ಶಿವಾಜಿ ಮಹಾರಾಜರು ಎಲ್ಲರ ಉದ್ಧಾರಕರು

ಭಾಲ್ಕಿ:ಫೆ.23:ಶ್ರೀ ಛತ್ರಪತಿ ಶಿವಾಜಿ ಮಹಾರಾಜರು ಎಲ್ಲ ಸಮುದಾಯದ ಉದ್ಧಾರಕರಾಗಿದ್ದರು ಎಂದು ಅರಣ್ಯ,ಜೈವಿಕ ಮತ್ತು ಪರಿಸರ ಸಚಿವರುಆದ ಜಿಲ್ಲಾ ಉಸ್ತುವಾರಿ ಮಂತ್ರಿ ಈಶ್ವರ ಖಂಡ್ರೆ ಹೇಳಿದರು.

ಭಾಲ್ಕಿ ಪಟ್ಟಣದ ರೇಲ್ವೆಗೇಟ್ ಹತ್ತಿರವಿರುವ ಶಿವಾಜಿ ವೃತ್ತದಲ್ಲಿ ಸಾರ್ವಜನಿಕ ಶಿವ ಜಯಂತಿ ಉತ್ಸವ ಸಮಿತಿ ವತಿಯಿಂದ ಹಮ್ಮಿಕೊಂಡ ಶ್ರೀ ಛತ್ರಪತಿ ಶಿವಾಜಿ ಮಹಾರಾಜರ 394ನೇ ಜಯಂತ್ಯುತ್ಸವ ಉದ್ಘಾಟಿಸಿ ಮಾತನಾಡಿದರು.ಭಾರತದ ಚರಿತ್ರೆಯಲ್ಲಿ ಶಿವಾಜಿ ಮಹಾರಾಜರ ಹೆಸರು ಅಗ್ರಪಂಕ್ತಿಯಲ್ಲಿದೆ. ತಾಯಿ ಜೀಜಾಮತಾ ಅವರ ಸಂಸ್ಕಾರದಿಂದ ಶಿವಾಜಿ ಮಹಾರಾಜರು ಚಿಕ್ಕ ವಯಸ್ಸಿನಲ್ಲಿಯೇ ಅದ್ಭುತ ಸಾಧನೆ ಮಾಡಿದ್ದಾರೆ.ಅವರ ಸಾಮ್ರಾಜ್ಯದಲ್ಲಿ ಮಹಿಳೆಯರಿಗೆ ಗೌರವದ ಸ್ಥಾನ ನೀಡಲಾಗುತ್ತಿತ್ತು.ಅವರ ಆದರ್ಶ ಆಡಳಿತ ಇಂದಿಗೂ ಮಾದರಿಯಾಗಿದೆ.ಗೆರಿಲ್ಲಾ ತಂತ್ರಗಾರಿಕೆಯಿಂದ ಶತೃಗಳನ್ನು ಸುಲಭವಾಗಿ ಸೋಲಿಸುತ್ತಿದ್ದರು.ಶಿವಾಜಿ ಮಹಾರಾಜರಿಗೂ ಕರ್ನಾಟಕ್ಕಕ್ಕೂ ಅವಿನಾವಭಾವ ಸಂಬಂಧವಿತ್ತು ಎಂದು ಬಹು ಮಾರ್ಮಿಕವಾಗಿ ನುಡಿದರು.
ಮಾಜಿ ಶಾಸಕ ಪ್ರಕಾಶ ಖಂಡ್ರೆ ಮಾತನಾಡಿ,ಶಿವಾಜಿ ಮಹಾರಾಜರು ಮಾನವೀಯತೆಗಾಗಿ ಹೋರಾಡಿದರು.ಅವರು ಸರ್ವ ಸಮುದಾಯದ ಏಳಿಗೆ ಬಯಸಿದ್ದರು.ಶಿವಾಜಿ ಮಹಾರಾಜರ ಜೀವನ ಚರಿತ್ರೆ ಇಂದಿನ ಯುವ ಪೀಳಿಗೆಗೆ ತಿಳಿಸಿಕೊಡುವುದು ಅಗತ್ಯವಾಗಿದೆ ಎಂದರು.ಮಾಜಿ ಶಾಸಕ ಎಮ್.ಜಿ.ಮುಳೆ ಮಾತನಾಡಿ,ದೇಶದ ಬೇರೆ ಬೇರೆ ರಾಜ್ಯಗಳಲ್ಲಿ ನಿರ್ಮಿಸಿದ ಮಾದರಿಯಲ್ಲಿ ಕರ್ನಾಟಕದ ಎಲ್ಲ ಭಾಗದಲ್ಲಿ ಶಿವಾಜಿ ಸ್ಮಾರಕಗಳು ನಿರ್ಮಿಸುವುದು ಅಗತ್ಯವಾಗಿದೆ ಎಂದು ತಿಳಿಸಿದರು.
ಸಮಾರಂಭದ ದಿವ್ಯಸಾನಿಧ್ಯ ಹ.ಬ.ಪ.ನಿವರ್ತಿ ಮಹಾರಾಜ ಹಲ್ಲಾಳಿಕರ್,ಹ.ಬ.ಪ.ನರಸಿಂಗರಾವ ಗುರುಜಿ ತೋರಣೆಕರ ಮಹಾರಾಜವಹಿಸಿ ಮಾತನಾಡಿದರು.
