ಶಿವಾಜಿ ಮಹಾರಾಜರ ಮೂರ್ತಿ ಭವ್ಯ ಶೋಭಾಯಾತ್ರೆ ಪ್ರತಿಷ್ಠಾಪನೆ

ತಾಳಿಕೋಟೆ:ಮಾ.23: ಹಿಂದೂವೀ ಸ್ವರಾಜ ಸಂಸ್ಥಾಪಕ ಕ್ಷತ್ರೀಯ ಕುಲತಿಲಕ ಛತ್ರಪತಿ ಶಿವಾಜಿ ಮಹಾರಾಜರ ಅಶ್ವಾರೂಢ ಕಂಚಿನ ಮೂರ್ತಿ ತಾಳಿಕೋಟೆ ಮಹಾ ನಗರದಲ್ಲಿ ಬುಧವಾರರಂದು ಭವ್ಯ ಶೋಭಾಯಾತ್ರೆಯೊಂದಿಗೆ ಛತ್ರಪತಿ ಶಿವಾಜಿ ಮಹಾರಾಜರ ವೃತ್ತಕ್ಕೆ ಆಗಮಿಸಿ ಪ್ರತಿಷ್ಠಾಪನೆ ಮಾಡಲಾಯಿತ್ತಲ್ಲದೇ ಶಾಸಕ ಎ.ಎಸ್.ಪಾಟೀಲ(ನಡಹಳ್ಳಿ) ಅವರು ಅನಾವರಣಗೊಳಿಸಿದರು.

ಸುಮಾರು 12 ಅಡಿ ಎತ್ತರ 11 ಅಡಿ ಉದ್ದ, ಅಗಲ 5 ಅಡಿ ಬೃಹತ್ ಅಶ್ವಾರೂಢ ಶಿವಾಜಿ ಮಾಹಾರಾಜರ ಕಂಚಿನ ಮೂರ್ತಿಯು ಸುಮಾರು 11 ಕ್ವಿಂಟಲ್ ಭಾರಹೊಂದಿದ್ದಾಗಿದ್ದು ಬೆಳಿಗ್ಗೆ 10 ಗಂಟೆಗೆ ಎಪಿಎಂಸಿ ಸಭಾಭವನದಿಂದ ಬೃಹತ್ ಶೋಭಾಯಾತ್ರೆಗೆ ಶಾಸಕ ಎ.ಎಸ್.ಪಾಟೀಲ(ನಡಹಳ್ಳಿ), ಪುತ್ರ ಭರತಗೌಡ ಪಾಟೀಲ(ನಡಹಳ್ಳಿ) ಹಾಗೂ ನಾಡಿನ ಸಂತರು ಚಾಲನೆ ನೀಡಿದರು.

