ಲಂಡನ್, ಏ.೪- ಮಕ್ಕಳು ಹಾಗೂ ಯುವತಿಯರ ಮೇಲೆ ಲೈಂಗಿಕ ದೌರ್ಜನ್ಯ ನಡೆಸುವ ಹಾಗೂ ಈ ಕೃತ್ಯಕ್ಕೆ ಕುಮ್ಮಕ್ಕು ನೀಡುವ ದುಷ್ಕರ್ಮಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದಕ್ಕಾಗಿ ಕಾರ್ಯಪಡೆಯೊಂದನ್ನು ರಚಿಸುತ್ತೇವೆ’ ಎಂದು ಬ್ರಿಟನ್ ಪ್ರಧಾನಿ ರಿಷಿ ಸುನಕ್ ಪ್ರಕಟಿಸಿದ ಬೆನ್ನಲ್ಲೇ ಅವರ ಪತ್ನಿ ಅಕ್ಷತಾ ಮೂರ್ತಿ ಅವರು ಶಿಶುಪಾಲನಾ ಏಜೆನ್ಸಿಯಲ್ಲಿ ಷೇರುಗಳನ್ನು ಹೊಂದಿದ್ದಾರೆ ಎನ್ನುವ ಆರೋಪ ಕೇಳಿಬಂದಿದೆ.
ಅಕ್ಷತಾ ಮೂರ್ತಿ ಅವರು ಶಿಶುಪಾಲನಾ ಏಜೆನ್ಸಿಯಲ್ಲಿ ಷೇರುಗಳನ್ನು ಹೊಂದಿದ್ದಾರೆ. ಜತೆಗೆ ಇತ್ತೀಚಿನ ಯುಕೆ ಬಜೆಟ್‌ನಲ್ಲಿ ಘೋಷಿಸಲಾದ ಹೊಸ ನೀತಿಯಿಂದ ಲಾಭ ಪಡೆಯುವ ಸಾಧ್ಯತೆಯಿದೆ ಎಂದು ಗಾರ್ಡಿಯನ್ ವರದಿ ಮಾಡಿದೆ.
ರಿಷಿ ಸುನಕ್ ಅವರ ಪತ್ನಿಯನ್ನು ಷೇರುದಾರರೆಂದು ಪಟ್ಟಿ ಮಾಡಿದ್ದು, ಯುಕೆ ಹಣಕಾಸು ಸಚಿವ ಜೆರೆಮಿ ಹಂಟ್ ಅವರು ಬಜೆಟ್‌ನಲ್ಲಿ ಘೋಷಿಸಿದ ಹೊಸ ಯೋಜನೆಯು ಏಜೆನ್ಸಿಯ ಮೂಲಕ ತರಬೇತಿ ಪಡೆಯುವ ವ್ಯಕ್ತಿಗಳಿಗೆ ೧೨೦೦ ಪೌಂಡ್‌ಗಳನ್ನು ನೀಡುತ್ತದೆ. ಇಂತಹ ಯೋಜನೆಯಿಂದ ಅಕ್ಷತಾ ಮೂರ್ತಿ ಅವರ ಏಜೆನ್ಸಿಯು ಲಾಭ ಪಡೆಯಬಹುದು ಎನ್ನಲಾಗಿದೆ.
ಇನ್ನೂ, ಇತ್ತೀಚೆಗೆ ನಡೆದ ಸಭೆಯಲ್ಲಿ ರಿಷಿ ಸುನಕ್ ಅವರು ತಮ್ಮ ಪತ್ನಿಯ ಮಾಹಿತಿ ಉಲ್ಲೇಖಿಸಲಿಲ್ಲ ಎಂದು ಹೇಳಲಾಗುತ್ತಿದೆ.