ಶಿವಾನಿ ಸ್ವಾಮಿಗೆ ಬಿಕೆಡಿ ಫೌಂಡೇಷನ್ ಸತ್ಕಾರ

ಬೀದರ್:ಅ.19: ಸಂಗೀತ ಕ್ಷೇತ್ರದ ಯುವ ಪ್ರತಿಭೆಗಳನ್ನು ಗುರುತಿಸಿ, ಬೆಳೆಸುವ ರಿಯಾಲಿಟಿ ಶೋ ಇಂಡಿಯನ್ ಐಡೊ???ನಲ್ಲಿ ಪ್ರವೇಶ ಪಡೆದ ಜಿಲ್ಲೆಯ ಕಲಾವಿದೆ ಶಿವಾನಿ ಶಿವದಾಸ ಸ್ವಾಮಿ ಅವರನ್ನು ಬಸವ ಕಾಯಕ, ದಾಸೋಹ(ಬಿಕೆಡಿ) ಫೌಂಡೇಷನ್ ವತಿಯಿಂದ ನಗರದಲ್ಲಿ ಸತ್ಕರಿಸಲಾಯಿತು.
ಫೌಂಡೇಷನ್ ಅಧ್ಯಕ್ಷ ಬಸವರಾಜ ಧನ್ನೂರ ಅವರು ಶಾಲು ಹೊದಿಸಿ, ಸ್ಮರಣಿಕೆ ಹಾಗೂ ರೂ. 11 ಸಾವಿರ ನೆನಪಿನ ಕಾಣಿಕೆ ನೀಡಿ ಗೌರವಿಸಿದರು.
ಶಿವಾನಿ ಸ್ವಾಮಿ ಕಲೆಯನ್ನೇ ಉಸಿರಾಗಿಸಿಕೊಂಡಿದ್ದಾರೆ. ಸಂಗೀತದಲ್ಲಿ ಸಿದ್ಧಿ ಗಳಿಸಿದ್ದಾರೆ. ಇಂಡಿಯನ್ ಐಡೊಲ್ ಸ್ಪರ್ಧೆಯಲ್ಲಿ ಧಮಾಕಾ ಪ್ರದರ್ಶನ ನೀಡುವ ಮೂಲಕ ಜಿಲ್ಲೆಯ ಕೀರ್ತಿ ಹೆಚ್ಚಿಸಿದ್ದಾರೆ ಎಂದು ಬಸವರಾಜ ಧನ್ನೂರ ಹೇಳಿದರು.
ಶಿವಾನಿ ಸ್ವಾಮಿ ಅವರು ಇಂಡಿಯನ್ ಐಡೊಲ್ ಸ್ಪರ್ಧೆಯನ್ನು ಗೆಲ್ಲಲ್ಲಿ, ರಾಜ್ಯ ಹಾಗೂ ರಾಷ್ಟ್ರಮಟ್ಟದ ಉತ್ತಮ ಗಾಯಕಿಯಾಗಿ ಹೆಸರು ಮಾಡಲಿ ಎಂದು ಶುಭ ಹಾರೈಸಿದರು.