
ಕರಜಗಿ : ಫೆ.26:ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ,ಸಾಮಾಜಿಕ ಪರಿಶೋಧನಾ ನಿರ್ದೇಶನಾಲಯ, ಜಿಲ್ಲಾ ಪಂಚಾಯತ್, ತಾಪಂ ಪಂಚಾಯತ್ ಅಫಜಲಪುರ ಇವರ ಸಹಯೋಗದಲ್ಲಿ ನಡೆದ 2022-23ನೇ ಸಾಲಿನ ಪ್ರಧಾನ ಮಂತ್ರಿ ಷೋಷಣಾ ಶಕ್ತಿ ನಿರ್ಮಾಣ ಯೋಜನೆಯ ಸಾಮಾಜಿಕ ಪರಿಶೋಧನೆ,ಶಾಲಾ ಷೋಷಕರ ಸಭೆಯು ಪಾಲಕರಾದ ಪರಮೇಶ್ವರ್ ಜಮಾದಾರ ಇವರ ಅಧ್ಯಕ್ಷತೆಯಲ್ಲಿ ಜರುಗಿತು.ತಾಲೂಕಿನ ಶಿವೂರ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ತಾಲೂಕು ಸಾಮಾಜಿಕ ಪರಿಶೋಧನಾ ಕಾರ್ಯಕ್ರಮದ ವ್ಯವಸ್ಥಾಪಕರಾದ ಚನ್ನಮ್ಮ ಎಸ್.ಪೂಜಾರಿ ಮಾತನಾಡಿ, ಸರ್ಕಾರದ ಆದೇಶದ ಮೇರೆಗೆ ಫೆಬ್ರುವರಿ 21ರಿಂದ 23ವರೆಗೆ ಪ್ರಧಾನ ಮಂತ್ರಿ ಫೆÇೀಷಣಾ ಶಕ್ತಿ ಯೋಜನೆ ಹಾಗೂ ಕ್ಷೀರ ಭಾಗ್ಯ ಯೋಜನೆಯಡಿ ಸತತ ಮೂರು ದಿನಗಳ ಕಾಲ ಪರಿಶೀಲನೆ ಮಾಡಲಾಗಿದ್ದು ಶಾಲೆಗೆ ಬಂದಿರುವ ಒಟ್ಟು ಅನುದಾನ 323059ರೂ. ಅದರಲ್ಲಿ 216069ರೂ. ಖರ್ಚಾಗಿದೆ,49990 ರೂ.ಉಳಿದಿರುವ ಕುರಿತು ಹಾಗೂ ಶಾಲೆಯ ಸಮಸ್ಯೆಗಳ ಬಗ್ಗೆ ವಿವರವಾಗಿ ಮಾತನಾಡಿದರು.
ಶಾಲೆಯ ಮುಖ್ಯಗುರುಗಳಾದ ಲಾಲ ಅಹ್ಮದ್ ಚೌಧರಿ ಮಾತನಾಡಿ, ಸಾಮಾಜಿಕ ಪರಿಶೋಧನೆಯಿಂದ ಸರಿಯಾದ ನಿಟ್ಟಿನಲ್ಲಿ ದಾಖಲೆಗಳು ನಿರ್ವಹಣೆ ಹಾಗೂ ಊಟದ ಸಮಯದಲ್ಲಿ ಶಿಸ್ತುನ್ನು ಕಾಪಾಡಿಕೊಳ್ಳಲು ಮನವರಿಕೆಯಾಗಿದೆ ಎಂದು ತಿಳಿಸಿದರು.