ಶಿವಾನಿ ಗಾರ್ಮೆಂಟ್ಸ್‍ನ ಕಾರ್ಮಿಕರಲ್ಲಿ ಮತದಾನ ಜಾಗೃತಿ

ವಿಜಯಪುರ, ಏ.18: ಜಿಲ್ಲಾ ಸ್ವೀಪ್ ಸಮಿತಿ ಹಾಗೂ ಕೈಮಗ್ಗ ಮತ್ತು ಜವಳಿ ಇಲಾಖೆ, ಜಿಲ್ಲಾ ಪಂಚಾಯತ್ ಇವರ ಸಂಯುಕ್ತಾಶ್ರಯದಲ್ಲಿ ಮತದಾನ ಜಾಗೃತಿ ಕಾರ್ಯಕ್ರಮದ ಅಂಗವಾಗಿ ಜಿಲ್ಲೆಯ ಅತಾಲಟ್ಟಿ ಗ್ರಾಮದಲ್ಲಿರುವ ಶಿವಾನಿ ಗಾರ್ಮೆಂಟ್ಸ್‍ನಲ್ಲಿ ಗುರುವಾರ ಸದರಿ ಘಟಕದ ಎಲ್ಲ ಕಾರ್ಮಿಕರಿಗೆ ಮತದಾನ ಪ್ರತಿಜ್ಞಾ ವಿಧಿ ಬೋಧಿಸಲಾಯಿತು.
ಕಾರ್ಯಕ್ರಮದಲ್ಲಿ ಕೈಮಗ್ಗ ಮತ್ತು ಜವಳಿ ಇಲಾಖೆಯ ಸಹಾಯಕ ನಿರ್ದೇಶಕರಾದ ಜಿ.ಎ ವಾಘಮೋರೆ ಅವರು ಮಾತನಾಡಿ ಮತದಾನ ನಮ್ಮ ಹಕ್ಕು. ಎಲ್ಲರೂ ತಪ್ಪದೇ ಮತದಾನ ಮಾಡಬೇಕು ಎಂದು ಕರೆ ನೀಡಿದರು.
ಈ ಸಂದರ್ಭದಲ್ಲಿ ಶಿವಾನಿ ಗಾರ್ಮೆಂಟ್ಸ್ ಘಟಕದ ಮಾಲೀಕರಾದ ನಿತೀನ್ ಕೊಕಟನೂರ ಹಾಗೂ ಘಟಕದ ಮಾನವ ಸಂಪನ್ಮೂಲ ಅಧಿಕಾರಿಗಳಾದ ಜೋಶಿ ಹಾಗೂ ಸಿಬ್ಬಂದಿಗಳು ಉಪಸ್ಥಿತರಿದ್ದರು.