ಶಿವಾಜಿಯ ಧೈರ್ಯ, ನಾಯಕತ್ವ ಗುಣ ಅನುಸರಣೆ ಅಗತ್ಯ

ಮೈಸೂರು: ಏ.05:- ಪ್ರಬಲರಾಗಿ ಮೆರೆಯುತ್ತಿದ್ದ ಮೊಗಲರನ್ನು ಸದೆಬಡಿದ ಕೀರ್ತಿ ಛತ್ರಪತಿ ಶಿವಾಜಿ ಮಹಾರಾಜ್‍ಗೆ ಸಲ್ಲುತ್ತದೆ ಎಂದು ನಗರಪಾಲಿಕ ಸದಸ್ಯರಾದ ಪ್ರಮೀಳಾ ಭರತ್ ಅಭಿಪ್ರಾಯಪಟ್ಟರು
ನಗರದ ಚಾಮುಂಡಿ ಬೆಟ್ಟದ ಪಾದದಲ್ಲಿರುವ ಅಂಬಾಭವಾನಿ ಟ್ರಸ್ಟ್ ವತಿಯಿಂದ ಛತ್ರಪತಿ ಶಿವಾಜಿ ಮಹಾರಾಜ್ ಪುಣ್ಯ ಸ್ಮರಣೆ ಅಂಗವಾಗಿ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಮಾತನಾಡಿದ ಅವರು ಬಾಲ್ಯದಲ್ಲಿ ತಾಯಿ ಜೀಜಾಬಾಯಿ ನೆರವಿನಿಂದ ಉತ್ತಮ ಶಿಕ್ಷಣ ಪಡೆಯುವುದರ ಜತೆಗೆ ಸಂಸ್ಕೃತಿ, ಆಚಾರ ವಿಚಾರಗಳನ್ನು ಮೈಗೂಡಿಸಿ ಕೊಂಡು, ಗುರು ದಾದಾಜಿಕೊಂಡ ದೇವನ ಗುರುಕುಲದಲ್ಲಿ ಯುದ್ಧ ಕೌಶಲ್ಯವನ್ನು ಕಲಿತು ಮೊಗಲರನ್ನು ದಕ್ಷಿಣ ಭಾರತದತ್ತ ಬರಲು ಅವಕಾಶ ನೀಡದೇ ಹಿಮ್ಮೆಟಿಸಿದ ಕೀರ್ತಿ ಶಿವಾಜಿ ಮಹಾರಾಜರಿಗೆ ಸಲ್ಲುತ್ತದೆ ಎಂದರು
ಅಂಬಾಭವಾನಿ ಸಮಾಜದ ಅಧ್ಯಕ್ಷರಾದ ಸವಿತಾ ಘಾಟ್ಕೆ ಮಾತನಾಡಿ ಇಂದಿನ ಯುವ ಸಮೂಹ ಸಮಾಜದ ಕಷ್ಟ ಕಾರ್ಪಣ್ಯಗಳಿಗೆ ಸ್ಪಂದಿಸುವ ಮಹತ್ವದ ಹೊಣೆಗಾರಿಕೆ ಯಿದೆ. ಅವನ್ನು ನಿಭಾಯಿಸುವಲ್ಲಿ ಶಿವಾಜಿ ಮಹಾರಾಜರ ಧೈರ್ಯ ಮತ್ತು ನಾಯಕತ್ವ ಗುಣಗಳ ಅಳವಡಿಕೆಗೆ ಮುಂದಾಗಬೇಕು ಎಂದು ಸಲಹೆ ನೀಡಿದರು.
ಇದೇ ಸಂದರ್ಭದಲ್ಲಿ ನಗರಪಾಲಿಕ ಸದಸ್ಯರಾದ ಪ್ರಮೀಳಾ ಭರತ್, ಅಂಬಾಭವಾನಿ ಸಮಾಜದ ಅಧ್ಯಕ್ಷರಾದ ಸವಿತಾ ಘಾಟ್ಕೆ , ಭಾಗ್ಯವತಿ ,ಲತಾ, ಮಂಗಳ, ಅಂಬಿಕಾ ,ಪ್ರಮೀಳಾ , ವನಿತಾ , ಶಶಿ, ಪ್ರೇಮ, ಸುಷ್ಮಾ, ಅನಿತಾ ಹಾಗೂ ಇನ್ನಿತರರು ಭಾಗವಹಿಸಿದ್ದರು