ಶಿವಾಚಾರ್ಯ ಹಾಲಸ್ವಾಮೀಜಿಯವರ ಪುಣ್ಯಾರಾಧನೆ

ನ್ಯಾಮತಿ.ಏ.೨೦; ನ್ಯಾಮತಿ ತಾಲೂಕಿನ ಕೋಡಿಕೊಪ್ಪ ಗ್ರಾಮದ ಶ್ರೀ ಸದ್ಗುರು ಶಿವಯೋಗಿ ಹಾಲಸ್ವಾಮೀಜಿಯ ಕತೃಗದ್ದುಗೆಗೆ , ಶ್ರೀಮುರಡಬಸವೇಶ್ವರ ಸ್ವಾಮಿಯ ಶಿಲಾಮೂರ್ತಿಗೆ ಮಹಾರುದ್ರಾಭಿಷೇಕ , ಬಿಲ್ವಾರ್ಚನೆ , ಹಾಗೂ ಸದ್ಗುರು ಶಿವಯೋಗಿ ವಿಶ್ವಾರಾಧ್ಯ ಹಾಲಸ್ವಾಮೀಜಿ , ಶ್ರೀ ವಿಶ್ವೇಶ್ವರ ಶಿವಾಚಾರ್ಯ ಹಾಲಸ್ವಾಮೀಜಿಯವರ ಪುಣ್ಯಾರಾಧನೆ ಕಾರ್ಯಕ್ರಮ  ನಡೆಯಿತು.ಹೊನ್ನಾಳಿ ಎಂ.ಎಸ್.ಶಾಸ್ತಿçಹೊಳೆಮಠ ಪುರೋಹಿತ್ಯದಲ್ಲಿ ಗಂಗಾಪೂಜಾ , ಶ್ರೀ ಗಣಪತಿ , ಪಂಚಕಳಸ , ಶ್ರೀ ರುದ್ರ ಕಳಸ ಪೂಜಾ ನಡೆದು ಶ್ರೀ ಸದ್ಗುರು ಶಿವಯೋಗಿ ಹಾಲಸ್ವಾಮೀಜಿಯ ಕತುÈðಗದ್ದುಗೆಗೆ , ಶ್ರೀಮುರಡಬಸವೇಶ್ವರ ಸ್ವಾಮಿಯ ಶಿಲಾಮೂರ್ತಿಗೆ ಮಹಾರುದ್ರಾಭಿಷೇಕ , ಬಿಲ್ವಾರ್ಚನೆ , ಮಹಾಮಂಗಳಾರತಿ ಕಾರ್ಯಕ್ರಮಗಳು ನಡೆದು ರಾಂಪುರ ಕ್ಷೇತ್ರದ ಶ್ರೀಸದ್ಗುರು ಶಿವಯೋಗಿ ವಿಶ್ವಾರಾಧ್ಯ ಹಾಲಸ್ವಾಮೀಜಿ , ಶ್ರೀ ವಿಶ್ವೇಶ್ವರ ಶಿವಾಚಾರ್ಯ ಹಾಲಸ್ವಾಮೀಜಿಯವರ ಭಾವಚಿತ್ರಗಳ ಅನಾವರಣ ಹಾಗೂಪುಣ್ಯಾರಾಧನೆ ಕಾರ್ಯಕ್ರಮಗಳು ಜರುಗಿದವು ಪೂಜಾ ಕಾರ್ಯಕ್ರಮದಲ್ಲಿ ಭಾಗವಹಿಸಿದ ನೂರಾರು ಭಕ್ತರು ಹಣ್ಣು ಕಾಯಿ ಅರ್ಪಿಸಿ ದರ್ಶನ ಪಡೆದರು. ಅನ್ನ ಸಂತರ್ಪಣೆಯ ವ್ಯವಸ್ಥೆ ಮಾಡಲಾಗಿತ್ತು.ಪೂಜಾ ಕಾರ್ಯಕ್ರಮದಲ್ಲಿ ಗ್ರಾಮದ ಮುಖಂಡರಾದ ಜಿ.ಶಿವಪ್ಪ , ಕೆ.ಜಿ. ಮಹೇಶ್ವರಪ್ಪ , ಕೆ.ಯೋಗೆಶಪ್ಪ ,ಎಚ್.ಎಸ್.ಶಿವಪ್ಪ , ಕೆ.ಜಿ.ರುದ್ರೇಶ , ಪೂಜಾರಿ ಹಾಲಪ್ಪ , ಎಸ್.ಚನ್ನಪ್ಪ , ಎಸ್.ರುದ್ರಪ್ಪ , ಹಾಲೇಶಪ್ಪ ,ರಾಜಶೇಖರ್ , ಎಸ್.ಪರಮೇಶ್ವರಪ್ಪ , ಸಿದ್ದೇಶ್ , ಚನ್ನೇಶ್ , ಹಾಲೇಶ್ , ಮಹೇಶ್ , ಗಿರೀಶ್ , ನಿರಂಜನ, ಲೊಕೇಶ್ ಪ್ರಶಾಂತ ಸೇರಿದಂತೆ ನೂರಾರು ಭಕ್ತರು ಭಾಗವಹಿಸಿದರು.