ಶಿವಾಜಿಯ ದೇಶ ಪ್ರೇಮ ಪ್ರತಿಯೊಬ್ಬರು ಬೆಳೆಸಿಕೊಳ್ಳಬೇಕು


ಸಂಜೆವಾಣಿ ವಾರ್ತೆ
ಸಂಡೂರು ಏ:23: ಸ್ವಾಭಿಮಾನಿ ರಾಷ್ಟ್ರ ನಿರ್ಮಾಣಕ್ಕೆ ಹೋರಾಡಿದ ಛತ್ರಪತಿ ಶಿವಾಜಿ ಮಹಾರಾಜರು ಹಿಂದುಸ್ಥಾನವನ್ನು ಒಗ್ಗೂಡಿಸಲು ಬಹುವಾಗಿ ಶ್ರಮಿಸಿದರು. ಕೊಂಕಣ ಭಾಗದಲ್ಲಿದ್ದ ಅನೇಕ ಕೋಟೆಗಳನ್ನು ಗೆದ್ದು ಕ್ರಮೇಶ ಇಡೀ ಪಶ್ಚಿಮ ಭಾರತವನ್ನು ತಮ್ಮ ಆಳ್ವಿಕೆಗೆ ಕರೆ ತಂದರು. ಶಿವಾಜಿ ಮಹರಾಜರ ಶೌರ್ಯ ಸಾಹಸ ರಾಷ್ಟ್ರಭಕ್ತ ಆಡಳಿತಗಾರರಿಗೆ ಎಂದೆಂದಿಗೂ ಪ್ರೇರಣದಾಯಕವಾಗಿದೆ. ಶಿವಾಜಿ ಮಹರಾಜರ ಹೆಸರು ಭಾರತದ ಚರಿತ್ರೆಯಲ್ಲಿ ಅಗ್ರ ಪಂಕ್ತಿಯಲ್ಲಿ ನಿಲ್ಲುವಂತದ್ದಾಗಿದೆ. ಅಪ್ರತಿಮ ಯೋಧರೆನಿಸಿಕೊಂಡು ಹದಿಹರೆಯದಲ್ಲೇ ಯುದ್ದಭೂಮಿಯಲ್ಲಿ ಪರಾಕ್ರಮ ಪ್ರದರ್ಶಿಸಿ ಮರಾಠ ರಾಜ್ಯ ಸ್ಥಾಪಿಸಿದ ಶಿವಾಜಿ ಮಹಾರಾಜರು ಸ್ವಾಭಿಮಾನ ನಿರ್ಮಾಣದ ಕನಸನ್ನು ಕಂಡರು. ಶಿವಾಜಿ ಮಹರಾಜರ ಕುಟುಂಬದ ತಾಯಿ ಬೇರು ಕನ್ನಡ ನಾಡಿನಲ್ಲಿದೆ. ಶಿವಾಜಿ ಮಹರಾಜರಿಗೆ ಕನ್ನಡ ಭೂಮಿ ಪ್ರೇರಣ ಸ್ಥಳವಾಗಿತ್ತು. ಕರ್ನಾಟಕಕ್ಕೂ ಮರಾಠಿಗರಿಗೂ ರಾಜಕೀಯ ಒಡನಾಟ ಆರಂಭ 17ನೇ ಶತಮಾನದಲ್ಲಿ ಶಿವಾಜಿ ಮಹರಾಜರ ದೇಶಪ್ರೇಮವನ್ನು ಪ್ರತಿಯೊಬ್ಬರು ಬೆಳೆಸಿಕೊಳ್ಳಬೇಕಾಗಿದೆ ಎಂದು ಮರಾಠ ಸಮಾಜದ ಅಧ್ಯಕ್ಷ ಮಾರುತಿ ರಾವ್ ಎಂ. ಭೊಸ್ಲೆ ತಿಳಿಸಿದರು.
