
ತಾಳಿಕೊಟೆ:ಮೇ.19: ಬಸವನ ಬಾಗೇವಾಡಿ ಮತಕ್ಷೇತ್ರದಿಂದ ಭಾರಿ ಅಂತರದಲ್ಲಿ ಹ್ಯಾಟ್ರೀಕ್ ಗೆಲುವು ಸಾಧಿಸಿರುವ ಶಾಸಕ ಶಿವಾನಂದ ಪಾಟೀಲ ಅವರಿಗೆ ಈ ಭಾರಿಯ ಸಚೀವ ಸಂಪುಟದಲ್ಲಿ ಕ್ಯಾಬಿನೇಟ್ ದರ್ಜೆಯ ಸಚೀವ ಸ್ಥಾನ ನೀಡಬೇಕೆಂದು ಶಿವಾನಂದ ಪಾಟೀಲ ಅವರ ಅಭಿಮಾನಿ ಬಳಗದ ಅಧ್ಯಕ್ಷ ರಘುರಾಮಸಿಂಗ್ ಹಜೇರಿ ಅವರು ಸಿದ್ದರಾಮಯ್ಯ ಮತ್ತು ಡಿಕೆ ಶಿವಕುಮಾರ ಅವರಲ್ಲಿ ಒತ್ತಾಯಿಸಿದ್ದಾರೆ.
ಗುರುವಾರರಂದು ಸುದ್ದಿಗೋಷ್ಠಿಯಲ್ಲಿ ಮಾತನಾಡುತ್ತಿದ್ದ ಅವರು ಶಿವಾನಂದ ಪಾಟೀಲ ಅವರು 6ಭಾರಿ ಶಾಸಕರಾಗಿ ಆಯ್ಕೆಯಾಗಿದ್ದಾರೆ ಈ ಹಿಂದೆ ಸಚೀವರಾಗಿ ಅನೇಕ ಯೋಜನೆಗಳನ್ನು ಜಾರಿಗೆ ತಂದು ರಾಜ್ಯದ ಜನರ ಸೇವೆ ಸಲ್ಲಿಸಿದ ಅನುಭವ ಅವರಲ್ಲಿದೆ ಮತ್ತು ಮತಕ್ಷೇತ್ರದಲ್ಲಿ ನೀರಾವರಿ, ಕುಡಿಯುವ ನೀರಿನ ಯೋಜನೆ ಅಲ್ಲದೇ ರಸ್ತೆ ಅಭಿವೃದ್ದಿ ಯೊಳಗೊಂಡು ಅನೇಕ ಅಭಿವೃದ್ದಿ ಕೆಲಸಗಳನ್ನು ಮಾಡಿದ್ದಾರೆ ಸಹಕಾರಿ ರಂಗದಲ್ಲಿಯೂ ಅವರ ಸೇವೆ ಅನುಪಮವಾದುದ್ದಾಗಿದೆ ಉತ್ತರ ಕರ್ನಾಟಕದಲ್ಲಿ ಪ್ರಭಲ ಲಿಂಗಾಯತ ನಾಯಕರುಕೂಡಾ ಆಗಿದ್ದು ಈ ಭಾರಿಯ ಸಚೀವ ಸಂಪುಟದಲ್ಲಿ ಶಾಸಕ ಶಿವಾನಂದ ಪಾಟೀಲ ಅವರಿಗೆ ಸ್ಥಾನ ಒದಗಿಸಿ ಉತ್ತರ ಕರ್ನಾಟಕ ಭಾಗದಲ್ಲಿ ಪಕ್ಷ ಸಂಘಟನೆಯ ಜೊತೆಗೆ ಅಭಿವೃದ್ದಿ ಕಾರ್ಯಗಳಿಗೆ ಶಕ್ತಿ ತುಂಬುವಂತಹ ಕೆಲಸ ಮಾಡಬೇಕಿದೆ ಈ ನಿಟ್ಟಿನಲ್ಲಿ ಸೀಘ್ರದಲ್ಲಿಯೇ ನಿಯೋಗದೊಂದಿಗೆ ಕಾಂಗ್ರೇಸ್ ಹೈಕಮಾಂಡನ ಎಲ್ಲ ನಾಯಕರುಗಳಿಗೆ ಬೆಟ್ಟಿಯಾಗಿ ಸಚೀವ ಸ್ಥಾನಕ್ಕಾಗಿ ಒತ್ತಾಯಿಸಲಿದ್ದೇವೆಂದರು.