ಶಿವ ಚಿಂತನೆಯಿಂದ ಚಿಂತೆ ಮಾಯ:ಪ್ರಶಾಂತ ಹಿರೇಮಠ

ಕೆಂಭಾವಿ:ಮಾ.10:ಶಿವ ಸ್ಮರಣೆಯಿಂದ ಮನಸ್ಸಿನಲ್ಲಿರುವ ಋಣಾತ್ಮಕ ಚಿಂತನೆಗಳು ಮಾಯಾವಾಗಿ ಧನಾತ್ಮಕ ಚಿಂತನೆಗಳು ಮೈಗೂಡುತ್ತವೆ ಎಂದು ಅರ್ಚಕ ಪ್ರಶಾಂತಸ್ವಾಮಿ ಹೇಳಿದರು.
ಪಟ್ಟಣದ ಸೊನ್ನದ ಬಡಾವಣೆಯ ಶ್ರೀ ಸಿದ್ದೇಶ್ವರ ದೇವಸ್ಥಾನದಲ್ಲಿ ಶಿವರಾತ್ರಿ ನಿಮಿತ್ತ ಶಿವಲಿಂಗಕ್ಕೆ ವಿಶೇಷ ಪೂಜೆ ಹಾಗೂ ರುದ್ರಾಭಿಷೇಕ ನೆರವೇರಿಸಿ ಮಾತನಾಡಿದರು. ಶಿವ ಭಗವಂತನು ದುಃಖವನ್ನು ದೂರಮಾಡಿ ಸುಖವನ್ನು ನೀಡುವವನಾಗಿದ್ದಾನೆ. ಶಿವ ಕಲ್ಯಾಣಕಾರಿಯಾಗಿದ್ದಾನೆ. ಅವಿನಾಶಿ ಪರಮಾತ್ಮ ಅವಿನಾಶಿ ಜ್ಞಾನ ನೀಡಿ ಮನುಷ್ಯರನ್ನು ದೇವತೆಗಳನ್ನಾಗಿ ಪರಿವರ್ತಿಸುತ್ತಾನೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಪ್ರಧಾನ ಅರ್ಚಕ ಬಸವರಾಜ ಬೈಚಬಾಳ, ದೇವಸ್ಥಾನ ಸಮಿತಿ ಅಧ್ಯಕ್ಷ ಶಂಕರಲಿಂಗ ಸೊನ್ನದ, ಬಸವರಾಜಯ್ಯ ಹೊಸಮನಿ, ಅರಣೋದಯ ಸೊನ್ನದ, ಡಾ.ಶಿವಾನಂದ ಆಲಗೂರ, ಚಂದ್ರಪ್ಪ ಮಾಲಗತ್ತಿ, ನಿಂಗಣ್ಣ ಅವಟಿ, ವಿಕಾಸ ಸೊನ್ನದ, ಸಿದ್ದು ಹುಣಸಗಿ, ಎಸ್.ಬಿ.ಅಂಗಡಿ, ಮಲ್ಲನಗೌಡ ಪಾಟೀಲ, ಗುರುಮೂರ್ತಿ ಪತ್ತಾರ, ಡಿ.ಸಿ ಪಾಟೀಲ

ಮಹೇಶ ಸೊನ್ನದ, ಮಲ್ಲು ಸೊನ್ನದ, ಮಲ್ಲು ಸಾಸಾಬಾಳ, ರಮೇಶ ಸಾಸಾಬಾಳ, ಪಿಂಟು ಅಕ್ಕಿ, ನಾಗು, ಸುಧಾಕರ ಡಿಗ್ಗಾವಿ, ಭೀಮು ಡಿಗ್ಗಾವಿ, ಶಿವು, ಬಸವರಾಜ ಬಿದರಿ, ಗುಡದಯ್ಯ, ಜಗದೀಶ ನೆಲ್ಲಗಿ, ಶ್ರೀಕಾಂತ ಅಂಗಡಿ, ಪ್ರಶಾಂತ ಬೊಮ್ಮನಹಳ್ಳಿ, ಪ್ರಕಾಶ ಬೈಚಬಾಳ, ಸಿದ್ದು ಸೇರಿದಂತೆ ನೂರಾರು ಮಹಿಳೆಯರು, ಭಕ್ತರು ಇದ್ದರು.

ಶ್ರಾವಣ ಮಾಸ ಮುಗಿದ ನಂತರ ಶಿವಲಿಂಗಕ್ಕೆ ಕಂತಿಯನ್ನು ಹಿಡಿಸಲಾಗಿತ್ತು. ಶಿವರಾತ್ರಿಯ ಶುಭ ಸಂದರ್ಭದಲ್ಲಿ ಶಿವಲಿಂಗಕ್ಕೆ ರುದ್ರಾಭಿಷೇಕ ಮತ್ತು ವಿಶೇಷ ಪೂಜೆ ಮಾಡಲಾಗಿದೆ. ನಾಳೆಯಿಂದ ಶಿವಲಿಂಗ ಸಾರ್ವಜನಿಕ ದರ್ಶನಕ್ಕೆ ಲಭ್ಯವಿರುತ್ತದೆ.
ಬಸವರಾಜ ಬೈಚಬಾಳ, ಪ್ರಧಾನ ಅರ್ಚಕ