
ಬೀದರ್:ಫೆ.20: ನಗರ ಸೇರಿದಂತೆ ಜಿಲ್ಲೆಯ ವಿವಿಧೆಡೆ ಭಾನುವಾರ ಛತ್ರಪತಿ ಶಿವಾಜಿ ಮಹಾರಾಜರ ಜಯಂತಿ ಆಚರಿಸಲಾಯಿತು.
ಜಿಲ್ಲಾಧಿಕಾರಿ ಕಚೇರಿ ಮುಂಭಾಗದಲ್ಲಿರುವ ಶಿವಾಜಿ ವೃತ್ತದಲ್ಲಿ ಶಿವಾಜಿ ಮಹಾರಾಜರ ಪ್ರತಿಮೆಗೆ ಮಾಲಾರ್ಪಣೆ ಮಾಡಲಾಯಿತು. ನಂತರ ಸಾರೋಟಿನಲ್ಲಿ ಶಿಜಾಜಿಯ ಭಾವಚಿತ್ರ ಇಟ್ಟು ಮೆರವಣಿಗೆ ಮಾಡಲಾಯಿತು.
ಮರಾಠಾ ಸಮುದಾಯದ ಯುವಕರು ಕೇಸರಿ ಟೊಪ್ಪಿಗೆ, ಶಲ್ಯ ಧರಿಸಿ, ಕೈಯಲ್ಲಿ ಭಗವಾ ಧ್ವಜ ಹಿಡಿದು ‘ಜಾನಬಾ ತುಕಾರಾಮ.., ಜಾನಬಾ ತುಕಾರಾಮ..’ ಎಂದು ಜಯಘೋಷ ಮೊಳಗಿಸಿದರು.
ಜಿಲ್ಲಾಧಿಕಾರಿ ಕಚೇರಿ ಮುಂಭಾಗದಿಂದ ಆರಂಭವಾದ ಮೆರವಣಿಗೆ ಹರಳಯ್ಯ ವೃತ್ತ, ಮೋಹನ ಮಾರ್ಕೆಟ್, ಗುದಗೆ ಆಸ್ಪತ್ರೆ ಮಾರ್ಗ, ರೋಟರಿ ವೃತ್ತದ ಮೂಲಕ ಪೂಜ್ಯ ಚನ್ನಬಸವ ಪಟ್ಟದ್ದೇವರು ಜಿಲ್ಲಾ ರಂಗ ಮಂದಿರ ತಲುಪಿ ಮುಕ್ತಾಯಗೊಂಡಿತು.
ಕೇಂದ್ರ ರಸಗೊಬ್ಬರ ಖಾತೆ ರಾಜ್ಯ ಸಚಿವ ಭಗವಂತ ಖೂಬಾ, ಶಾಸಕ ರಹಿಮ್ ಖಾನ್, ಬಂಡೆಪ್ಪ ಕಾಶೆಂಪುರ, ಜಿಲ್ಲಾಧಿಕಾರಿ ಗೋವಿಂದ ರೆಡ್ಡಿ, ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಚೆನ್ನಬಸವ ಲಂಗೋಟಿ, ಹೆಚ್ಚುವರಿ ಜಿಲ್ಲಾಧಿಕಾರಿ ಶಿವಕುಮಾರ ಶೀಲವಂತ, ಮರಾಠಾ ಸಮಾಜದ ಮುಖಂಡ ಮದನರಾವ್ ಬಿರಾದಾರ, ನಾರಾಯಣ ಗಣೇಶ, ಬಾಬುರಾವ್ ಕಾರಭಾರಿ, ಮಹೇಂದ್ರ ಶಿಂಘೆ, ಬಿಜೆಪಿ ಮುಖಂಡರಾದ ಸೂರ್ಯಕಾಂತ ನಾಗಮಾರಪಳ್ಳಿ, ಈಶ್ವರಸಿಂಗ್ ಠಾಕೂರ್, ಗುರುನಾಥ ಕೊಳ್ಳೂರ, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಗೀತಾ ಪಂಡಿತ ಚಿದ್ರಿ, ಜೆ.ಡಿ.ಎಸ್ ಜಿಲ್ಲಾ ಘಟಕದ ಅಧ್ಯಕ್ಷ ರಮೇಶ ಪಾಟೀಲ ಸೋಲಪುರ, ಶಿವಶರಣಪ್ಪ ವಾಲಿ ಪಾಲ್ಗೊಂಡಿದ್ದರು.