ಶಿವಾನುಭವ ಚಿಂತನದಿಂದ ಬದುಕಿಗೆ ನೆಮ್ಮದಿ

ಕೆಂಭಾವಿ:ಜೂ.8:ದೇವಾನುದೇವತೆಗಳಿಗೆ ಸೋಮಾಕಸುರ ಎಂಬ ರಾಕ್ಷಸ ಉಪಟಳ ಕೊಡುತ್ತಿದ್ದ ಅವನನ್ನು ಸಂಹಾರ ಮಾಡಿದ ನಂದೀಶ್ವನಿಗೆ ದೇವರುಗಳು ಆರತಿ ಬೆಳಗಿ ಆರಾಧಿಸಿದ ಪ್ರಯುಕ್ತ ಅಂದಿನಿಂದ ಇಂದಿನವರೆಗೂ ಆಚರಿಸುವ ಹಬ್ಬವೇ ಕಾರಹುಣಮೆ ಎಂದು ಮುರಾರ್ಜಿ ದೇಸಾಯಿ ವಸತಿ ಶಾಲೆಯ ಸಂಗೀತ ಶಿಕ್ಷಕ ಹಾಗೂ ಪುರಾಣ ಪ್ರವಚನಕಾರ ಮಲ್ಲಯ್ಯ ಸ್ವಾಮಿ ವಡಿಗೇರಿ ಹೇಳಿದರು.
ಪಟ್ಟಣದ ಹಿರೇಮಠ ಸಂಸ್ಥಾನದಲ್ಲಿ ಶ್ರೀ ಗುರು ಕಾಂತೇಶ್ವರ ಜನ ಕಲ್ಯಾಣ ಸೇವಾ ಪ್ರತಿಷ್ಠಾನದ ವತಿಯಿಂದ ಜರುಗಿದ ಮಾಸಿಕ ಹುಣ್ಣಿಮೆಯ ಶಿವಾನುಭವ ಚಿಂತನಾ ಸಭೆ ಉದ್ಘಾಟಿಸಿ ವಿಶೇಷ ಉಪನ್ಯಾಸ ನೀಡಿದ ಅವರು ದುಃಖದ ಬದುಕಿಗೆ ಸುಖ, ಶಾಂತಿ, ನೆಮ್ಮದಿ, ಎಲ್ಲಿ ಸಿಗುತ್ತದೆ ಅಂದರೆ ಅದು ಯಾವುದೇ ದಿನಸಿ ಅಂಗಡಿಯಲ್ಲಿ ಸಿಗುವುದಿಲ್ಲ ಅಧಿಕಾರ ಅಂತಸ್ತು ಹಣದಲ್ಲಿ ಇಲ್ಲ. ಜೀವನದ ನಿಜ ಸುಖ ಎಲ್ಲಿದೆ ಎಂದರೆ ನಿತ್ಯ ನಿರಂತರವಾಗಿ ನಡೆಯುತ್ತಿರುವ ಇಂತಹ ಮಾಸಿಕ ಶಿವಾನುಭವ ಸತ್ಸಂಗದಲ್ಲಿ ಎಂದವರು ತಿಳಿಸಿದರು.
ಪಾವನ ಸಾನಿಧ್ಯ ವಹಿಸಿ ಆಶೀರ್ವಚನ ನೀಡಿದ ಷ ಬ್ರ ಚನ್ನಬಸವ ಶಿವಾಚಾರ್ಯರು ಮನಸ್ಸಿನ ಮಲ್ಲೀನ ತೊಳೆದು ಮಹಾದೇನ ದರ್ಶನ ಭಾಗ್ಯ ಕರುಣಿಸಿ ಸನ್ಮಾರ್ಗ ತೋರುವ ಮಾಸಿಕ ಹುಣ್ಣಿಮೆಯ ಶಿವಾನುಭವ ಗೋಷ್ಠಿಯ ಸದುಪಯೋಗಪಡಿಸಿಕೊಂಡು ಪಾವನರಾಗೋಣ ಎಂದು ನುಡಿದರು
ಆಕಾಶವಾಣಿ ದೂರದರ್ಶನ ಹಿರಿಯ ತಬಲಾ ವಾದಕ ಶರಣಕುಮಾರ ಯಾಳಗಿ ಹಾಗೂ ಸುಮಧುರ ಕಂಠದ ಯಮನೇಶ ಯಾಳಗಿ ಇವರಿಂದ ಸಂಗೀತ ಕಾರ್ಯಕ್ರಮ ಮೂಡಿ ಬಂತು . ನಿಜಗುಣ ವಿಶ್ವಕರ್ಮ, ಅಭಿಷೇಕ ಪಾಟೀಲ, ಡಾ ಯಂಕನಗೌಡ ಪಾಟೀಲ್ ಮಾಲಹಳ್ಳಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.