ಪ್ರಮುಖರಾದ ಹೀರಾಚಂದ ವಾಘಮರೆ,ಹಣಮಂತರಾವ ಚವ್ಹಾಣ,ಡಿಗಂಬರಾವ ಮಾನಕರಿ,ನಂದಕುಮಾರ ಸಾಳುಂಕೆ,ಡಾ.ದಿನಕರರಾವ ಮೋರೆ,ನಾಮದೇವರಾವ ಪವಾರ ,ದಯಾನಂದರಾವ ಸೂರ್ಯವಂಶಿ,ಯಾದವರಾವ ಕನಸೆ,ಬಾಬುರಾವ ಜೋಳದಾಪಕ್ಕೆ,ಸುಭಾಷರಾವ ಬಿರಾದಾರ,ಬನಸಿಲಾಲ್ ಬೊರಾಳೆ,ಸಂಗ್ರಾಮ ಜಾಧವ,ಕಿರಣಕುಮಾರ ಬಿರಾದಾರ,ಬಾಲಾಜಿ ವಾಡೆಕರ್,ಯಶವಂತ ಭೋಸ್ಲೆ,ಕೆಶವ ಸೂರ್ಯವಂಶಿ,ಸತೀಶ ಬಾಮನೆ,ಪ್ರತಾಪ ಪಾಟೀಲ್,ಗೋವಿಂದರಾವ ಬಿರಾದಾರ,ಆಶಿಸ ತಗರಖೆಡೆ,ಸುನೀಲಕುಮಾರ ಶಿಂದೆ,ಪಾಂಡುರಂಗ ಕನಸೆ,ಸತೀಶ ವಾಡಿಕರ್,ಸಂತೋಷ ತಗರಖೆಡೆ,ಸತೀóಶ ಪಾಟೀಲ ತೆಲಗಾಂವ,ಪಂಡಿತ ಶಿರೋಳೆ ಸೇರಿದಂತೆ ಅನೇಕ ಗಣ್ಯರು ಭಾವಹಿಸಿದ್ದರು.
ಡಿಸಿಸಿ ಬ್ಯಾಂಕ್ ನಿರ್ದೇಶಕರು ಹಾಗೂ ಶಿವ ಸಮಿತಿ ಅಧ್ಯಕ್ಷರಾದ ಅಶೋಕರಾವ ಸೋನಜಿ ಕಣಜಿಕರ್ ಅಧ್ಯಕ್ಷೀಯ ಭಾಷಣ ಮಾಡಿದರು.
ಸ್ವಾಗತ ಸಮಿತಿ ಅಧ್ಯಕ್ಷ ಕಿಶನರಾವ ಪಾಟೀಲ ಇಂಚೂರಕ್ ಸ್ವಾಗತಿಸಿದರು.ಶಿವ ಸಮಿತಿ ಗೌರವಾಧ್ಯಕ್ಷÀ್ಷ ಬಿಜೆಪಿ ಯುವಮುಖಂಡ ಜನಾರ್ಧನರಾವ ಬಿರಾದಾರ ಪ್ರಾಸ್ತಾವಿಕ ಮಾತನಾಡಿದರು.ನ್ಯಾಯವಾದಿ ಸಂದೀಪ ತೆಲಗಾಂವಕರ್ ಮತ್ತು,ಮುಖ್ಯಗುರು ತುಕಾರಾಮ ಮೋರೆ ಮತ್ತು ಪ್ರೌಢಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ದತ್ತಾತ್ರಿ ಕಾಟಕರ್ ನಿರೂಪಿಸಿದರು.ಯುವಮುಖಂಡ ಪಂಚಶೀಲ ಪಾಟೀಲ ವಂದಿಸಿದರು.
—————–
“ ಶ್ರೀ ಛತ್ರಪತಿ ಶಿವಾಜಿ ಮಹಾರಾಜರ ಜೀವನ ಮತ್ತು ಸಾಧನೆ ಕುರಿತು ಭಾಲ್ಕಿ ಪಟ್ಟಣದಲ್ಲಿ ಶಿವ ಸೃಷ್ಠಿ ನಿರ್ಮಿಸಲಾಗುವುದು.ಅವರ ಆದರ್ಶ ಆಡಳಿತ ನಮ್ಮೇಲ್ಲರಿಗೂ ಮಾದರಿಯಾಗಿದೆ.ಶಿವಾಜಿಯವರ ಆದರ್ಶ ತತ್ವಗಳು ನಾವೆಲ್ಲರೂ ಜೀವನದಲ್ಲಿ ಅಳವಡಿಸಿಕೊಂಡು ಶಾಂತಿ ನೆಮ್ಮದಿಯಿಂದ ಬದುಕಬೇಕು.ಗಡಿ ಭಾಗದಲ್ಲಿರುವ ಎಲ್ಲ ಮರಾಠಾ ಸಮುದಾಯದವರ ಸರ್ವಾಂಗೀಣ ವಿಕಾಸಕ್ಕಾಗಿ ಶ್ರಮಿಸಲಾಗುವುದು.”:ಈಶ್ವರ ಖಂಡ್ರೆ ಜಿಲ್ಲಾ ಉಸ್ತುವಾರಿ ಸಚಿವರು ಬೀದರ.