ಶಿವಾಜಿ ದೈರ್ಯ-ಶೌರ್ಯ-ದೇಶಭಕ್ತಿ ಮಕ್ಕಳಿಗೆ ತಿಳಿಸಿ-ಸಂದೀಪ ಪಾಟೀಲ್

ಸಿರವಾರ.ಫೆ.೧೯- ಶಿವಾಜಿ ಮಹಾರಾಜರು ಹೊಂದಿದ್ದ ಹೋರಾಟ ಮನೋಭಾವ, ತೋರಿದ ದೈರ್ಯ, ಶೌರ್ಯ ಯುವಕರಿಗೆ ಸ್ಪೂರ್ತಿಯಾಗಿದೆ. ಇಂದಿನ ಯುವ ಪಿಳಿಗೆಗೆ ಶಿವಾಜಿಯವರ ಶೌರ್ಯ,ದೈರ್ಯ, ದೇಶ ಪ್ರೇಮವನ್ನು ತಿಳಿ ಹೇಳಬೇಕಾಗಿದೆ ಎಂದು ಪ.ಪಂಚಾಯತಿ ಸದಸ್ಯ ಸಂದೀಪ ಪಾಟೀಲ್ ಹೇಳಿದರು.
ಪಟ್ಟಣ ಪಂಚಾಯತಿಯಲ್ಲಿ ಛತ್ರಪತಿ ಶಿವಾಜಿ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ, ಸದಸ್ಯರು ಅದಿಕಾರಿಗಳು ಪುಷ್ಪಾರ್ಪಣೆ ಮಾಡಿದರು. ನಂತರ ವಾರ್ಡ ನಂ ೦೬ ಸದಸ್ಯ ಹಾಜಿ ಚೌದ್ರಿ ಮಾತನಾಡಿ, ರಾಷ್ಟ್ರವನ್ನು ಪರಕೀಯರ ಆಡಳಿತದಿಂದ ಮುಕ್ತಗೊಳಿಸಿ ರಕ್ಷಿಸುವಲ್ಲಿ ಛತ್ರಪತಿ ಶಿವಾಜಿ ಮಹಾರಾಜರ ಕೊಡುಗೆ ಅಪಾರವಾದದಾಗಿದೆ. ಇಂತಹ ಮಹಾನ್ ವ್ಯಕ್ತಿಯು ಯಾವುದೇ ಒಂದು ಜನಾಂಗಕ್ಕೆ ಮಾತ್ರ ಸೀಮಿತಗೊಳ್ಳದೆ ರಾಷ್ಟ್ರನಾಯಕರಾಗಿ ಧರ್ಮ ರಕ್ಷಣೆಯಲ್ಲಿ ಪ್ರಮುಖ ಪಾತ್ರ ವಹಿಸಿ ತ್ಯಾಗ, ಬಲಿದಾನದ ಪರಿಣಾಮವಾಗಿ ಇಂದು ಸಮಾಜದಲ್ಲಿ ಜನರು ಶಾಂತಿ, ನೆಮ್ಮದಿಯಿಂದ ಜೀವನ ಸಾಗಿಸಲು ಸಾಧ್ಯವಾಗಿದೆ. ರಾಷ್ಟ್ರದ ಸಂಸ್ಕೃತಿಯನ್ನು ಉಳಿಸಿ ಬೆಳೆಸುವಲ್ಲಿ ಶಿವಾಜಿಯವರ ಶ್ರಮ ಅನಿಸ್ಮರಣೀಯವಾದುದಾಗಿದೆ. ಇಂತಹ ಮಹಾನ್ ವ್ಯಕ್ತಿಯ ಆದರ್ಶಗಳನ್ನು ಅಳವಡಿಸಿಕೊಂಡಲ್ಲಿ ಮಾತ್ರ ಗೌರವ ಸಲ್ಲಿಸಿದಂತಾಗಲಿದೆ ಎಂದರು. ಪ.ಪಂ. ಸದಸ್ಯರಾದ ಅಜೀತ್ ಹೊನ್ನಟಗಿ, ರಂಗನಾಥ ಭೋವಿ, ವೆಂಕಟೇಶ ದೊರೆ, ಚಂದ್ರಶೇಖರ ಹಡಪದ್, ಸಮುದಾಯ ಸಂಘಟಾಧಿಕಾರಿ ಹಂಪಯ್ಯ ಪಾಟೀಲ್, ಭೀಮರಾಯ, ಸಚೀನ್ ಚ್ಯಾಗಿ, ಚಾಂದಪಾಷ, ಸಾದು ಸೇರಿದಂತೆ ಇನ್ನಿತರರು.