ಶಿವಾಜಿ ಮೂರ್ತಿ ಭಗ್ನ: ಮುತಾಲಿಕ್ ಆಕ್ರೋಶ

ಹುಬ್ಬಳ್ಳಿ,ಮಾ26:ಕಳೆದ ಎರಡು ದಿನಗಳ ಹಿಂದೆಯಷ್ಟೇ ಹು-ಧಾ ಮಹಾನಗರ ಪಾಲಿಕೆ ಆವರಣದಲ್ಲಿರುವ ಛತ್ರಪತಿ ಶಿವಾಜಿ ಮೂರ್ತಿ ನೆಲಕ್ಕೆ ಉರುಳಿದ ಬೆನ್ನಲ್ಲೇ ಶ್ರೀರಾಮಸೇನಾ ರಾಷ್ಟ್ರೀಯ ಅಧ್ಯಕ್ಷರಾದ ಪ್ರಮೋದ್ ಮುತಾಲಿಕ್ ಪಾಲಿಕೆ ಆವರಣಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಬಳಿಕ ಮಾಧ್ಯಮದ ಜೊತೆಗೆ ಮಾತನಾಡಿದ ಅವರು, ಮಹಾನಗರ ಪಾಲಿಕೆಯ ಕಳಪೆ ಕಾಮಗಾರಿ ಹಾಗೂ ನಿರ್ಲಕ್ಷ್ಯದಿಂದ ಹಿಂದೂ ಹೃದಯ ಸಾಮ್ರಾಟ್ ಛತ್ರಪತಿ ಶಿವಾಜಿ ಅವರಿಗೆ ಅಗೌರವ ಮಾಡಿದಂತಾಗಿದೆ. ದುರಸ್ತಿ ಕಾರ್ಯದ ಹಂತದಲ್ಲಿಯೇ ಮೂರ್ತಿ ಭಗ್ನವಾಗಿರುವುದನ್ನು ನೋಡಿದರೆ ನಿಜಕ್ಕೂ ಪಾಲಿಕೆ ಕಾಮಗಾರಿ ಹಾಗೂ ಅಧಿಕಾರಿಗಳ ನಡೆ ನೋಡಿದರೇ ನಾಚಿಕೆ ಆಗುತ್ತದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಅತಿ ಹೆಚ್ಚಿನ ನಿರ್ಲಕ್ಷ್ಯ ಹಾಗೂ ಭ್ರಷ್ಟಾಚಾರ ವ್ಯವಸ್ಥೆ ನೋಡಬೇಕೆಂದರೇ ಪಾಲಿಕೆ ಆವರಣಕ್ಕೆ ಬಂದು ನೋಡಬೇಕು ಎಂದು ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಮೂರ್ತಿ ನಿರ್ಮಾಣದ ಬಗ್ಗೆ ಹಾರಿಕೆ ಉತ್ತರಗಳನ್ನು ನೀಡುವುದನ್ನು ಬಿಟ್ಟು ನೂರು ದಿನಗಳ ಒಳಗೆ ಶಿವಾಜಿ ಮೂರ್ತಿಯನ್ನು ಪ್ರತಿಷ್ಟಾಪನೆ ಮಾಡಬೇಕು. ಇಲ್ಲವಾದರೆ ಉಗ್ರ ಪ್ರತಿಭಟನೆ ಮಾಡಲಾಗುವುದು ಎಂದು ಪ್ರಮೋದ ಮುತಾಲಿಕೆ ಹೇಳಿದರು.