ಶಿವಾಜಿ ಮಹಾರಾಜ ಕೋ-ಆಪ್. ಕ್ರೆಡಿಟ್ ಸೊಸಾಯಿಟಿಯಲ್ಲಿ ಸಹಕಾರ ಸಪ್ತಾಹ ಕಾರ್ಯಕ್ರಮ ಆಯೋಜನೆ

ವಿಜಯಪುರ: ನ.15:ನಗರದ ಶಿವಾಜಿ ಮಹಾರಾಜ ಕೋ-ಆಪ್. ಕ್ರೆಡಿಟ್ ಸೊಸಾಯಿಟಿಯಲ್ಲಿ 68ನೇ ಅಖಿಲ ಭಾರತ ಸಹಕಾರ ಸಪ್ತಾಹವನ್ನು ಸಂಘದ ಅಧ್ಯಕ್ಷರಾದ ಡಾ. ಸದಾಶಿವ. ಜೆ. ಪವಾರ ಸಂಘದ ಕಚೇರಿಯ ಮೇಲೆ ಸಹಕಾರ ಧ್ವಜಾರೋಹಣ ಮಾಡುವ ಮುಖಾಂತರ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಪ್ರಾಸ್ತಾವಿಕವಾಗಿ ಮಾತನಾಡಿ ಅವರು ಸಪ್ತಾಹದಾಚರಣೆ ಸಹಕಾರಿಗಳಿಗೆ ಹಬ್ಬವಿದ್ದಂತೆ ಸಂತಸ ಸಂಭ್ರಮದಿಂದ ಆಚರಿಸುವುದು ಸಹಜ ಪ್ರಕ್ರಿಯೆಯಾಗಿರುತ್ತದೆ. ಕಳೆದ ಎರಡು ವರ್ಷಗಳು ಕೋರೋನಾ ಸೊಂಕಿನಿಂದ ಕಾರ್ಮೋಡಗಳು ಆವರಿಸಿಕೊಂಡಿದ್ದರಿಂದ ಸಪ್ತಾಹವನ್ನು ಸರಳವಾಗಿ ಸಾಂಕೇತಿಕವಾಗಿ ಆಚರಿಸಲಾಗಿದೆ.
ಸಹಕಾರ ಸಪ್ತಾಹ ಎಂದರೆ ಅಧಿಕ ಸಂಖ್ಯೆಯ ಜನರು ಪಾಲ್ಗೊಳ್ಳಬೇಕು. ಸಹಕಾರದ ಬಗ್ಗೆ ಜಾಗೃತಿ ಉಂಟಾಗಬೇಕು. ಸಹಕಾರ ತತ್ವಗಳ ಸಂದೇಶ ಜನರನ್ನು ಮುಚ್ಚಬೇಕು ಎಂಬ ಅಪೇಕ್ಷೆ ಸಹಕಾರಿಗಳದ್ದಾಗಿರುತ್ತದೆ. ಆದರೆ, ಕಳೆದೆರಡು ವರ್ಷ ಗರಿಷ್ಠ ಪ್ರಮಾಣದ ಉತ್ಸಾಹದಲ್ಲಿ ಆಚರಿಸಲು ಸಾಧ್ಯವಾಗಲಿಲ್ಲ. ಇನ್ನೂ ಕೋರೋನಾ ಸೋಂಕಿನ ಭಯ ಸಂಪೂರ್ಣವಾಗಿ ನಿವಾರಣೆವಾಗಿಲ್ಲ. ಹಾಗೂ ವಿಧಾನಪರಿಷತ್ ಚುನಾವಣೆಯ ನೀತಿ ಸಂಹಿತೆ ಜಾರಿಯಲ್ಲಿ ಇರುವದರಿಂದ, ಕೇವಲ ಸಹಕಾರ ಧ್ವಜಾರೋಹಣ ಮಾಡಲಾಗಿದೆ. ಏಳು ದಿನಗಳ ಕಾಲ ಯಾವುದೇ ಕಾರ್ಯಕ್ರಮಗಳನ್ನು ಆಯೋಜಿಸಲು ಅನುಮತಿ ನೀಡಲಾಗಿಲ್ಲ. ಕಾರಣ ಪರಿಸ್ಥಿತಿ ಏನೇ ಇರಲಿ ಸಪ್ತಾಹದ ಆಚರಣೆಯ ಉದ್ಧೇಶವನ್ನು ಮರೆಯಬಾರದು. ಸಹಕಾರಿಗಳು ಎಲ್ಲೇ ಇದ್ದರೂ ಸಪ್ತಾಹದಾಚರಣೆ ಮನಸ್ಸಿನಲ್ಲಿ ಬೇರೂರಿರಬೇಕೆಂದು ಹೇಳಿದರು.
ಕಾರ್ಯಕ್ರಮದಲ್ಲಿ ಸಂಘದ ನಿರ್ದೇಶಕರುಗಳಾದ ಶ್ರೀ ಬಾಬುರಾವ ತರಸೆ, ಶ್ರೀ ಸಂಜಯ ಜಂಬೂರೆ, ಶ್ರೀ ಭಾರತ ದೇವಕುಳೆ, ಶ್ರೀ ರವಿ ಮದಭಾವಿ, ಶ್ರೀಮತಿ ಸರೋಜನಿ ನಿಕ್ಕಂ, ಪ್ರಧಾನ ವ್ಯವಸ್ಥಾಪಕರಾದ ಶ್ರೀ ಸಂಜಯ ಜಾಧವ, ವ್ಯವಸ್ಥಾಕರುಗಳಾದ ಶ್ರೀ ಚಂದ್ರಕಾಂತ ಜಾಧವ, ಶ್ರೀ ಅಂಬಾದಾಸ ಚವ್ಹಾಣ, ಸಿಬ್ಬಂದಿಗ ಸದಸ್ಯರುಗಳು ಹಾಗೂ ಪಿಗ್ಮಿ ಏಜೆಂಟರು ಉಪಸ್ಥಿತರಿದ್ದರು