ಶಿವಾಜಿ ಮಹಾರಾಜರ ದೇಶಪ್ರೇಮ ಅನುಕರಣೀಯ

ಭಾಲ್ಕಿ:ಫೆ.20: ಶಿವಾಜಿ ಮಹಾರಾಜರ ದೇಶಪ್ರೇಮ ಪ್ರತಿಯೊಬ್ಬರಿಗೂ ಅನುಕರಣೀಯವಾಗಿದೆ ಎಂದು ಮುಖ್ಯಗುರು ಬಾಬು ಬೆಲ್ದಾಳ ಹೇಳಿದರು. ಪಟ್ಟಣದ ಗುರುಪ್ರಸಾದ ಸಂಯುಕ್ತ ಪ್ರೌಢ ಶಾಲೆಯಲ್ಲಿ ಸೋಮವಾರ ಆಯೋಜಿಸಿದ್ದ ಶಿವಾಜಿ ಮಹಾರಾಜರ ಜಯಂತಿ ಕಾರ್ಯಕ್ರಮದಲ್ಲಿ ಅವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಅವರು ಮಾತನಾಡಿದರು.
ತಾಯಿ ಜೀಜಾಬಾಯಿ ಅವರಿಂದ ಶಿವಾಜಿ ಅವರು ರಾಮಾಯಣ, ಮಹಾಭಾರತದಂತಹ ಕಥೆಗಳನ್ನು ಕೇಳಿ ಧೈರ್ಯ, ಸಾಹಸ ಬೆಳೆಸಿಕೊಂಡಿದ್ದರು. ದೇಶದ ಅಖಂಡತೆಗೆ ಶ್ರಮಿಸಿದ ಶಿವಾಜಿ ಅವರ ಆದರ್ಶ ವಿದ್ಯಾರ್ಥಿಗಳು ಅನುಸರಿಸಬೇಕು ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಶಿಕ್ಷಕರು, ವಿದ್ಯಾರ್ಥಿಗಳುಇದ್ದರು. ಸವಿತಾ ಭೂರೆ ನಿರೂಪಿಸಿದರು. ಸುಮಿತ ಬೀರಪ್ಪ ವಂದಿಸಿದರು.