ಶಿವಾಜಿ ಮಹಾರಾಜರ ವ್ಯಕ್ತಿತ್ವ ಆದರ್ಶಪ್ರಾಯವಾದುದು: ಸಂತೋಷ ಬಂಡೆ

ಇಂಡಿ:ಫೆ.20: ಛತ್ರಪತಿ ಶಿವಾಜಿ ಮಹಾರಾಜರ ಧೈರ್ಯ, ಶೌರ್ಯ, ಸಾಹಸ ಗುಣಗಳು ಜೊತೆಗೆ ಅವರ ವ್ಯಕ್ತಿತ್ವ ಎಲ್ಲರಿಗೂ ಮಾರ್ಗದರ್ಶಿಯಾಗಿದೆ ಎಂದು ಶಿಕ್ಷಕ ಸಂತೋಷ ಬಂಡೆ ಹೇಳಿದರು.
ಅವರು ತಾಲೂಕಿನ ಹಿರೇರೂಗಿ ಗ್ರಾಮದ ಕೆಬಿಎಸ್, ಕೆಜಿಎಸ್,ಯುಬಿಎಸ್ ಶಾಲೆಯ ವತಿಯಿಂದ ಹಮ್ಮಿಕೊಂಡ ಶಿವಾಜಿ ಜಯಂತಿ ಆಚರಣೆಗೆ ಚಾಲನೆ ನೀಡಿ ಮಾತನಾಡಿದರು.
ಶಿವಾಜಿ ಮಹಾರಾಜರು ಅಂದಿನ ಕಾಲದಲ್ಲಿ ರೈತರ ಪರ ಉತ್ತಮ ಧೋರಣೆ ಹೊಂದಿ, ಅನೇಕ ಸವಲತ್ತುಗಳನ್ನು ಒದಗಿಸಿ ಕೃಷಿಗೆ ಉತ್ತೇಜನ ನೀಡಿದ್ದರು. ಅವರ ಶೌರ್ಯ ಸಾಹಸಗಳ ಜತೆ ವ್ಯಕ್ತಿತ್ವದ ಆದರ್ಶ ಕೂಡ ಪಾಲನೀಯ ಎಂದರು.
ಅತಿಥಿ ಶಿಕ್ಷಕಿ ಆಶಾ ಕೋರಳ್ಳಿ ಮಾತನಾಡಿ, ಶಿವಾಜಿ ಅವರ ಸಾಧನೆಯ ಹಿಂದೆ ತಾಯಿ ಜೀಜಾಬಾಯಿ ಪಾತ್ರವೇ ಹೆಚ್ಚು. ರಾಮಾಯಣ, ಮಹಾಭಾರತ, ಸಂಸ್ಕøತಿ ಬಗ್ಗೆ ನೀಡಿದ ಪಾಠಗಳನ್ನು ಶಿವಾಜಿಯವರು ಜೀವನದಲ್ಲಿ ಅಳವಡಿಸಿ???ಂಡು,ಭಾರತ ಕಂಡ ಶ್ರೇಷ್ಠ ನಾಯಕರಾಗಿದ್ದರು ಎಂದು ತಿಳಿಸಿದರು.
ಅಧ್ಯಕ್ಷತೆ ವಹಿಸಿದ್ದ ಮುಖ್ಯ ಶಿಕ್ಷಕ ಅನಿಲ ಪತಂಗಿ ಮಾತನಾಡಿ, ಶಿವಾಜಿ ಮಹಾರಾಜರು ಯಾರಿಗೂ ಮೀಸಲಾಗಿರದೇ ಎಲ್ಲ ಧರ್ಮ, ಜಾತಿ, ಭಾಷೆಗಳ ಜನರಿಗೆ ಆದರ್ಶವೆನಿಸಿರುವ ರಾಷ್ಟ್ರಪುರುಷರಾಗಿದ್ದರು. ಅವರ ಕಾಲವು ಭಾರತದ ನವಯುಗದ ಆರಂಭದ ಕಾಲವಾಗಿದ್ದು ಐತಿಹಾಸಿಕವಾಗಿದೆ ಎಂದು ಹೇಳಿದರು.
ಕೆಜಿಎಸ್ ಮುಖ್ಯ ಶಿಕ್ಷಕಿ ವ್ಹಿ ವೈ ಪತ್ತಾರ, ಯುಬಿಎಸ್ ಮುಖ್ಯ ಶಿಕ್ಷಕ ಎ ಎಂ ಬೆದ್ರೇಕರ, ಶಿಕ್ಷಕರಾದ ಎಸ್ ಎಂ ಪಂಚಮುಖಿ,ಎಸ್ ಎಸ್ ಅರಬ,ಎಸ್ ಬಿ ಕುಲಕರ್ಣಿ,
ಎಸ್ ಡಿ ಬಿರಾದಾರ,ಎನ್ ಬಿ ಚೌಧರಿ,ಎಸ್ ಪಿ ಪೂಜಾರಿ, ಎಸ್ ಎನ್ ಡಂಗಿ,ಜೆ ಸಿ ಗುಣಕಿ, ಎಫ್ ಎ ಹೊರ್ತಿ,ಅತಿಥಿ ಶಿಕ್ಷಕ ರಾದ ಸಂತೋಷ ಬಿರಾದಾರ,ಯಲ್ಲಮ್ಮ
ಸಾಲೋಟಗಿ, ಡಿಎಡ್ ಪ್ರಶಿಕ್ಷಾಣಾರ್ಥಿಗಳಾದ ತೈಸಿನ್ ನದಾಫ್,ಸಾಲಿಯಾ ಶೇಖ್ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.