ಶಿವಾಜಿ ಹೊಸ ಅವತಾರ

“ಶಿವಾಜಿ ಸುರತ್ಕಲ್ ” ಬಿಡುಗಡೆಯಾಗಿ ಗಮನ ಸೆಳೆದಿದ್ದ ನಡುವೆಯೇ ಅದರ ಮುಂದುವರಿದ ಭಾಗ ತೆರೆಗೆ ಬರಲು ಸಜ್ಜಾಗಿದೆ. “ಶಿವಾಜಿ ಸುರತ್ಕಲ್ 2” ಚಿತ್ರದಲ್ಲಿ ಶಿವಾಜಿ ಯಾವ  ಕೇಸ್ ತೆಗೆದುಕೊಳ್ಳುತ್ತಾನೆ ಎನ್ನುವ  ಕುತೂಹಲಕ್ಕೆ ಸದ್ಯದಲ್ಲೇ ಉತ್ತರ ಸಿಗಲಿದೆ

ಚಿತ್ರ  ಮುಂದಿನ ತಿಂಗಳು 14 ರಂದು ಬಿಡುಗಡೆಗೆ ಸಜ್ಜಾಗಿರುವ ಹಿನ್ನೆಲೆಯಲ್ಲಿ  ಚಿತ್ರದ‌ ಕುರಿತು ತಂಡ ಮಾಹಿತಿ ಹಂಚಿಕೊಂಡಿತು.

ನಟ ರಮೇಶ್ ಅರವಿಂದ್, ಚಿತ್ರದಲ್ಲಿ ನಟಿಸಿರುವ ಎಲ್ಲಾ  ಕಲಾವಿದರ ಅಭಿನಯ ಹಾಗೂ ತಂತ್ರಜ್ಞರ ಕಾರ್ಯವೈಖರಿ ಉತ್ತಮವಾಗಿದೆ. ಮೊದಲ ಭಾಗಕ್ಕಿಂತ ಎರಡನೇ ಭಾಗ ತೀವ್ರ ಕುತೂಹಲ ಕೆರಳಿಸಲಿದೆ. ಶಿವಾಜಿ ಯಾವುದಾರೂ ಕೇಸ್ ಕೈಗೆತ್ತಿಕೊಂಡರೆ ಒಂದು ಜೈಲಿಗೆ ಇಲ್ಲ ಮತ್ತೊಂದು ಸ್ಮಶಾನಕ್ಕೆ ಎಂದು ಪಾತ್ರದ ಬಗ್ಗೆ ವಿವರ ನೀಡಿದರು.

ನಿರ್ದೇಶಕ ಆಕಾಶ್ ಶ್ರೀವತ್ಸ ಮಾತನಾಡಿ,

 ಚಿತ್ರದ ಮೊದಲ ಹಾಡು ಬಿಡುಗಡೆಯಾಗಿದೆ. ನಟಿ ಸಂಗೀತ ಶೃಂಗೇರಿ ಹಾಡಿಗೆ ಹೆಜ್ಜೆ ಹಾಕಿದ್ದಾರೆ. ಜೂಡ ಸ್ಯಾಂಡಿ  ಸಂಗೀತವಿರುವ  ಹಾಡಿನಲ್ಲಿ  ರಮೇಶ್ ಅರವಿಂದ್ ಸಹ ಕಾಣಿಸಿಕೊಳ್ಳುತ್ತಾರೆ. ಈ ಕುತೂಹಲ ಸದ್ಯಕ್ಕೆ ಹಾಗೆ ಇರಲಿ. ಬಿಡುಗಡೆಯ ದಿನ ಕುತೂಹಲಕ್ಕೆ ಉತ್ತರ ಸಿಗಲಿದೆ  ಎಂದರು.

ನಿರ್ಮಾಪಕ ಅನೂಪ್ ಗೌಡ, ಚಿತ್ರದಲ್ಲಿ ರಮೇಶ್ ಅವರ ಪಾತ್ರ ನೋಡಿದರೆ, ನನಗೆ “ಅಮೃತ ವರ್ಷಿಣಿ” ಚಿತ್ರದ ಪಾತ್ರ ನೆನಪಾಗುತ್ತದೆ.  ಈಗಾಗಲೇ ಸಿನಿಮಾ ನೋಡಿದ್ದೇನೆ. ಜನ ಮೆಚ್ಚಿಕೊಳ್ಳುವ ಭರವಸೆಯಿದೆ ಎನ್ನುವ ವಿಶ್ವಾಸ ವ್ಯಕ್ತಪಡಿಸಿದರು.

ಚಿತ್ರದಲ್ಲಿ ಅಭಿನಯಿಸಿರುವ ರಾಧಿಕಾ ನಾರಾಯಣ್, ಮೇಘನಾ ಗಾಂವ್ಕರ್, ಹಾಡಿನಲ್ಲಿ ನಟಿಸಿರುವ ಸಂಗೀತ ಶೃಂಗೇರಿ, ನಟರಾದ ರಘು ರಮಣಕೊಪ್ಪ, ವಿನಾಯಕ್ ಜೋಶಿ ಮುಂತಾದವರು ತಮ್ಮ ಪಾತ್ರ ಹಾಗೂ ಹಾಡಿನ ಬಗ್ಗೆ ಮಾಹಿತಿ ಹಂಚಿಕೊಂಡರು.

“ಟ್ವಿಂಕಲ್” ಹಾಡು ಆನಂದ್ ಆಡಿಯೋ ಮೂಲಕ ಬಿಡುಗಡೆಯಾಗಿದೆ. ಆಕಾಶ್ ಶ್ರೀವತ್ಸ ಬರೆದಿರುವ ಈ ಹಾಡಿಗೆ ಜೂಡಾ ಸ್ಯಾಂಡಿ ಸಂಗೀತವಿದ್ದು. ಇಶಾ ಸುಚಿ ಹಾಗೂ ಜೂಡಾ ಸ್ಯಾಂಡಿ ಹಾಡಿದ್ದಾರೆ.