ಶಿವಾಜಿ ಮಹಾರಾಜರ ಪ್ರತಿಮೆ ಲೋಕಾರ್ಪಣೆ

ಜೇವರ್ಗಿ :ಫೆ.20:ತಾಲೂಕಿನ ನೀರಲಕೋಡ ಗ್ರಾಮದಲ್ಲಿ ಛತ್ರಪತಿ ಶಿವಾಜಿ ಮಹಾರಾಜರ ಜಯಂತಿ ಅಂಗವಾಗಿ ಛತ್ರಪತಿ ಶಿವಾಜಿ ಮಹಾರಾಜರ ನೂತನ ಮೂರ್ತಿ ಅನಾವರಣ ಪರಮಾಣು ಶಾಸಕ ಡಾಕ್ಟರ್ ಅಜಯಸಿಂಗ್ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದೆ.
ಹಿಂದೂ ಮುಸ್ಲಿಂ ಸಿಖ್ ಈಸಾಯಿ ಹಮ್ ಸಬ್ ಹೈ ಭಾಯಿ ಭಾಯಿ ಎಂದು ಹೇಳಿದರು

ಸ್ವಾಭಿಮಾನಿ ರಾಷ್ಟ್ರನಿರ್ಮಾಣಕ್ಕೆ ಹೋರಾಡಿದ ಛತ್ರಪತಿ ಶಿವಾಜಿ ಮಹಾರಾಜರು ಹಿಂದೂಸ್ಥಾನವನ್ನು ಒಗ್ಗೂಡಿಸಲು ಬಹುವಾಗಿ ಶ್ರಮಿಸಿದರು.ಕೊಂಕಣ ಭಾಗದಲ್ಲಿದ್ದ ಅನೇಕ ಕೋಟೆಗಳನ್ನು ಗೆದ್ದು ಕ್ರಮೇಣ ಇಡೀ ಪಶ್ಚಿಮಭಾರತವನ್ನು ತಮ್ಮ ಆಳ್ವಿಕೆಗೆ ತಂದರು.ಶಿವಾಜಿ ಮಹಾರಾಜರ ಶೌರ್ಯ, ಸಾಹಸ ರಾಷ್ಟ್ರಭಕ್ತ ಆಡಳಿತಗಾರರಿಗೆ ಎಂದೆಂದಿಗೂ ಪ್ರೇರಣಾದಾಯಿ.

ಈ ಸಂದರ್ಭದಲ್ಲಿ ಸೊನ್ನ ಮಠದ ಪೂಜ್ಯರಾದ ಶಿವಾನಂದ ಸ್ವಾಮಿಜಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ರುಕ್ಕುಂ ಪಟೇಲ್ ಇಜೇರಿ, ಪಕ್ಷದ ಹಿರಿಯ ಮುಖಂಡರಾದ ಕಾಶಿರಾಯಗೌಡ ಯಲಗೋಡ , ರಾಜಶೇಖರ್ ಸಿರಿ, ಮಹಾದೇವಪ್ಪ ನೀರಲಕೋಡ, ವೇಂಕೂಬರಾವ ವಾಗನಗೇರಾ ಹಾಗೂ ಮರಾಠ ಸಮಾಜ ಬಾಂದವರು,, ಗ್ರಾಮಸ್ಥರು ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.