
(ಸಂಜೆವಾಣಿ ವಾರ್ತೆ)
ಬಳ್ಳಾರಿ, ನ.03 ನಗರದ ರಾಜೇಶ್ವರಿ ಸೌಂಡ್ ಅಂಡ್ ಲೌಟ್ಸ್ ನ ಮಾಲೀಕ ಎಚ್.ಶಿವಬಸಪ್ಪ (65)ಇಂದು ನಿಧನ ಹೊಂದಿದ್ದಾರೆ. ಕಳೆದ 45 ವರ್ಷಗಳಿಂದ ಅವರು ಉತ್ತರ ಕರ್ನಾಟಕದ ಪ್ರಮುಖ ಸಮಾರಂಭ, ಉತ್ಸವಗಳಿಗೆ ಧ್ವನಿಮತ್ತು ಬೆಳಕಿನ ವ್ಯವಸ್ಥೆ ಮಾಡುತ್ತಿದ್ದರು.
ಪತ್ನಿ, ಪುತ್ರ, ಪುತ್ರಿಯನ್ನು ಅಗಲಿರುವ ಅವರ ಅಂತ್ಯಕ್ರಿಯೆ ಇಂದು ನಗರದ ವೀರಶೈವ ರುದ್ರಭೂಮಿಯಲ್ಲಿ ನೆರವೇರಿತು. ಜನಪದ ಕಲಾವಿದ ಶಂಕರ ಬಂಡೆ ಎಲ್ಲನಗೌಡ ಮೊದಲಾದವರು ಸಂತಾಪ ವ್ಯಕ್ತಪಡಿಸಿದ್ದಾರೆ.