ. ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ತಿಳಿಸಿದರು.
ರಾಜ್ಯಾಧ್ಯಕ್ಷರಾದ ದೇವರಾಜ್ ಕೆ.ಆರ್.ಎನ್ ಮತ್ತು ಲೇಬರ್ ಬೋರ್ಡ್ ಸದಸ್ಯರಾದ ಶ್ರೀನಿವಾಸ್, ಕೆ.ಆರ್.ಎನ್ ರಾಜ್ಯಾಧ್ಯಕ್ಷ ಮಾದೇಶ್ ಉಪ್ಪಾರ, ಕಾರ್ಮಿಕ ನಿರಕ್ಷಕರಾದ ವೀಣಾ, ಜಿಲ್ಲಾಧ್ಯಕ್ಷೆ ನಿರ್ಮಾಲಾದೇವಿ, ಶಿಶುಪಾಲನ ಕೇಂದ್ರದ ಸಂಯೋಜಕರಾದ ನಾಗೇಂದ್ರ ಶಿಶುಪಾಲನ ಕೇಂದ್ರದ ಶಿಕ್ಷಕಿಯರಾದ ಎಂ.ಕುಮಾರಿ, ರಂಜೀತಾ.ಪಿ ಪೋಷಕರು ಹಾಗೂ ಮಕ್ಕಳು ಉಪಸ್ಥಿತರಿದ್ದರು.