
ವಾಡಿ:ಮಾ.26: ಛತ್ರಪತಿ ಶಿವಾಜಿ ಮಹಾರಾಜರ ತ್ಯಾಗ-ಬಲಿದಾನದಿಂದ ಹಿಂದೂ ಸಮಾಜ ಜೀವಂತವಾಗಿದೆ. ಶಿವಾಜಿ ಹಿಂದೂಗಳ ಹೃದಯ ಸಾಮ್ರಾಟವಾಗಿದ್ದಾನೆ ಎಂದು ರಾವೂರ ಶ್ರೀಸಿದ್ದಲಿಂಗೇಶ್ವರ ಮಠದ ಶ್ರೀಸಿದ್ದಲಿಂಗ ಮಹಾಸ್ವಾಮಿ ಹೇಳಿದರು.
ಪಟ್ಟಣದ ಅಂಬೇಡ್ಕರ್ ಸ್ಮಾರಕ ಭವನದ ಎದುರುಗಡೆ ಆವರಣದಲ್ಲಿ ಛತ್ರಪತಿ ಶಿವಾಜಿ ಮಹಾರಾಜರ 393 ಜಯಂತೋತ್ಸವ ಕಾರ್ಯಕ್ರಮದ ದಿವ್ಯಸಾನಿಧ್ಯ ವಹಿಸಿ ಮಾತನಾಡುತ್ತಾ, ದೇಶದ ಅನೇಕ ದೇವಾಲಯಗಳು ಮತ್ತು ದೇವತೆಗಳು ಜೀವಂತವಾಗಿರಲು ಶಿವಾಜಿ ಕಾರಣ ಇಲ್ಲವಾದಲ್ಲಿ ದೇಶದಲ್ಲಿ ದೇವಾಲಯಗಳೇ ಇರುತ್ತಿರಲಿಲ್ಲ. ಶಿವಾಜಿ ಸಮತಾವಾದಿ, ಹಿಂದೂತ್ವವಾದಿ ಆಗಿದ್ದರು ಎಂದು ತಿಳಿಸಿದರು.
ಎಂಎಲ್‍ಸಿ ಸುನೀಲ ವಲ್ಯಾಪೂರೇ ಮಾತನಾಡಿ, ಹಿಂದೆ ಶಾಸಕನಾಗಿದ್ದಾಗ ಮರಾಠ ಅಕ್ಕ-ತಂಗಿಯರಿಂದ ರಾಕಿ ಕಟ್ಟಿಸಿಕೊಳ್ಳುತ್ತಿದೆ ಮರಾಠಾ ಸಮುದಾಯದ ಜೊತೆ ಉತ್ತಮ ಬಾಂಧವ್ಯವಿದೆ. ಮರಾಠ ಸಮುದಾಯ ಭವನಕ್ಕೆ 10 ಲಕ್ಷ ರೂ ನೀಡುವ ಭರವಸೆ ನೀಡಿದರು.
ಕೆ.ಕೆ.ಎಂ.ಪಿ ರಾಜ್ಯ ಉಪಾಧ್ಯಕ್ಷ ಸೂರ್ಯಕಾಂತ ಕದಮ ಮಾತನಾಡಿ, ಸರ್ವಧರ್ಮದವರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಹೋಗುವ ರಾಜ ಶಿವಾಜಿ ಮಹಾರಾಜರು ಆಗಿದ್ದರು, ಮುಸ್ಲಿಂ ವಿರೋಧಿ ಆಗಿರಲಿಲ್ಲ. ಸಮಾಜದಲ್ಲಿ ಸಾಮಾಜಿಕ ನ್ಯಾಯ ಸಿಗದೆ ಇದ್ದಾಗ ಜಾತಿ-ಸಮುದಾಯ ಪರಿಗಣಿಸದೆ ಅನ್ಯಾಯದ ವಿರುದ್ದ ಹೋರಾಡುವ ವ್ಯಕ್ತಿತ್ವ ಅವರದಾಗಿತ್ತು. ಮಾಜಿ ಸಿಎಂ ಸದಾನಂದಗೌಡರು ಶಿವಾಜಿ ಜಯಂತಿಯನ್ನು ಸರ್ಕಾರದ ವತಿಯಿಂದ ಆಚರಿಸಲಾಯಿತ್ತು. ಮಾಜಿ ಸಿಎಂ ಬಿಎಸ್ ಯೂಡಿಯೂರಪ್ಪನವರು ಮರಾಠ ಅಬಿವೃದ್ಧಿ ನಿಗಮ ಸ್ಥಾಪಿಸಿ ಸಾಮಾಜಿಕ ಆರ್ಥಿಕ, ಶೈಕ್ಷಣಿಕ ಪ್ರಗತಿಗೆ ಮುನ್ನಡಿ ಬರೆದಿದ್ದಾರೆ ಎಂದರು.
ಕಾರ್ಯಕ್ರಮದಲ್ಲಿ ಹರ್ಷಲ ಬಾಗಲ ಕರವಾಡಿ ಮಾತನಾಡಿದರು. ಜಯಂತೋತ್ಸವ ಸಮಿತಿ ಅಧ್ಯಕ್ಷ ಅಶೋಕ ಸೂರ್ಯವಂಶಿ, ಕಾರ್ಯದರ್ಶಿ ಹರಿ ಗಲಾಂಡೆ, ವಾಡಿ ಮರಾಠ ಸಮಾಜದ ಅಧ್ಯಕ್ಷ ಅಶೋಕ ಬಾಜಿರಾವ, ಕೆ.ಕೆ.ಎಂಪಿ ಜಿಲ್ಲಾಧ್ಯಕ್ಷ ಆರ್.ಬಿ. ಜಗದಾಳೆ, ಕಾರ್ಯದರ್ಶಿ ರಾಜು ಕಾಕಡೆ, ತಾಲ್ಲೂಕಧ್ಯಕ್ಷ ವಿಷ್ಣು ಸೂರ್ಯವಂಶಿ, ಶಹಾಬಾದ ತಾಲ್ಲೂಕ ಅಧ್ಯಕ್ಷ ಶಂಕರರಾವ ಬಗಾಡೆ, ಯಾದಗಿರಿ ಜಿಲ್ಲಾಧ್ಯಕ್ಷ ರಾಜು ಚವ್ಹಾಣ, ತಾಲ್ಲೂಕಧ್ಯಕ್ಷ ರಾಜು ಢವಳೆ, ಡಾ.ವಿಧ್ಯಾರಾಣಿ ಸೂರ್ಯವಂಶಿ, ಭೀಮರಾವ ದೊರೆ, ದೇವಿಂದ್ರ ಕರದಳ್ಳಿ, ಡಾ. ಮಹೇಶ್ವರ, ಸೇರಿದಂತೆ ಅನೇಕರು ಇದ್ದರು. ಪ್ರಾರ್ಥನಾ ಗೀತೆಯನ್ನು ಸವಿತಾ ರಾಜು ಯಾದವ, ಸ್ವಾಗತವನ್ನು ಸುಚಿತಾ ಗಲಾಂಡೆ, ಪ್ರಾಸ್ತಾವಿಕವಾಗಿ ಸೀಮಾ ಧವಳೆ, ನಿರೂಪಣೆಯನ್ನು ವೀರಣ್ಣ ಯಾರಿ ನೇರವೇರಿಸಿದರು.