    ಮೆರವಣಿಗೆಯು ಎ.ಪಿ.ಎಂ.ಸಿ.ಸಭಾಭವನದಿಂದ ಪ್ರಾರಂಭಗೊಂಡು ಬಸವೇಶ್ವರ ವೃತ್ತ, ಅಂಬೇಡ್ಕರ್ ವೃತ್ತ, ಕತ್ರಿ ಭಜಾರ, ಮಾರ್ಗವಾಗಿ ವಿಠ್ಠಲ ಮಂದಿರ ರಸ್ತೆಗುಂಟಾ ಹಾಯ್ದು ಶಿವಾಜಿ ಮಹಾರಾಜರ ನಿರ್ಮಿತ ವೃತ್ತಕ್ಕೆ ಆಗಮಿಸಿತು.
    ಬೃಹತ್ ಶೋಭಾಯಾತ್ರೆಯ ಹಿನ್ನೇಲೆ ಪಟ್ಟಣವನ್ನು ಸಂಪೂರ್ಣವಾಗಿ ಕೇಸರಿ ದ್ವಜ ಮತ್ತು ಪರಪರಿಗಳಿಂದ ಅಲಂಕೃತಗೊಳಿಸಲಾಗಿತ್ತಲ್ಲದೇ ಹಬ್ಬದ ಸಡಗರ ವಾತಾವರಣ ನಿರ್ಮಾಣವಾಗಿತ್ತು. ಮೇರವಣಿಗೆಯಲ್ಲಿ ಪುನಾ ಡೋಲ, ನಾಸಿಕ್ ಡೋಲ, ಉಡಪಿಯ ಕೌಸಾಳೆ ವಾಧ್ಯ, ಸಾತಾರದ ಮರ್ದಾನಿಕೇಲ ತಾಲಿಮಿನಾ ತಂಡ ಒಳಗೊಂಡಂತೆ ವಿವಿಧ ವಾಧ್ಯ ಮೇಳಗಳು ಪಾಲ್ಗೊಂಡಿದ್ದವಲ್ಲದೇ ಮೈಜವಿಳಿಸುವಂತೆ ಮಾಡಿದವು. ಮೇರವಣಿಗೆಯುದ್ದಕ್ಕೂ ಕೆಸರಿ ದ್ವಜಗಳು ರಾರಾಜಿಸಿದವಲ್ಲದೇ ಜನರ ಕಣ್ಮನ ಸೇಳೆದವು.
    ಮದ್ಯಾಹ್ನ 2 ಗಂಟೆಗೆ ಛತ್ರಪತಿ ಶಿವಾಜಿ ಮಹಾರಾಜರ ವೃತ್ತದಲ್ಲಿ ಮೂರ್ತಿ ಪ್ರತಿಷ್ಠಾಪನೆಯ ಜೊತೆಗೆ ಕರ್ನಾಟಕ ಆಹಾರ ಮತ್ತು ನಾಗರಿಕ ಪೂರೈಕೆ ನಿಗಮದ ಅಧ್ಯಕ್ಷ ಶಾಸಕ ಎ.ಎಸ್.ಪಾಟೀಲ(ನಡಹಳ್ಳಿ) ಹಾಗೂ ನಾಡಿನ ಸಂತರಾದ ಶ್ರೀ ಖಾಸ್ಗತೇಶ್ವರ ಮಠದ ಶ್ರೀ ಸಿದ್ದಲಿಂಗ ದೇವರು, ಕೆಸರಟ್ಟಿಯ ಸೋಮಲಿಂಗ ಮಹಾಸ್ವಾಮಿಗಳು, ಗುಂಡಕನಾಳ ಹಿರೇಮಠದ ಶ್ರೀ ಗುರುಲಿಂಗ ಶಿವಾಚಾರ್ಯ ಮಹಾಸ್ವಾಮಿಗಳು, ಶಿವಭವಾನಿ ಮಂದಿರದ ಅರ್ಚಕರಾದ ವೇ.ಸಂತೋಷಬಟ್ ಜೋಶಿ ಅವರು ಮೂರ್ತಿ ಉದ್ಘಾಟನೆಯ ಜೊತೆಗೆ ಅನಾವರಣಗೊಳಿಸಿದರು.

ಹಿಂದೂ ಹೃದಯ ಸಾಮ್ರಾಟ ಛತ್ರಪತಿ ಶಿವಾಜಿ ಮಹಾರಾಜರ ಕಂಚಿತ ಪುಥ್ಥಳಿ ನಿರ್ಮಾಣದ ಮತ್ತು ಪ್ರತಿಷ್ಠಾಪನೆಯ ವೃತ್ತ ನಿರ್ಮಾಣದ ಸುಮಾರು 20 ಲಕ್ಷ ರೂ. ವೆಚ್ಚವನ್ನು ಶಾಸಕ ಎ.ಎಸ್.ಪಾಟೀಲ(ನಡಹಳ್ಳಿ) ಅವರು ವಹಿಸಿಕೊಳ್ಳುವದರ ಜೊತೆಗೆ ಹಿಂದೂ ಸಮಾಜ ಬಾಂದವರ ಸದಿಚ್ಚಯನ್ನು ಇಡೇರಿಸುವದರ ಜೊತೆಗೆ ಹೃದಯ ಮಂದಿರವನ್ನು ಗೆದ್ದಿದ್ದು ಪಟ್ಟಣದ ಮುಖ್ಯ ರಸ್ತೆಗೆ ಆಗಮಿಸುವ ಪ್ರತಿಯೊಬ್ಬರಿಗೂ ಶಿವಾಜಿ ಮಹಾರಾಜರ ದರ್ಶನದ ಭಾಗ್ಯ ದೊರೆಯಲಿದ್ದು ಇದರಿಂದ ಪಟ್ಟಣದ ಸೌಂದರ್ಯಕರಣಕ್ಕೆ ಇನ್ನಷ್ಟು ಮೆರಗು ಬಂದಂತಾಗಿದೆ ಅಲ್ಲದೇ ತಾಳಿಕೋಟೆ ಅಲ್ಲದೇ ಈ ಭಾಗದ ಎಲ್ಲ ಜನರ ಬಹುನಿರಿಕ್ಷೀತ ಶಿವಾಜಿ ಮಹಾರಾಜರ ಮೂರ್ತಿ ಪ್ರತಿಷ್ಠಾಪನೆಗೆ ಶಾಸಕ ಎ.ಎಸ್.ಪಾಟೀಲ(ನಡಹಳ್ಳಿ) ಅವರ ಪ್ರಯತ್ನದ ಫಲದಿಂದ ಜನರ ಹಾಗೂ ಸ್ವಾಭಿಮಾನಿ ಹಿಂದೂ ಸಮಾಜಬಾಂದವರ ಆಸೆಭಾವನೆಯೊಂದು ಇಡೇರಿದಂತಾಗಿದೆ ಅಲ್ಲದೇ ಹರ್ಷವನ್ನುಂಟು ಮಾಡಿದೆ.


