
ಕೆಂಭಾವಿ:ಫೆ.19:ಶಿವ ಕಲ್ಯಾಣಕಾರಿಯಾಗಿದ್ದಾನೆ. ಶಿವ ಸ್ಮರಣೆಯಿಂದ ಮನಸ್ಸಿನಲ್ಲಿರುವ ಋಣಾತ್ಮಕ ಚಿಂತನೆಗಳು ಮಾಯಾವಾಗಿ ಧನಾತ್ಮಕ ಚಿಂತನೆಗಳು ಮೈಗೂಡುತ್ತವೆ ಎಂದು ಅರ್ಚಕ ಪ್ರಶಾಂತಸ್ವಾಮಿ ಹೇಳಿದರು.
ಪಟ್ಟಣದ ಸೊನ್ನದ ಬಡಾವಣೆಯ ಸಿದ್ದೇಶ್ವರ ದೇವಸ್ಥಾನದಲ್ಲಿ ಶಿವರಾತ್ರಿ ನಿಮಿತ್ತ ಶಿವಲಿಂಗಕ್ಕೆ ವಿಶೇಷ ಪೂಜೆ ಸಲ್ಲಿಸಿ ಮಾತನಾಡಿದರು. ಶಿವ ಭಗವಂತನು ದುಃಖವನ್ನು ದೂರಮಾಡಿ ಸುಖವನ್ನು ನೀಡುವವನಾಗಿದ್ದಾನೆ. ಅವಿನಾಶಿ ಪರಮಾತ್ಮ ಅವಿನಾಶಿ ಜ್ಞಾನ ನೀಡಿ ಮನುಷ್ಯರನ್ನು ದೇವತೆಗಳನ್ನಾಗಿ ಪರಿವರ್ತಿಸುತ್ತಾನೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಅರ್ಚಕ ಬಸವರಾಜ ಬೈಚಬಾಳ, ರಮೇಶ ಸಾಸಾಬಾಳ, ವಿಕಾಸ ಸೊನ್ನದ, ರಾಘವೇಂದ್ರ ಡಿಗ್ಗಾವಿ, ಸಿದ್ದು ಸಾಸಾಬಾಳ, ವೀರೇಶ ಬೈಚಬಾಳ ಸೇರಿದಂತೆ ಅನೇಕ ಭಕ್ತರಿದ್ದರು.