ಶಿವಾಜಿ ಮಹಾರಾಜರ ಪ್ರತಿಮೆ ಅನಾವರಣ

ಹರಿಹರ.ಏ.೧೮; ವಿದೇಶಿ ಅಕ್ರಮಣಕಾರರಿಂದ ಭಾರತವನ್ನು ರಕ್ಷಿಸಿದ ಖ್ಯಾತಿ ಛತ್ರಪತಿ ಶಿವಾಜಿ ಮಹಾರಾಜರಿಗೆ ಸಲ್ಲುತ್ತದೆ ಎಂದು ಶಾಸಕ ಎಸ್.ರಾಮಪ್ಪ ಹೇಳಿದರು.ತಾಲ್ಲೂಕಿನ ಪಾಮೇನಹಳ್ಳಿ ಗ್ರಾಮದಲ್ಲಿ ಯಲ್ಲಮ್ಮ ದೇವಸ್ಥಾನ ಮುಂಭಾಗ ಛತ್ರಪತಿ ಶಿವಾಜಿ ಮಹಾರಾಜರ ಪ್ರತಿಮೆ ನಿರ್ಮಾಣ ಕಾಮಗಾರಿಗೆ ಗುದ್ದಲಿ ಪೂಜೆ ನೆರೆವೇರಿಸಿ ಅವರು ಮಾತನಾಡಿದರು.ಬ್ರಿಟೀಷರು, ಪೋರ್ಚಗಲ್ಲರು, ಫ್ರೆಂಚರು, ಮೊಘಲರು, ಮಂಗೋಲಿಯನ್ನರು ಸೇರಿದಂತೆ ಹತ್ತಾರು ವಿದೇಶಿಯರು ಭಾರತವನ್ನು ನೂರಾರು ವರ್ಷ ಆಳಿದರು. ಆಳುವ ಜೊತೆಗೆ ಇಲ್ಲಿನ ಅಪಾರ ಸಂಪತ್ತನ್ನು ಲೂಟಿ ಮಾಡಿ ಸಾಗಿಸಿದರು. ಇಂತಹ ವಿದೇಶಿ ಅಕ್ರಮಣಕಾರರ ವಿರುದ್ಧ ವೀರಾವೇಶದಿಂದ ಹೋರಾಡಿದ ಭಾರತದ ಆಡಳಿತಗಾರರಲ್ಲಿ ಶಿವಾಜಿ ಮಹಾರಾಜರು ಪ್ರಮುಖರಾಗಿದ್ದಾರೆಂದರು.ಛತ್ರಪತಿ ಶಿವಾಜಿ ಮಹಾರಾಜರ ಪ್ರತಿಮೆ ಈ ಗ್ರಾಮದಲ್ಲಿ ಸ್ಥಾಪಿಸುತ್ತಿರುವುದು ಶ್ಲಾಘನೀಯ. ಇದಕ್ಕಾಗಿ ಅಗತ್ಯ ಸಹಕಾರ ನೀಡುವುದಾಗಿ ಶಾಸಕರು ಭರವಸೆ ನೀಡಿದರು.
ನಂತರ ಶಾಸಕರನ್ನು ಗ್ರಾಮಸ್ಥರು ಸತ್ಕರಿಸಿದರು. ಕರ್ನಾಟಕ ಕ್ಷತ್ರಿಯ ಮರಾಠ ಪರಿಷತ್ತಿನ ಜಿಲ್ಲಾಧ್ಯಕ್ಷ ಜಿ.ಎಚ್.ಮರಿಯೋಜಿರಾವ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಲ್.ಬಿ.ಹನುಮಂತಪ್ಪ, ಸಾರಥಿ ಗ್ರಾಪಂ ಅಧ್ಯಕ್ಷೆ ಮಂಜಮ್ಮ ಕಠಾರಿ, ಉಪಾಧ್ಯಕ್ಷೆ ದ್ಯಾಮಮ್ಮ ಕಜರಿ, ಸದಸ್ಯರಾದ ಪಿ.ಎಸ್.ಹನುಮಂತಪ್ಪ, ಪದ್ಮಶಾಲಿ ರತ್ನಮ್ಮ, ಗ್ರಾಪಂ ಮಾಜಿ ಅಧ್ಯಕ್ಷ ಮಾರುತಿರಾವ್, ಸೇವಾದಳ ಜಿಲ್ಲಾ ಉಪಾಧ್ಯಕ್ಷ ಮಂಜುನಾಥ ಸಂಭೋಜಿ, ನಿವೃತ್ತ ಪಿಡಿಒ ಸ್ವಾಮಿಲಿಂಗಪ್ಪ, ಅಂಜಿನಪ್ಪ ಎಚ್., ಸೆಂಟ್ರಿಂಗ್ ಪರಸಪ್ಪ ಶ್ಯಾಮನೂರು, ಸಾರಥಿ ನಾಗರಾಜ್ ಸ್ವಾಮಿ ಹಾಗೂ ಗ್ರಾಮದ ಹಿರಿಯರಿದ್ದರು.