 ತಾಳಿಕೋಟೆ ಭಾಗದ ಜನರ ಬಹುದಿನಗಳ ಆಸೆಭಾವನೆಯಾಗಿದ್ದ ಆಶ್ವಾರೂಢ ಛತ್ರಪತಿ ಶಿವಾಜಿ ಮಹಾರಾಜರ ಮೂರ್ತಿ ಪ್ರತಿಷ್ಠಾಪನೆಗೆ ಶಾಸಕ ಎ.ಎಸ್.ಪಾಟೀಲ(ನಡಹಳ್ಳಿ) ಅವರು ಎಲ್ಲ ರೀತಿಯಿಂದ ಸಹಕರಿಸುವದರ ಜೊತೆಗೆ ಹಿಂದೂ ಸಮಾಜ ಬಾಂದವರ ಆಶಾಭಾವನೆಗೆ ಸ್ಪಂದಿಸುವಂತಹ ಕಾರ್ಯ ಮಾಡಿದ್ದಾರೆ ಅವರಿಗೆ ಎಲ್ಲ ಜನರ ಪರವಾಗಿ ಕೃತಜ್ಞತೆ ಸಲ್ಲಿಸುತ್ತೇವೆ.

ಸಂಬಾಜಿ ವಾಡಕರ

     ಕ್ಷತ್ರೀಯ ಮರಾಠಾ ಸಮಾಜದ ಅಧ್ಯಕ್ಷರು

 ಅಖಂಡ ಭಾರತ ಹಿಂದೂಸ್ಥಾನವಾಗಬೇಕೆಂಬ ಕನಸ್ಸನ್ನು ಹೊತ್ತುಕೊಂಡು ಹೋರಾಡಿದ ಹಿಂದೂ ಹೃದಯ ಸಾಮ್ರಾಟ ಛತ್ರಪತಿ ಶಿವಾಜಿ ಮಹಾರಾಜರ ಕಂಚಿನ ಪುಥ್ಥಳಿ ನಿರ್ಮಾಣವಾಗಬೇಕೆಂಬ ಈ ಭಾಗದ ಜನರ ಆಸೆಭಾವನೆಯಂತೆ ಸುಮಾರು 20 ಲಕ್ಷ ರೂ. ವೆಚ್ಚದಲ್ಲಿ ಆಶ್ವಾರೂಢ ಛತ್ರಪತಿ ಶಿವಾಜಿ ಮಹಾರಾಜರ ಮೂರ್ತಿ ಪ್ರತಿಷ್ಠಾಪಿಸಿ ಲೋಕಾರ್ಪಣೆಗೊಳಿಸುವಂತಹ ಕಾರ್ಯವನ್ನು ಮಾಡಿದ್ದೇನೆ.                
                                                                           ಎ.ಎಸ್.ಪಾಟೀಲ(ನಡಹಳ್ಳಿ)

ಶಾಸಕರು ಮುದ್ದೇಬಿಹಾಳ ಕ್ಷೇತ್ರ