ಅವರು ಪಟ್ಟಣದ ಮರಾಠ ಸಮಾಜದ ಅಂಬಾ ಭವಾನಿ ಕಲ್ಯಾಣ ಮಂಟಪದಲ್ಲಿ ಶಿವಾಜಿ ಮಹರಾಜರ ಜಯಂತಿಯನ್ನು ಸರಳವಾಗಿ ಆಚರಿಸಿ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಮಾತನಾಡಿದರು. 12ನೇ ವಯಸ್ಸಿನ ವರೆಗೆ ಬೆಂಗಳೂರಿನಲ್ಲಿ ವಾಸವಿದ್ದ ಶಿವಾಜಿಗೆ ಆರಂಭಿಕ ಶಿಕ್ಷಣವನ್ನು ಕೊಟ್ಟರು. ಅಣ್ಣ ಸಾಂಬಾಜಿ ನಂತರ ಶಿವನೇರಿ ದುರ್ಗಕ್ಕೆ ಹಿಂತುರಿಗಿದ ಮಹರಾಜರಿಗೆ ಪೂರ್ಣ ಪ್ರಮಾಣದ ಯುದ್ದ ಕೌಶಲ್ಯವನ್ನು ಧಾರೆಗೆ ಎರೆದವರು ರಾಜಾಜಿ ಕೊಂಡದೇವರು. ಎಳೆ ವಯಸ್ಸಿನಲ್ಲಿ ತಾಯಿ ಜೀಜಾಬಾಯಿ ಇಂದ ಜೀವನ ಮೌಲ್ಯಗಳ ಶಿಕ್ಷಣ ಪಡೆದ ಮಹರಾಜರು ರಾಮದಾಸರ ಭಕ್ತರಾಗಿದ್ದರು. 17ನೇ ಶತಮಾನದಲ್ಲಿ ಶಿವಾಜಿ ಪೂರ್ವ ಭಾರತದಲ್ಲಿ ರಾಜ್ಯಭಾರ ಮಾಡುತ್ತಿದ್ದ, ಓರ್ವ ರಾಜನಿಗೆ ಬೇಕಾದ ಎಲ್ಲಾ ಯುದ್ದ ಕಲೆಗಳನ್ನು ಜೀಜಾಬಾಯಿ ಯವರು ತನ್ನ ಮಗನಿಗೆ ಕಲಿಸಿದರು. ಅಮಭಾ ಭವಾನಿ ಆಶಿರ್ವಾದ ತಾಯಿ ಜೀಜಾಬಾಯಿ ಗುರು ರಾಮದಾಸರ ಮಾರ್ಗಧರ್ಶನದಂತೆ ಶಿವಾಜಿ ಆದರ್ಶ ರಾಜರಾರದರು. ಶಿವಾಜಿ ಮಹರಾಜರು ಆದರ್ಶ ರಾಜ್ಯವನ್ನು ಸ್ಥಾಪಿಸಿದರು ಎಂದು ಭೊಸ್ಲೆ ಯವರು ತಿಳಿಸಿದರು. ಈ ಸಂದರ್ಭದಲ್ಲಿ ಸಮಾಜದ ಮುಖಂಡರಾದ ಖಂಡೋಜಿರಾವ್ ವೆಂಕಟ್ ಕುಮಾರ್, ಸುಬ್ರಮಣ್ಯ ಘರ್ಪಡೆ ಶೆಡೆಕರ್ ಶಿಂದೇ, ಈರೇಶ ಸಿಂಧೆ ಡಾ. ನಾರಾಯಣಿ ಮೊರಿ ಕುಮಾರಸ್ವಾಮಿ ಯಂಕಣ್ಣ, ವಿಶ್ವನಾಥ, ಜಿಜಾಬಾಯಿ ಮಹಿಳಾ ಮಂಡಳಿ ಅಧ್ಯಕ್ಷೆ ಶಕುಂತಲಮ್ಮ ರಾಜೇಶ್ವರಿ ಚೌಹಾನ್ ರೂಪ ಚೌಹಾನ್ ಹನುಮಂತರಾವ್ ಬೊಯಿಟಿ ಶಾರದಮ್ಮ ಶಿಂಧೆ ರಮೇಶ ಶಿಂಧೇ ಅಲ್ಲದೇ ಹಲವಾರು ಮಹಾನೀಯರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.